ಬ್ರೇಕಿಂಗ್ ನ್ಯೂಸ್
18-03-21 11:38 am Source: MYKHEL ಕ್ರೀಡೆ
ಚಿಕ್ಕಮಗಳೂರು: ಸಾಧನೆಗೆ ಗುರಿ ಅಷ್ಟೇ ಮುಖ್ಯ, ವಯಸ್ಸಲ್ಲ ಎಂಬುದಕ್ಕೆ ಇಲ್ಲೊಬ್ಬರು ಅಕ್ಷರಶಃ ಉದಾಹರಣೆಯಾಗಿದ್ದಾರೆ. ಅದರಲ್ಲೂ ಇವರು ಸಾಧನೆಗೆ ಆಯ್ದುಕೊಂಡ ಕ್ಷೇತ್ರ ಕ್ರೀಡೆ. ವಯಸ್ಸು ಮಹತ್ವದ ಪಾತ್ರ ವಹಿಸುವ ಕ್ಷೇತ್ರದಲ್ಲಿ ತನ್ನ ಕನಸನ್ನು ನನಸು ಮಾಡಿಯೇ ತೀರುತ್ತೇನೆ ಎಂದು ಹಠಕಟ್ಟಿ ನಿಂತವರು ಚಿಕ್ಕಮಗಳೂರು ಜಿಲ್ಲೆಯ ಹಿರೇಮಗಳೂರಿನ 65 ವರ್ಷದ ನಿಂಗಪ್ಪ ಅವರು. ನಿವೃತ್ತ ಸರ್ಕಾರಿ ನೌಕರರಾದ ನಿಂಗಪ್ಪ ನಿವೃತ್ತಿ ಜೀವನದ ಇಳಿ ವಯಸ್ಸಿನಲ್ಲಿ ಕ್ರೀಡೆಯಲ್ಲಿ ಸಾಧನೆಗೈದು ಕಾಫಿನಾಡಿಗೆ ಕೀರ್ತಿ ತಂದುಕೊಡುವ ಜೊತೆಗೆ ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎಂಬ ಅದೆಷ್ಟೋ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.
ಅಥ್ಲೆಟಿಕ್ಸ್ ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗೆಲ್ಲುವ ಹಂಬಲವನ್ನಿಟ್ಟುಕೊಂಡು ವೃತ್ತಿ ಜೀವನದಿಂದಲೂ ಸತತ ಪ್ರಯತ್ನ ಮಾಡುತ್ತ ನಿವೃತ್ತಿಯ ನಂತರವೂ ಅದೇ ದಾರಿಯಲ್ಲಿ ಶ್ರಮಿಸುತ್ತಿದ್ದು ಇಟ್ಟ ಗುರಿಯನ್ನು ಮುಟ್ಟದೇ ಧಣಿಯಬಾರದು ಎಂಬ ಒತ್ತಾಸೆಯೊಂದಿಗೆ ಛಲ ಬಿಡದೇ ತನ್ನ 65ನೇ ವಯಸ್ಸಿನಲ್ಲಿಯೂ ಕಠಿಣ ಅಭ್ಯಾಸ ಮಾಡಿ ಕ್ರೀಡಾಸ್ಪೂರ್ತಿ ಮೆರೆಯುವ ಮೂಲಕ ರಾಜ್ಯ ಮಟ್ಟದಲ್ಲಿ 3 ಪದಕ ಗೆಲ್ಲುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪಾಕ್ ಫೈಟರ್ ಸೋಲಿಸಿದ ಬೆಂಗಳೂರಿನ ಮೊಹಮ್ಮದ್ ಫರಾದ್ಗೆ ಸನ್ಮಾನ ಹಲವು ವರ್ಷಗಳ ಕನಸು ಹೊತ್ತ ನಿಂಗಪ್ಪ ಮಾರ್ಚ್ 13, 14 ರಂದು ಬೆಂಗಳೂರಿನಲ್ಲಿ ನಡೆದ ಈ ಬಾರಿಯ ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಆಯೋಜಿಸಿದ ಎರಡನೇ ಕರ್ನಾಟಕ ಸ್ಟೇಟ್ ಮಾಸ್ಟರ್ಸ್ ಗೇಮ್ಸ್_2021 ರಲ್ಲಿ 65 ವರ್ಷದ ಮೇಲ್ಪಟ್ಟ ವಯೋಮಿತಿಯವರ ವಿಭಾಗದಲ್ಲಿ 200, 400 ಮೀಟರ್ ಓಟ, ಹಾಗೂ ಶಾಟ್ ಫುಟ್ನಲ್ಲಿ ಪ್ರಥಮ ಸ್ಥಾನಗಳಿಸುವ ಮೂಲಕ ಬಂಗಾರದ ಪದಕ ಗೆದ್ದು, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅಗ್ನಿಶಾಮಕ ಇಲಾಖೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ನಿವೃತ್ತಿಹೊಂದಿರುವ ನಿಂಗಪ್ಪ ಸತತ 30 ವರ್ಷಗಳ ಕಾಲ ಬಿಜಾಪುರ, ಗದಗ್, ಚಿತ್ರದುರ್ಗ, ಬೇಲೂರು ಹಾಗೂ ಮೂಡಿಗೆರೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ನಂತರವೂ ಕ್ರೀಡೆಯಲ್ಲಿ ಆಸಕ್ತಿ ಬೆಳಸಿಕೊಂಡು ವಯಸ್ಕರ ಕ್ರೀಡಾಕೂಟದಲ್ಲಿ ಬಾಗಿಯಾಗಿ ಪ್ರಶಸ್ತಿ ಗೆಲ್ಲುವ ಮೂಲಕ ಜಿಲ್ಲೆಗೆ ಗೌರವ ತಂದುಕೊಟ್ಟಿದ್ದಾರೆ. ತನ್ನ 65 ವರ್ಷದ ವಯಸ್ಸಿನಲ್ಲೂ ನಿಂಗಪ್ಪನವರು ಪ್ರತಿನಿತ್ಯ 4 ಗಂಟೆ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಪ್ರತಿನಿತ್ಯ ಬೆಳಿಗ್ಗೆ ಎರಡು ಗಂಟೆ ಅಭ್ಯಾಸ ಹಾಗು ಸಂಜೆ 2 ಗಂಟೆ ಅಭ್ಯಾಸ ಮಾಡುವ ಇವರು ಈಗಲೂ ಮಕ್ಕಳೊಡನೆ ಕೂಡಿ ಮಕ್ಕಳಿಗೆ ಸಮಾನವಾಗಿ ಅಭ್ಯಾಸ ನಿರತರಾಗಿರುತ್ತಾರೆ. ಹಲವು ವರ್ಷಗಳಿಂದ ಈ ಕ್ರೀಡಾಕೂಟದಲ್ಲಿ ಭಾವಹಿಸುತ್ತಿರುವ ನಿಂಗಪ್ಪನವರ ಕನಸು ಈ ಬಾರಿಯ ಕ್ರೀಡಾಕೂಟದಲ್ಲಿ ನನಸಾಗಿದೆ. ಮಂಗಳೂರಿನ ಸುಭಾಶ್ ಎಂಬುವರು ಪ್ರತಿ ವರ್ಷ 100, 200, 400 ಮೀಟರ್ ಓಟದಲ್ಲಿ ಭಾಗವಹಿಸಿ ಜಯಶಾಲಿಯಾಗುತ್ತಿದ್ದರು. ಅವರನ್ನು ಒಮ್ಮೆ ಸೋಲಿಸಬೇಕು ಎಂದು ಹಠಹಿಡಿದ ಇವರು ಕ್ರೀಡಾಸ್ಪೂರ್ತಿಯಿಂದ ನಿರಂತರವಾಗಿ ಅಭ್ಯಾಸ ಮಾಡುತ್ತಲೇ ಬಂದಿದ್ದು, ಈ ಬಾರಿ ಅವರನ್ನು 200 ಮೀಟರ್ ಓಟದಲ್ಲಿ ಹಿಂದಿಕ್ಕುವ ಮೂಲಕ ತನ್ನ ಕನಸನ್ನು ನನಸು ಮಾಡಿದ್ದಾರೆ.
ಲಾಂಗ್ಜಂಪ್ನಲ್ಲಿ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಕೇರಳದ ಶ್ರೀಶಂಕರ್ ತನ್ನೆದೆಯ ಮೇಲೆ ಭಾರತ ಎಂದು ಬರೆದಿರುವ ಜರ್ಸಿಯನ್ನು ತೊಟ್ಟು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ದೇಶಕ್ಕೆ ಪ್ರಶಸ್ತಿ ತಂದುಕೊಡಬೇಕು ಎಂಬುದು ಇವರ ಜೀವನದ ಕನಸು. ಈಗಾಗಲೇ ಹಲವು ಬಹುಮಾನ ಗೆದ್ದಿರುವ ಇವರು ಒಮ್ಮೆ ರಾಷ್ಟ್ರಮಟ್ಟದಲ್ಲೂ ಗೆದ್ದು ಆಸ್ಟ್ರೇಲಿಯಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟಕ್ಕೂ ಆಯ್ಕೆಯಾಗಿದ್ದರು. ಆದರೆ ಆರ್ಥಿಕ ಸಮಸ್ಯೆಯಿಂದಾಗಿ ಆ ಕನಸು ನನಸಾಗಲು ಸಾಧ್ಯವಾಗಿರಲಿಲ್ಲ.
ಆ ಕನಸನ್ನು ಮತ್ತೊಮ್ಮೆ ನನಸು ಮಾಡಿಕೊಳ್ಳುವ ಕಾಲ ಬಂದಿದೆ. ಈಗಾಗಲೇ ರಾಜ್ಯಮಟ್ಟದಲ್ಲಿ ಗೆದ್ದಿರುವ ಇವರು ಮುಂದಿನ ಮೇ ಅಥವಾ ಜೂನ್ ನಲ್ಲಿ ಹೈದ್ರಾಬಾದ್ನಲ್ಲಿ ನಡೆಯುವ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಬಾರಿ ರಾಷ್ಟ್ರಮಟ್ಟದಲ್ಲಿ ಗೆದ್ದಿ ಅಂತರ್ರಾಷ್ಟ್ರೀಯ ಮಟ್ಟಕ್ಕೂ ಆಯ್ಕೆಯಾಗುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದು ಮತ್ತಷ್ಟು ಕಸರತ್ತು ಆರಂಭಿಸಲು ಸಜ್ಜಾಗಿದ್ದಾರೆ.
This News Article Is A Copy Of MYKHEL
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm