ಬ್ರೇಕಿಂಗ್ ನ್ಯೂಸ್
02-02-21 02:56 pm Source: MYKHEL Madhukara Shetty ಕ್ರೀಡೆ
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಹೆಸರಿಸಿರುವ ತಂಡದಲ್ಲಿ ವೇಗಿ ನಟರಾಜನ್ ಆಯ್ಕೆಯಾಗಿಲ್ಲ. ಹೀಗಾಗಿ ನಟರಾಜನ್ ಸದ್ಯ ತಮಿಳುನಾಡಿನಲ್ಲಿ ತಮ್ಮ ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಅವರು ಟೀಮ್ ಇಂಡಿಯಾ ಬಳಗವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಸ್ವತಃ ನಟರಾಜನ್ ಹೇಳಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾದ ಎಲ್ಲಾ ಮಾದರಿಯ ತಂಡದಲ್ಲೂ ಅವಕಾಶ ಪಡೆದಿದ್ದ ನಟರಾಜನ್ ಸುದೀರ್ಘ ಕಾಲ ತಂಡದ ಸದಸ್ಯರ ಜೊತೆಯಲ್ಲಿ ಬಯೋ ಬಬಲ್ನಲ್ಲಿದ್ದರು. ಆದರೆ ಜನವರಿ ಮಧ್ಯದಲ್ಲಿ ಆಸಿಸ್ ವಿರುದ್ಧದ ಸರಣಿ ಮುಕ್ತಾಯದೊದಿಗೆ ಟೀಮ್ ಇಂಡಿಯಾ ತವರಿಗೆ ಮರಳಿತು.
"ಕಳೆದ ಕಲ ತಿಂಗಳುಗಳಿಂದ ತಂಡದ ಭಾಗವಾಗಿದ್ದು ಸದಸ್ಯರ ಜೊತೆಯಲ್ಲಿ ಆತ್ಮೀಯವಾಗಿದ್ದೆ. ಈಗ ಖಂಡಿತವಾಗಿ ತಂಡವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆದರೆ ಈ ವಿರಾಮದ ಅಗತ್ಯವನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ. ಕಳೆದ ಆರು ತಿಂಗಳಿನಿಂದ ನಾನು ನನ್ನ ಕುಟುಂಬಕ್ಕೆ ಸಮಯವನ್ನು ನೀಡಿರಲಿಲ್ಲ. ಆದರೆ ಅದಕ್ಕೆ ಬೇಸರವಿಲ್ಲ. ಆದರೆ ತಂಡ ಚೆನ್ನೈನಲ್ಲಿ ಆಡುತ್ತಿರುವಾಗ ನಾನು ರಾಷ್ಟ್ರೀಯ ತಂಡದ ಭಾಗವಾಗದಿರುವ ಬಗ್ಗೆ ಖಂಡಿತಾ ನನಗೆ ಬೇಸರವಿದೆ" ಎಂದಿದ್ದಾರೆ ನಟರಾಜನ್. ಇನ್ನು ಇದೇ ಸಂದರ್ಭದಲ್ಲಿ ನಟರಾಜನ್ ಎಲ್ಲಾ ಮಾದರಿಯ ತಂಡದಲ್ಲೂ ಟೀಮ್ ಇಂಡಿಯಾದ ಭಾಗವಾಗಲು ಇಷ್ಟ ಪಡುತ್ತೇನೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಕೆಲಸದ ಒತ್ತಡವನ್ನೂ ನಿಭಾಯಿಸಿಕೊಳ್ಳುತ್ತೇನೆ ಎಂದು ನಟರಾಜನ್ ಹೇಳಿದ್ದಾರೆ.
"ನಾನು ಎಲ್ಲಾ ಮಾದರಿಯಲ್ಲೂ ಆಡುವ ಜೊತೆಗೆ ಕೆಲಸದ ಒತ್ತಡವನ್ನು ನಿಭಾಯಿಸುವತ್ತ ಗಮನಹರಿಸುತ್ತಿದ್ದೇನೆ. ನನ್ನ ಸಾಮರ್ಥ್ಯ ಹಾಗೂ ಸಹನೆಯ ಮಟ್ಟವನ್ನು ಏರಿಸಲು ಮುಮದಿನ ದಿನಗಳಲ್ಲಿ ಬಯಸುತ್ತೇನೆ. ನಾನು ನನ್ನ ಜೋವನದಲ್ಲಿ ಇದೇ ಮೊದಲ ಬಾರಿಗೆ ಸುದೀರ್ಘ 6 ತಿಂಗಳುಗಳ ಕಾಲ ನಿರಂತರವಾಗಿ ಆಡಿದ್ದು ಇದೇ ಮೊದಲು" ಎಂದು ನಟರಾಜನ್ ಹೇಳಿದರು.
This News Article is a Copy of MYKHEL
14-10-26 10:35 am
HK News Staffer
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
14-10-26 10:57 am
HK News Staffer
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm