ಬ್ರೇಕಿಂಗ್ ನ್ಯೂಸ್
28-02-21 10:45 am Source: MYKHEL ಕ್ರೀಡೆ
ಗೋವಾ: ಹೀರೋ ಇಂಡಿಯನ್ ಸೂಪರ್ ಲೀಗ್ ನ ಕೊನೆಯ ಸ್ಥಾನದಲ್ಲಿರು ಒಡಿಶಾ ಎಫ್ ಸಿ ಅದ್ಭುತ ಪ್ರದರ್ಶನ ತೋರಿದುದರ ಪರಿಣಾಮ ಎಸ್ ಸಿ ಈಸ್ಟ್ ಬೆಂಗಾಲ್ ವಿರುದ್ಧ 6-5 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಗೌರವದೊಂದಿಗೆ ನಿರ್ಗಮಿಸಿತು. ಇದೇ ಮೊದಲ ಬಾರಿಗೆ ಹೀರೊ ಇಂಡಿಯನ್ ಸೂಪರ್ ಲೀಗ್ ನಲ್ಲಿ ಒಟ್ಟು 11 ಗೋಲುಗಳು ದಾಖಲಾದವು. ಒಡಿಶಾ ಮೊದಲ ಬಾರಿಗೆ ಆರು ಗೋಲು ಗಳಿಸಿತು. ಈ ಬಾರಿ ಐಎಸ್ ಎಲ್ ನಲ್ಲಿ ತಂಡವೊಂದು ಗಳಿಸಿದ ಗರಿಷ್ಠ ಗೋಲು ಕೂಡಾ ಇದಾಗಿದೆ.ಎಲ್ಲಕ್ಕಿಂತ ಮುಖ್ಯವಾಗಿ ಭಾರತದ ಆಟಗಾರರು ಮಿಂಚಿದ್ದು ಗಮನಾರ್ಹ ಅಂಶ.
ಲಾಲ್ರಿಯಾಂಜುವಾಲಾ ಸೈಲಂಗ್ (33ನೇ ನಿಮಿಷ), ಪೌಲ್ ರಾಮ್ಫಾಂಗ್ಜುವಾ (49 ಮತ್ತು 66ನೇ ನಿಮಿಷ), ಜೆರ್ರಿ ಮಾವ್ಹಿಂಗ್ತಾಂಗಾ (51 ಮತ್ತು 67ನೇ ನಿಮಿಷ) ಮತ್ತು ಡಿಗೋ ಮೌರಾಸಿಯೋ (69ನೇ ನಿಮಿಷ) ಮತ್ತು ಎಸ್ ಸಿ ಈಸ್ಟ್ ಬೆಂಗಾಲ್ ಪರ ಆಂಥೋನಿ ಪಿಲ್ಕಿಂಗ್ಟನ್ (24ನೇ ನಿಮಿಷ), ರವಿ ಕುಮಾರ್ ಉಡುಗೊರೆ ಗೋಲು (37ನೇ ನಿಮಿಷ), ಆರೋನ್ ಅಮಾದಿ (60 ಮತ್ತು 90ನೇ ನಿಮಿಷ) ಮತ್ತು ಜೆಜೆ ಲಾಲ್ಪೆಲ್ಕುವಾ (74 ನೇ ನಿಮಿಷ) ಗೋಲು ಗಳಿಸಿದರು.
ಮುನ್ನಡೆದ ಈಸ್ಟ್ ಬೆಂಗಾಲ್
ಹೀರೋ ಇಂಡಿಯನ್ ಸೂಪರ್ ಲೀಗ್ ನ ಕೊನೆಯ ಪಂದ್ಯದಲ್ಲಾದರೂ ಜಯ ಗಳಿಸಿ ಗೌರವದೊಂದಿಗೆ ಮನೆಗೆ ನಿರ್ಗಮಿಸಬೇಕೆಂಬುದು ಎಲ್ಲ ತಂಡಗಳ ಗುರಿಯಾಗಿರುತ್ತದೆ, ಅದೇ ಅಭಿಲಾಶೆಯೊಂದಿಗೆ ಕೊನೆಯ ಸ್ಥಾನದಲ್ಲಿರುವ ಒಡಿಶಾ ಮತ್ತು ಹತ್ತನೇ ಸ್ಥಾನದಲ್ಲಿರುವ ಈಸ್ಟ್ ಬೆಂಗಾಲ್ ತಂಡಗಳು ಅಂಗಣಕ್ಕಿಳಿದವು. ಮೊದಲ 45 ನಿಮಿಷಗಳ ಆಟದಲ್ಲಿ ಈಸ್ಟ್ ಬೆಂಗಾಲ್ 2-1 ಗೋಲುಗಳಿಂದ ಮೇಲುಗೈ ಸಾಧಿಸಿತು. 24ನೇ ನಿಮಿಷದಲ್ಲಿ ಆಂಟೋನಿ ಪಿಲ್ಕಿಂಗ್ಟನ್ ಗಳಿಸಿದ ಓಪನ್ ಗೋಲ್ ಈಸ್ಟ್ ಬೆಂಗಾಲ್ ತಂಡಕ್ಕೆ ಮುನ್ನಡೆ ತಂದುಕೊಟ್ಟಿತ್ತು. ಸುಮಾರು ಸೆಂಟರ್ ಫೀಲ್ಡ್ ನಿಂದ ಚೆಂಡನ್ನು ನಿಯಂತ್ರಿಸಿದ ಪಿಲ್ಕಿಂಗ್ಟನ್ ಒಡಿಶಾದ ಡಿಫೆನ್ಸ್ ವಿಭಾಗವನ್ನು ಉತ್ತಮ ರೀತಿಯಲ್ಲಿ ನಿಯಂತ್ರಿಸಿ ಪೆನಾಲ್ಟಿ ವಲಯದ ಬಲ ಅಂಚಿನಿಂದ ಚೆಂಡನ್ನು ನೇರವಾಗಿ ಗೋಲ್ ಬಾಕ್ಸ್ ಗೆ ಗುರಿಯಿಟ್ಟು ತುಳಿದರು. ಚೆಂಡು ನೇರವಾಗಿ ಬರುತ್ತದೆ ಎಂದು ನಿರೀಕ್ಷೆಯಲ್ಲಿದ್ದ ಒಡಿಶಾದ ಗೋಲ್ ಕೀಪರ್ ರವಿಕುಮಾರ್ ಅವರಿಗೆ ಯಾವುದೇ ರೀತಿಯಲ್ಲೂ ಚೆಂಡನ್ನು ತಡಯಲಾಗಲಿಲ್ಲ. ಈಸ್ಟ್ ಬೆಂಗಾಲ್ 1-0 ಅಂತರದಲ್ಲಿ ಮುನ್ನಡೆ ಕಂಡುಕೊಂಡಿತು.
ಒಡಿಶಾ ಸಮಬಲ ಸಾಧಿಸಿತು
33ನೇ ನಿಮಿಷದಲ್ಲಿ ಒಡಿಶಾ ಸಮಬಲ ಸಾಧಿಸಿತು, ಈ ಬಾರಿ ಭಾರತದ ಆಟಗಾರ ಲಾಲ್ರಿಯಾಂಜುವಾಲಾ ಸೈಲಂಗ್ ಗಳಿಸಿದ ಗೋಲಿನಿಂದ ಪಂದ್ಯ ಸಮಬಲಗೊಂಡಿರತು. ಕಾರ್ನರ್ ಕಿಕ್ ಅನ್ನು ಈಸ್ಟ್ ಬೆಂಗಾಲ್ ಆಟಗಾರರಿಗೆ ಸುಲಭವಾಗಿ ತಡೆಯಬಹುದಾಗಿತ್ತು. ಆದರೆ ಚೆಂಡು ಬಹಳ ಹೊತ್ತು ಇತ್ತಂಡಗಳ ಆಟಗಾರರ ಕಾಲಿನ ನಿಯಂತ್ರಣದಲ್ಲಿತ್ತು. ಚೆಂಡನ್ನು ಹೊರತಳ್ಳಲು ಯತ್ನಿಸಿದಾಗ ಲಾಲ್ರಿಯಾಂಜುವಾಲಾ ಅವರ ನಿಯಂತ್ರಣಕ್ಕೆ ಸಿಲುಕಿತು. ಹೆಚ್ಚಿನ ಬಲ ಪ್ರಯೋಗ ಮಾಡದೆ ಚೆಂಡನ್ನು ನೆಟ್ ಗೆ ತಳ್ಳಿದರು. ಪಂದ್ಯ 1-1ರಲ್ಲಿ ಸಮಬಲಗೊಂಡಿತು.
ಕೀಪರ್ ಮಾಡಿದ ಪ್ರಮಾದ
37ನೇ ನಿಮಿಷದಲ್ಲಿ ಒಡಿಶಾದ ಗೋಲ್ ಕೀಪರ್ ಅರಿವಿಲ್ಲದೆ ಮಾಡಿದ ಪ್ರಮಾದದಿಂದ ಈಸ್ಟ್ ಬೆಂಗಾಲ್ 2-1 ಅಂತರದಲ್ಲಿ ಮೇಲುಗೈ ಸಾಧಿಸಿತು. ನಿಜವಾಗಿಯೂ ತಡೆಯಲು ಹೋದ ಗೋಲಿನಿಂದ ಗೋಲು ದಾಖಲಾಗಿರುವುದು ದುರದೃಷ್ಟಕರ. ಬಲಭಾಗದಲ್ಲಿ ಮಘೋಮಾ ಜಾಕ್ವೆಸ್ ಉತ್ತಮವಾದ ಪಾಸೊಂದನ್ನು ಸ್ವೀಕರಿಸಿದರು. ಅದನ್ನು ಗೋಲ್ ಬಾಕ್ಸ್ ಗೆ ಅಭಿಮುಖವಾಗಿ ಪಾಸ್ ಮಾಡುವ ಹಂತದಲ್ಲಿದ್ದರು. ಅರೋನ್ ಜೋಶುವಾ ಅದನ್ನು ನಿಯಂತ್ರಿಸಿ ಸುರಕ್ಷಿತ ಕಡೆಗೆ ತುಳಿಯುವವರಿದ್ದರು. ಚೆಂಡು ಗೋಲ್ ಬಾಕ್ಸ್ ನ ಸಮೀಪದಲ್ಲಿದ್ದ ಕಾರಣ ಮ್ಯಾನ್ವೆಲ್ ಒನೌ ದೂರ ತಳ್ಳುವವರಿದ್ದರು, ಆದರೆ ಅದು ಗೋಲ್ ಕೀಪರ್ ರವಿಕುಮಾರ್ ಅವರ ಮುಖಕ್ಕೆ ತಗಲಿ ನೆಟ್ ಗೆ ಸೇರಿತು. ಈಸ್ಟ್ ಬೆಂಗಾಲ್ ಆಟಗಾರರು ಈ ಗೋಲನ್ನು ಸಂಭ್ರಮಿಸದಿದ್ದರೂ ಸ್ಕೋರ್ ಲೈನ್ ನಲ್ಲಿ 2-1 ದಾಖಲಾಗಿತ್ತು.
This News Article Is A Copy Of MYKHEL
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 08:32 pm
Mangalore Correspondent
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm