ಬ್ರೇಕಿಂಗ್ ನ್ಯೂಸ್
01-03-21 10:54 am Source: MYKHEL ಕ್ರೀಡೆ
ಗೋವಾ, ಫೆಬ್ರವರಿ 28: ಗೋವಾಕ್ಕೆ ಗೋಲು ಗಳಿಸಬೇಕಾಗಿರಲಿಲ್ಲ. ಹೈದರಾಬಾದ್ ಗೆ ಸೆಮಿ ಫೈನಲ್ ತಲುಪಲು ಗೋಲು ಗಳಿಸಬೇಕಾಗಿತ್ತು. ಆದರೆ ಹೈದರಾಬಾದ್ ನ ಆಟ ನಡೆಯಲಿಲ್ಲ. ಗೋವಾ ಗೋಲು ಗಳಿಸದೆ ಸೆಮಿಫೈನಲ್ ತಲುಪಿದೆ. ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಇದುವರೆಗೂ ದಿಟ್ಟ ಹೋರಾಟವನ್ನು ನೀಡಿ ಸೆಮಿಫೈನಲ್ ತಲಪುವ ಫೇವರಿಟ್ ತಂಡವೆನಿಸಿದ್ದ ಹೈದರಾಬಾದ್ ಎಫ್ ಸಿ ಕೊನೆಯ ಪಂದ್ಯದಲ್ಲಿ ಜಯ ಕಾಣುವಲ್ಲಿ ವಿಫಲವಾಗಿದೆ.
ಪರಿಣಾಮ ಒಂದು ಅಂಕದ ಅಗತ್ಯದಲ್ಲಿದ್ದ ಗೋವಾ ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನ ಪ್ಲೇ ಆಫ್ ತಲುಪಿದೆ. ಇದರೊಂದಿಗೆ ಎಟಿಕೆ ಮೋಹನ್ ಬಾಗನ್, ಮುಂಬೈ ಸಿಟಿ ಎಫ್ ಸಿ, ನಾರ್ಥ್ ಈಸ್ಟ್ ಯುನೈಟೆಡ್ ಮತ್ತು ಎಫ್ ಸಿ ಗೋವಾ ತಂಡಗಳು ಪ್ಲೇ ಆಫ್ ನಲ್ಲಿ ಪರಸ್ಪರ ಸೆಣಸಲಿವೆ. ಪಂದ್ಯ ಉತ್ತಮ ಪೈಪೋಟಿಯಿಂದಲೇ ಕೂಡಿತ್ತು. ಆದರೆ ಗೋಲಿಲ್ಲದ ಪ್ರಥಮಾರ್ಧವೆಂದೆ ಗೋವಾ ಬಹುತೇಕ ಪ್ಲೇ ಆಫ್ ತಲುಪಿದಂತೆ. ಇಲ್ಲಿ ಪಂದ್ಯ ಗೋಲಿಲ್ಲದೆ ಡ್ರಾಗೊಂಡರೆ ಗೋವಾ ಸುಲಭವಾಗಿ ಸೆಮಿಫೈನಲ್ ಗೆ ಲಗ್ಗೆ ಇಡಲಿದೆ, ಈ ಕಾರಣಕ್ಕಾಗಿಯೇ ಗೋವಾ ತನ್ನ ನೈಜ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿಲ್ಲ, ಬದಲಾಗಿ ತಾಳ್ಮೆಯ ಹೆಜ್ಜೆಯನ್ನಿಟ್ಟಿತ್ತು

ಗೋಲಿಲ್ಲದ ಪ್ರಥಮಾರ್ಧ
ಧೀರಜ್ ಸಿಂಗ್ ಹೈದರಾಬಾದ್ ನ ಅವಕಾಶಕ್ಕೆ ಆಸ್ಪದ ನೀಡದೆ ತಾನೊಬ್ಬ ಉದಯೋನ್ಮುಖ ಗೋಲ್ ಕೀಪರ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಹೆಚ್ಚಿನ ಅವಕಾಶಗಳು ಇಲ್ಲದ ಕಾರಣ ಪ್ರಥಮಾರ್ಧ ಗೋಲಿಲ್ಲದೆ ಅಂತ್ಯಗೊಂಡಿತು. ಗೋವಾದ ಆಟಗಾರರ ಮೊಗದಲ್ಲಿ ಸಂಭ್ರಮ ಮನೆ ಮಾಡಿತ್ತು. ಮುಂದಿನ 45 ನಿಮಿಷಗಳ ಆಟದಲ್ಲಿ ಹೈದರಾಬಾದ್ ಯಶಸ್ಸು ಕಂಡರೆ ಸೆಮಿಫೈನಲ್. ಇಲ್ಲವಾದಲ್ಲಿ ಮನೆಯ ಹಾದಿ.
ಪ್ಲೇ ಆಫ್ ಶೂಟೌಟ್ ಪ್ಲೇ ಆಫ್
ಗೆ ಮುನ್ನ ಮಿನಿ ಪ್ಲೇ ಆಫ್. ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಹೈದರಾಬಾದ್ ಹಾಗೂ ಗೋವಾ ಎಫ್ ಸಿ ತಂಡಗಳು ಮುಖಾಮುಖಿಯಾದವು. ಇದು ಈ ಬಾರಿಯ ಐಎಸ್ ಎಲ್ ನಲ್ಲೇ ಅತ್ಯಂತ ನಿರೀಕ್ಷೆಯ ಪಂದ್ಯ ಎಂದರೆ ತಪ್ಪಾಗಲಾರದು. 19 ಪಂದ್ಯಗಳ ನಂತರ ಉಳಿದಿರುವ ಈ 90 ನಿಮಿಷಗಳ ಪಂದ್ಯವು ಎರಡು ತಂಡಗಳ ಭವಿಷ್ಯವನ್ನು ತೀರ್ಮಾನಿಸಲಿದೆ. ಗೋವಾ ತಂಡಕ್ಕೆ ಕೇವಲ ಒಂದು ಅಂಕ ದೊರೆತರೂ ಅಂತಿಮ ನಾಲ್ಕರ ಹಂತ ತಲುಪಲಿದೆ. ಹೈದರಾಬಾದ್ ಗೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.ಗೋವಾ ತಂಡ 12 ಪಂದ್ಯಗಳಲ್ಲಿ ಸೋಲರಿಯದೆ ಬಂದಿದೆ. ಗೋಲು ಗಳಿಸುವುದು ಫೆರಾಂಡ್ ಪಡೆಗೆ ಕಷ್ಟವಲ್ಲ. ಕೊನೆಯ ಕ್ಷಣದವರೆಗೂ ಹೋರಾಟ ನೀಡುವ ಗೋವಾ ಅಮೂಲ್ಯ ಅಂಕಗಳನ್ನು ಗಳಿಸಿತ್ತು.

ಕೊನೆಯ ಕ್ಷಣದವರೆಗೂ ಹೋರಾಟ
ಹೈದರಾಬಾದ್ ಕೂಡ ಕೊನೆಯ ಕ್ಷಣದವರೆಗೂ ಹೋರಾಟ ನೀಡುವ ತಂಡ. ಹಿಂದಿನ ಯಾವುದೇ ಯಶಸ್ಸು ಇಲ್ಲಿ ಪ್ರಯೋಜನಕ್ಕೆ ಬಾರದು, ಇಲ್ಲಿ ಗೆದ್ದರೆ ಮಾತ್ರ ಮುಂದಿನ ಹಂತಕ್ಕೆ ತೇರ್ಗಡೆ ಎಂಬುದು ಎರಡೂ ತಂಡಕ್ಕೆ ಗೊತ್ತಿರುವ ಅಂಶ. ಗೋವಾ ವಿರುದ್ಧ ಹೈದರಾಬಾದ್ ಗೆ ಜಯ ಹೊರತು ಬೇರೇನೂ ಬೇಕಾಗಿಲ್ಲ. ಸ್ಪರ್ಧೆಯಲ್ಲಿ ಉಳಿಯಬೇಕಾದರೆ ಜಯ ಬೇಕು. ನಾರ್ಥ್ ಈಸ್ಟ್ ಯನೈಟೆಡ್ ಎಫ್ ಸಿ ಸೋತರೆ ಅಥವಾ ಡ್ರಾ ಮಾಡಿಕೊಂಡರೆ ತಮಗೆ ಲಾಭವಾಗಬಹುದು ಎಂದು ಕೋಚ್ ಮ್ಯಾನ್ವೆಲ್ ಮಾರ್ಕ್ವೆಜ್ ಊಹಿಸಿದ್ದರು, ಆದರೆ ಕೇರಳ ಬ್ಲಾಸ್ಟರ್ ಸೋಲು ಅನುಭವಿಸುವ ಮೂಲಕ ಈಗ ಹೈದರಾಬಾದ್ ಗೆಲ್ಲಲೇಬೇಕಾಗಿದೆ.
This News Article Is A Copy Of MYKHEL
14-10-26 10:35 am
HK News Staffer
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
14-10-26 12:54 pm
HK News Staffer
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm