ಬ್ರೇಕಿಂಗ್ ನ್ಯೂಸ್
24-02-21 01:17 pm Source: MYKHEL ಕ್ರೀಡೆ
ಗೋವಾ: ಲೀಗ್ ಪ್ರಶಸ್ತಿಯನ್ನು ಗುರಿಯಾಗಿಸಿಕೊಂಡಿರುವ ಮುಂಬೈ ಸಿಟಿ ಎಫ್ ಸಿ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ ಕೊನೆಯ ಲೀಗ್ ಪಂದ್ಯದಲ್ಲಿ ಒಡಿಶಾ ಎಫ್ ಸಿ ವಿರುದ್ಧ ಸೆಣಸಲಿದೆ. ಹೈದರಾಬಾದ್ ಎಫ್ ಸಿ ವಿರುದ್ಧದ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ಅಂಕ ಕಳೆದುಕೊಂಡಿದ್ದರಿಂದ ಈಗ ಸರ್ಗಿಯೊ ಲೊಬೆರಾ ಪಡೆಯ ಮೇಲೆ ಎಲ್ಲರ ದೃಷ್ಟಿ. ಏಕೆಂದರೆ ಲೀಗ್ ವಿನ್ನರ್ ಪ್ರೋಫಿ ಗೆಲ್ಲಲು ಅವಕಾಶ ಉತ್ತಮವಾಗಿದೆ. ಒಡಿಶಾ ಕೇವಲ ಗೌರವಕ್ಕಾಗಿ ಆಡಲಿದ್ದು ಕೊನೆಯ ಪಂದ್ಯದಲ್ಲಿ ಜಯ ಗಳಿಸಿ ಋತುವನ್ನು ಮುಗಿಸುವ ಗುರಿಹೊಂದಿದೆ.
ಮುಂಬೈ ತಂಡಕ್ಕೆ ಇಲ್ಲಿ ಜಯದ ಅಗತ್ಯ ಇದೆ. ಲೀಗ್ ನಲ್ಲಿ ಬಹಳ ಸಮಯದಿಂದ ಅಗ್ರ ಸ್ಥಾನದಲ್ಲಿದ್ದ ಮುಂಬೈ ಸಿಟಿ ತಂಡ ಇದ್ದಕ್ಕಿದ್ದಂತೆ ಅಗ್ರ ಸ್ಥಾನ ಕಳೆದುಕೊಂಡಿತು. ಕಳೆದ ಆರು ಪಂದ್ಯಗಳಲ್ಲಿ ಲೊಬೆರಾ ಪಡೆ ಜಯ ಗಳಿಸಿದ್ದು ಕೇವಲ ಒಂದು ಪಂದ್ಯದಲ್ಲಿ.

ಮೂರು ಪಂದ್ಯಗಳಲ್ಲಿ ಜಯ ಗಳಿಸಿಲ್ಲ
ಕಳೆದ ಮೂರು ಪಂದ್ಯಗಳಲ್ಲಿ ಜಯ ಗಳಿಸಿಲ್ಲ. ಜೆಮ್ಷೆಡ್ಪುರ ವಿರುದ್ಧ ನಡೆ ಪಂದ್ಯದಲ್ಲಿ ಮುಂಬೈ ಸೋಲನುಭವಿಸಿತ್ತು, ಎಲ್ಲಿಯವರೆಗೆ ತಂಡ ಸುಧಾರಣೆ ಕಾಣುವುದಿಲ್ಲವೊ ಅಲ್ಲಿಯವರೆಗೆ ಪ್ರಶಸ್ತಿಯ ಆಸೆ ಸೂಕ್ತವಲ್ಲ ಎಂದು ಲೊಬೆರಾ ಹೇಳಿದ್ದಾರೆ. "ನಾವು ನಮ್ಮ ಆಟದಲ್ಲಿ ಸುಧಾರಣೆ ಕಂಡುಕೊಳ್ಳಬೇಕಾಗಿದೆ. ಏಕೆಂದರೆ ನಾವು ಪಂದ್ಯವನ್ನು ಗೆಲ್ಲಬೇಕು . ಕಳೆದ ಪಂದ್ಯದ ರೀತಿಯಲ್ಲಿ ನಾವು ಆಡಿದರೆ ಪಂದ್ಯವನ್ನು ಗೆಲ್ಲುವುದು ಅಸಾಧ್ಯ. ನಾವು ಎರಡೂ ತುದಿಯಿಂದಲೂ ಸುಧಾರಿಸಿಕೊಳ್ಳಬೇಕಾದ ಅಗತ್ಯ ಇದೆ," ಎಂದರು.
ಕೆಟ್ಟ ಪಂದ್ಯಗಳನ್ನು ಆಡಿದೆವು
"ನಾವು ಸಾಕಷ್ಟು ಅವಕಾಶಗಳನ್ನು ಮತ್ತು ಗೋಲುಗಳನ್ನೂ ನೀಡಿದೆವು. ನಾವು ಗೋಲು ಗಳಿಸುವ ಅವಕಾಶಗಳನ್ನು ನಿರ್ಮಿಸಿಲ್ಲ, ನಾವು ಈ ವಿಭಾಗದಲ್ಲಿ ಸುಧಾರಣೆ ಕಂಡುಕೊಳ್ಳಬೇಕಾಗಿದೆ. ನಾವು ಋತುವಿನಲ್ಲಿಯೇ ಅತ್ಯಂತ ಕೆಟ್ಟ ಪಂದ್ಯಗಳನ್ನು ಆಡಿದೆವು. ಅದು ಈಗಾ ಇತಿಹಾಸ, ನಮಗೆ ವರ್ತಮಾನವು ಅತ್ಯಂತ ಪ್ರಮುಖವಾದುದು, ಜತೆಯಲ್ಲಿ ಭವಿಷ್ಯ. ಕೆಲವೊಮ್ಮೆ ಕೆಟ್ಟ ಸಂದರ್ಭಗಳು ಎದುರಾಗುತ್ತವೆ, ಅದು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು," ಎಂದರು.

ಸಮತೋಲನದಿಂದ ಕೂಡಿದ ತಂಡ
ತಂಡ ಗೆರಾಲ್ಡ್ ಪೆಟನ್ ಅವರು ವೈಯಕ್ತಿಕ ಕಾರಣಕ್ಕಾಗಿ ಕ್ಲಬ್ ತೊರೆದ ಕಾರಣ ಸ್ಟೀವನ್ ಡಿಯಾಸ್ ಅವರು ಒಡಿಶಾ ತಂಡದ ನೂತನ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಭಾರದತ ಮಾಜಿ ಅಂತಾರಾಷ್ಟ್ರೀಯ ಆಟಗಾರ, ನಾಳೆಯ ಪಂದ್ಯದಲ್ಲಿ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವುದಾಗಿ ಹೇಳಿದ್ದಾರೆ. " ನಮ್ಮ ತಂಡವು ನಿಜವಾಗಿಯೂ ಯುವ ಆಟಗಾರರಿಂದ ಕೂಡಿದೆ. ನಮ್ಮದು ಸಮತೋಲನದಿಂದ ಕೂಡಿದ ತಂಡ. ಆದರೆ ನಮ್ಮ ತಂಡಕ್ಕೆ ಅದೃಷ್ಟ ಇರಲಿಲ್ಲ. ಆರಂಭದಲ್ಲಿ ಥೊಯಿಬಾ ಸಿಂಗ್ ಮತ್ತು ಸೌರಭ್ ಮೆಹರ್ ಅವರು ಆಡಿದರು, ಆದರೆ ನಂತರ ಬಾಕ್ಸ್ಟರ್ ಭಾರತದ ಆಟಗಾರರಿಗೆ ಅವಕಾಶ ನೀಡಲಿಲ್ಲ. ನಮ್ಮ ಆಟಗಾರರಲ್ಲಿ ಉತ್ತಮ ಪ್ರತಿಭೆ ಇದೆ. ತರಬೇತಿಯ ವೇಳೆ ನಾನು ಈ ಆಟಗಾರರನ್ನು ಗಮನಿಸಿದ್ದೇನೆ. ಮುಂದಿನ ದಿನಗಳಲ್ಲಿ ಇವರು ಉತ್ತಮ ಆಟಗಾರರಾಗಿ ರೂಪುಗೊಳ್ಳಲಿದ್ದಾರೆ. ನಾವು ಯುವ ಆಟಗಾರರಿಗೆ ಅವಕಾಶವನ್ನೇ ನೀಡಲಿಲ್ಲ. ನಾನು ಅವರಿಗೆ ಅವಕಾಶ ನೀಡಲು ಯತ್ನಿಸುವೆ. ಒಂದು ಪಂದ್ಯ ಭವಿಷ್ಯವನ್ನೇ ಬದಲಾಯಿಸಬಲ್ಲದು,' ಎಂದು ಡಿಯಾಸ್ ಹೇಳಿದ್ದಾರೆ.
This News Article is a Copy of MYKHEL
14-01-26 03:34 pm
Bangalore Correspondent
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
14-01-26 03:15 pm
Mangalore Correspondent
ಕುಂದಾಪುರ -ತಲಪಾಡಿ, ಸುರತ್ಕಲ್- ಬಿ.ಸಿ.ರೋಡ್ ಹೆದ್ದಾ...
13-01-26 10:30 pm
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm