ಬ್ರೇಕಿಂಗ್ ನ್ಯೂಸ್
15-02-21 03:06 pm Source: MYKHEL ಕ್ರೀಡೆ
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಎರಡನೇ ಪಂದ್ಯದ ಮೊದಲ ದಿನದಿಂದಲೇ ಸಾಕಷ್ಟು ತಿರುವು ಪಡೆದುಕೊಂಡಿತ್ತು. ಇದರ ಲಾಭವನ್ನು ಸ್ಪಿನ್ನರ್ಗಳು ಪಡೆದುಕೊಂಡಿದ್ದು ಬ್ಯಾಟ್ಸ್ಮನ್ಗಳ ಮೇಲೆ ಸವಾರಿ ಮಾಡಿದ್ದಾರೆ. ಆದರೆ ಆರಂಭದ ದಿನದಿಂದಲೇ ಪಿಚ್ ವರ್ತಿಸುತ್ತಿರುವ ರೀತಿಯ ಬಗ್ಗೆ ಕೆಲ ಮಾಜಿ ಆಟಗಾರರು ಆಕ್ಷೇಪವನ್ನು ವ್ಯಕ್ತಪಡಿಸಿದರು. ಅದರಲ್ಲೂ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಇದೊಂದು ಕೆಟ್ಟ ಪಿಚ್, ಐದು ದಿನಗಳ ಕಾಲ ಆಡುವ ಸ್ಪರ್ಧಾತ್ಮಕ ಪಿಚ್ ಅಲ್ಲ ಎಂದಿದ್ದರು.
ಈ ರೀತಿಯ ಪ್ರತಿಕ್ರಿಯೆಗಳಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದು ತಿರುಗೇಟಿ ನೀಡಿದ್ದಾರೆ. ಇಂಗ್ಲೆಂಡ್ನಲ್ಲಿ ಪಂದ್ಯದ ಐದು ದಿನವೂ ಸೀಮಿಂಗ್ ಟ್ರ್ಯಾಕ್ ಇದ್ದಾಗ ಯಾರೂ ಮಾತನಾಡಲ್ಲ, ಆದರೆ ಭಾರತದಲ್ಲಿ ಸ್ಪಿನ್ ಆಗುತ್ತಿದ್ದಂತೆಯೇ ಮಾತನಾಡಲು ಮುಂದಾಗುತ್ತಾರೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಚೆನ್ನೈ ಪಿಚ್ನಲ್ಲಿ ಟೀಮ್ ಇಂಡಿಯಾ ಆಟಗಾರರು ಬ್ಯಾಟಿಂಗ್ ಮಾಡಿದ ರೀತಿಯ ಬಗ್ಗೆ ಗವಾಸ್ಕರ್ ಮಾತನಾಡಿದರು. "ನಿನ್ನೆ ರೋಹಿತ್ ಶರ್ಮಾ ಬ್ಯಾಟಿಂಗ್ ನಡೆಸಿ 150 ರನ್ಗಳನ್ನು ಕಲೆಹಾಕಿರುವುದನ್ನು ನಾವು ಗಮನಿಸಿದ್ದೇವೆ. ಚೆಂಡನ್ನು ಅದ್ಭುತವಾಗಿ ಅವರು ಎದುರಿಸಿದ್ದರು. ಇದು ಈ ಪಿಚ್ನ್ನು ಸಮರ್ಥನೆ ಮಾಡಿಕೊಂಡಂತಾಗಿದೆ" ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. "ಕೆಲವರು ಈ ಬಗ್ಗೆ ಮಾತನಾಡುತ್ತಾರೆ. ಆದರೆ ಇಂಗ್ಲೆಂಡ್ನಲ್ಲಿ ನೀವು ಸೀಮಿಂಗ್ ಪಿಚ್ಗಳನ್ನು ಹೊಂದಿರುತ್ತೀರಿ. ಆಸ್ಟ್ರೇಲಿಯಾ ಈ ಸೀಮಿಂಗ್ ಪಿಚ್ನ್ಲಲಿ 46 ರನ್ಗಳಿಗೆ ಆಲೌಟ್ ಆಗಿದೆ. ಪಂದ್ಯದ ಐದು ದಿನವೂ ಸೀಮರ್ಗಳಿಗೆ ಪೂರಕವಾಗಿರುತ್ತದೆ. ಆಬಗ್ಗೆ ಯಾರೂ ಮಾತನಾಡಲಾರರು. ಇದು ಯಾವಾಗಲೂ ಭಾರತೀಯ ಪಿಚ್ಗಳ ಬಗ್ಗೆಯೇ ಮಾತು. ಚೆಮಡು ತಿರುವು ಪಡೆಯುತ್ತಿದ್ದಂತೆಯೇ ಅವರಿಗೆ ಸಮಸ್ಯೆಗಳು ಆರಂಭವಾಗುತ್ತವೆ" ಎಂದು ಟೀಕಿಸಿದ್ದಾರೆ ಸುನಿಲ್ ಗವಾಸ್ಕರ್.
"ಇದು ಒಂದು ಅಥವಾ ಇಬ್ಬರು ಭಾರತವನ್ನು ಇಷ್ಟ ಪಡದವರು ಆಡುವ ಮಾತುಗಳು. ಇದನ್ನು ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯಗಳು ನಡೆಯುವಾಗ ಪ್ರತಿ ಬಾರಿಯೂ ಮಾಡುತ್ತಾರೆ. ನಾವು ಅದನ್ನು ನಿರ್ಲಕ್ಷಿಸಬೇಕು ಯಾಕೆಂದರೆ ಅವರು ಎರಡು ರೀತಿಯ ಮಾನದಂಡಗಳನ್ನು ಹೊಂದಿದವರು" ಎಂದು ಸುನಿಲ್ ಗವಾಸ್ಕರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
This News Article is a Copy of MYKHEL
14-10-26 10:35 am
HK News Staffer
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
14-10-26 10:57 am
HK News Staffer
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm