ಬ್ರೇಕಿಂಗ್ ನ್ಯೂಸ್
03-03-21 05:42 pm Source: MYKHEL ಕ್ರೀಡೆ
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಇದೇ ಮೊದಲ ಬಾರಿಗೆ ಕಳೆದ ಬಾರಿಯ ಐಪಿಎಲ್ನಲ್ಲಿ ಮಿಂಚಿದ್ದ ಆಟಗಾರ ರಾಹುಲ್ ತೆವಾಟಿಯಾ ಆಯ್ಕೆಯಾಗಿದ್ದಾರೆ. ಆದರೆ ಈ ಅವಕಾಶ ರಾಹುಲ್ ತೆವಾಟಿಯಾ ಅವರ ಕೈತಪ್ಪುವ ಪರಿಸ್ಥಿತಿ ಉಂಟಾಗಿದೆ. ಫಿಟ್ನೆಸ್ ಪರೀಕ್ಷೆಯಲ್ಲಿ ರಾಹುಲ್ ತೆವಾಟಿಯಾ ವಿಫಲವಾಗಿದ್ದು ತಂಡವನ್ನು ಕೂಡಿಕೊಳ್ಳುವ ಬಗ್ಗೆ ಅನುಮಾನಗಳು ಎದ್ದಿದೆ.
ದಿ ಟೆಲಿಗ್ರಾಫ್ ವರದಿ ಮಾಡಿದಂತೆ ರಾಹುಲ್ ತೆವಾಟಿಯಾ ಮತ್ತು ವರುಣ್ ಚಕ್ರವರ್ತಿ ಫಿಟ್ನೆಸ್ ಟೆಸ್ಟ್ನಲ್ಲಿ ವಿಫಲರಾಗಿದ್ದಾರೆ ಎನ್ನಲಾಗಿದೆ. ರಾಷ್ಟ್ರೀಯ ತಂಡದ ಆಟಗಾರರಿಗೆ ನಿಗದಿ ಪಡಿಸಿದ ಮಾನದಂಡಕ್ಕಿಂತ ಈ ಇಬ್ಬರು ಆಟಗಾರರ ಫಿಟ್ನೆಸ್ ಸಾಮರ್ಥ್ಯ ಕೆಳಮಟ್ಟದಲ್ಲಿದೆ ಎಂದು ತಿಳಿದುಬಂದಿದೆ. ವರುಣ್ ಚಕ್ರವರ್ತಿ ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲವಾಗಿರುವುದು ಈ ಮೊದಲು ಬಹಿರಂಗವಾಗಿತ್ತು.
ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಆಟಗಾರರು ಯೋ-ಯೋ ಪರೀಕ್ಷೆಯಲ್ಲಿ 17:1 ಅಂಕವನ್ನು ಪಡೆದಿರಬೇಕು ಅಥವಾ 2 ಕಿಲೋ ವೀಟರ್ ಅಂತರವನ್ನು 8.3 ನಿಮಿಷಗಳ ಒಳಗೆ ತಲುಪಿರಬೇಕು.
ಹಾಗಾದಲ್ಲಿ ಮಾತ್ರವೇ ಟೀಮ್ ಇಂಡಿಯಾವನ್ನು ಪ್ರತಿನಿಧಿಸಲು ಸಾಧ್ಯವಾಗುತ್ತದೆ. ಆದರೆ ರಾಹುಲ್ ತೆವಾಟಿಯಾ ಹಾಗೂ ವರುಣ್ ಚಕ್ರವರ್ತಿಗೆ ರಾಷ್ಟ್ರೀಯ ತಂಡವನ್ನು ಪ್ರತಿಧಿಸುವ ಅವಕಾಶ ಇಲ್ಲಿಗೇ ಅಂತ್ಯವಾಗುವುದಿಲ್ಲ. ಅವರಿಗೆ ಮತ್ತೊಮ್ಮೆ ಅವಕಾಶವನ್ನು ನೀಡಲಾಗುತ್ತದೆ. ಆಗ ಅವರು ತಮ್ಮ ನಿಗದಿತ ಮಾನದಂಡಗಳನ್ನು ಪೂರೈಸಿದರೆ ತಂಡವನ್ನು ಪ್ರವೇಶಿಸಲು ಅವಕಾಶ ಪಡೆಯುತ್ತಾರೆ.
ರಾಷ್ಟ್ರೀಯ ತಂಡದ ಆಯ್ಕೆಗಾರರು ಹಾಗೂ ತಂಡದ ಮ್ಯಾನೇಜ್ಮೆಂಟ್ ಈ ಆಟಗಾರರ ಲಭ್ಯತೆಯ ಬಗ್ಗೆ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮಾಹಿತಿಯ ಮೇರೆಗೆ ನಿರ್ಣಯವನ್ನು ತೆಗೆದುಕೊಳ್ಳಲಿದೆ. ಭಾರತೀಯ ಕ್ರಿಕೆಟ್ನಲ್ಲಿ ಅಪರಿಚಿತವಾಗಿದ್ದ ರಾಹುಲ್ ತೆವಾಟಿಯಾ ಕಳೆದ ಐಪಿಎಲ್ನಲ್ಲಿ ನಿಡಿದ ಕೆಲ ಅದ್ಭುತ ಪ್ರದರ್ಶನಗಳಿಂದಾಗಿ ರಾಷ್ಟ್ರೀಯ ತಂಡದಲ್ಲಿ ಅವಕಾಶವನ್ನು ಪಡೆಯುವಂತೆ ಮಾಡಿದೆ.
This News Article Is A Copy Of MYKHEL
14-10-26 10:35 am
HK News Staffer
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
14-10-26 12:54 pm
HK News Staffer
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm