ಬ್ರೇಕಿಂಗ್ ನ್ಯೂಸ್
15-03-21 04:40 pm source: MYKHEL ಕ್ರೀಡೆ
ಗೋವಾ: ಟೀಮ್ ಇಂಡಿಯಾದ ಪ್ರಮುಖ ವೇಗಿ, ಐಪಿಎಲ್ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ನ ಪ್ರಮುಖ ಬೌಲರ್ ಜಸ್ಪ್ರೀತ್ ಬೂಮ್ರಾ ತನ್ನ ಬದುಕಿನ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ. ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಮತ್ತು ಬೂಮ್ರಾ ವಿವಾಹ ಗೋವಾದಲ್ಲಿಂದು (ಮಾರ್ಚ್ 15) ಅದ್ದೂರಿಯಾಗಿ ನೆರವೇರಿದೆ. ಖಾಸಗಿ ಸಮಾರಂಭದಲ್ಲಿ ಬೂಮ್ರಾ-ಸಂಜನಾ ಒಂಟಿಯಿಂದ ಜಂಟಿ ಜೀವನಕ್ಕೆ ಬದಲಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧ ಈ ಅಂತರದಲ್ಲಿ ಸರಣಿ ಗೆದ್ದರೆ ಭಾರತ ವಿಶ್ವ ನಂ.1 ಟಿ20 ತಂಡವಾಗಲಿದೆ! ಲಭ್ಯ ಮಾಹಿತಿಯ ಪ್ರಕಾರ ಜಸ್ಪ್ರೀತ್ ಬೂಮ್ರಾ-ಸಂಜನಾ ಗಣೇಶನ್ ವಿವಾಹ ಪೂರ್ವಾಚರಣೆಗಳು ಗೋವಾದಲ್ಲಿ ಭಾನುವಾರ (ಮಾರ್ಚ್ 14) ನೆರವೇರಿದೆ. ಮದುವೆ ಕಾರ್ಯಕ್ರಮವನ್ನು ಸೋಮವಾರ (ಮಾರ್ಚ್ 15) ಇಟ್ಟುಕೊಳ್ಳಲಾಗಿತ್ತು. ಅಂದ್ಹಾಗೆ ಮದುವೆಯ ಫೋಟೋಗಳನ್ನು ಬೂಮ್ರಾ ತನ್ನ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.
“Love, if it finds you worthy, directs your course.”
— Jasprit Bumrah (@Jaspritbumrah93) March 15, 2021
Steered by love, we have begun a new journey together. Today is one of the happiest days of our lives and we feel blessed to be able to share the news of our wedding and our joy with you.
Jasprit & Sanjana pic.twitter.com/EQuRUNa0Xc
ಪ್ರಮುಖರಿಗೆ ಆಹ್ವಾನವಿಲ್ಲ
ವೈಹಾಹಿಕ ಜೀವನಕ್ಕೆ ಕಾಲಿರಿಸುತ್ತಿರುವ 27ರ ಹರೆಯದ ಜಸ್ಪ್ರೀತ್ ಬೂಮ್ರಾ ಮತ್ತು ಸಂಜನಾ ಗಣೇಶನ್ ತಮ್ಮ ಮದುವೆಗೆ ಪ್ರಮುಖ ಸೆಲೆಬ್ರಿಟಿಗಳನ್ನು ಆಹ್ವಾನಿಸಿಲ್ಲ. ಇಬ್ಬರ ಕುಟುಂಬದ ಪ್ರಮುಖರು ಮತ್ತು ತೀರಾ ಹತ್ತಿರ ಸ್ನೇಹಿತರು ಮಾತ್ರ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.
ಕ್ಯಮರಾ, ಫೋನ್ ಬಳಸುವಂತಿಲ್ಲ
ಅದ್ಯಾಕೋ ಗೊತ್ತಿಲ್ಲ. ತಮ್ಮ ಮದುವೆಯ ಕ್ಷಣಗಳನ್ನು ಗುಟ್ಟಾಗಿ ಇಡಲು ಬೂಮ್ರಾ ಮತ್ತು ಸಂಜನಾ ಬಯಸಿದಂತಿದೆ. ಮದುವೆ ಸಮಾರಂಭಕ್ಕೆ ಆಹ್ವಾನಿಸಲಾದ ಅತಿಥಿಗಳೂ ಕೂಡ ಕ್ಯಮರಾ ಮತ್ತು ಮೊಬೈಲ್ ಫೋನ್ ಕೊಂಡೊಯ್ಯದಂತೆ ಸೂಚಿಸಲಾಗಿತ್ತು ಎನ್ನಲಾಗಿದೆ. ಮದುವೆಯಲ್ಲಿ ಕೇವಲ 20 ಅತಿಥಿಗಳು ಪಾಲ್ಗೊಂಡಿದ್ದಾಗಿ ತಿಳಿದು ಬಂದಿದೆ (ಹಿಂದೊಮ್ಮೆ ಸಂಜನಾ ಅವರು ಬೂಮ್ರಾ ಅವರನ್ನು ಸಂದರ್ಶನ ಮಾಡಿದ್ದ ವೀಡಿಯೋ ಮೇಲಿದೆ).
ಯಾರೀ ಸಂಜನಾ ಗಣೇಶನ್?
ಬೂಮ್ರಾ ಮದುವೆಯಾಗುತ್ತಿರುವ ಸಂಜನಾ ಗಣೇಶನ್ ಮಿಸ್ ಇಂಡಿಯಾ ಸ್ಪರ್ಧೆಯ ಫೈನಲಿಸ್ಟ್ ಮತ್ತು ಜನಪ್ರಿಯ ಟಿವಿ ಆ್ಯಂಕರ್. ಸ್ಟಾರ್ ಸ್ಪೋರ್ಟ್ಸ್ನ ಆ್ಯಂಕರ್ಗಳಲ್ಲಿ ಒಬ್ಬರಾಗಿರುವ ಸಂಜನಾ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಕವರ್ ಮಾಡ್ತಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿಯೂ ಕೆಲಸ ಮಾಡುತ್ತಾರೆ. ಮದುವೆ ಕಾರಣದಿಂದ ಬೂಮ್ರಾ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಆರ್ಧದಿಂದಲೇ ಹೊರಗುಳಿದಿದ್ದರು.
This News Article Is A Copy Of MYKHEL
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm