ಬ್ರೇಕಿಂಗ್ ನ್ಯೂಸ್
25-01-21 04:30 pm Source: MYKHEL Sadashiva ಕ್ರೀಡೆ
ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ಗೆ ಕ್ರಿಕೆಟ್ ನಿರ್ದೇಶಕರಾಗಿ ಶ್ರೀಲಂಕಾದ ಬ್ಯಾಟಿಂಗ್ ದಂತಕತೆ ಕುಮಾರ ಸಂಗಕ್ಕಾರ ಆಯ್ಕೆಯಾಗಿದ್ದಾರೆ. 2021ರ ಐಪಿಎಲ್ ಸೀಸನ್ನಲ್ಲಿ ಸಂಗಕ್ಕಾರ ಆರ್ಆರ್ ತಂಡದ ಜೊತೆಗಿದ್ದು ಬಲ ತುಂಬಲಿದ್ದಾರೆ.
ಸದ್ಯ ಇಂಗ್ಲೆಂಡ್ನ ಮೇರಿಲೆಬೋನ್ ಕ್ರಿಕೆಟ್ ಕ್ಲಬ್ನ (ಎಂಸಿಸಿ) ಅಧ್ಯಕ್ಷರಾಗಿರುವ ಕುಮಾರ ಸಂಗಕ್ಕಾರ ಮುಂದೆ ನಾಗ್ಪುರದ ರಾಯಲ್ಸ್ ಅಕಾಡೆಮಿಯಲ್ಲಿದ್ದು ರಾಜಸ್ಥಾನ್ ರಾಯಲ್ಸ್ನ ಕೋಚಿಂಗ್ ರೂಪುರೇಷೆ, ಆ್ಯಕ್ಷನ್ ಪ್ಲ್ಯಾನ್, ತಂಡದ ತಂತ್ರಗಾರಿಕೆ, ಪ್ರತಿಭಾನ್ವೇಶಣೆ, ತಂಡದ ಅಭಿವೃದ್ಧಿ ಇತ್ಯಾದಿಗಳ ಜವಾಬ್ದಾರಿ ಹೊರಲಿದ್ದಾರೆ. 'ರಾಜಸ್ಥಾನ್ ರಾಯಲ್ಸ್ ತಂಡ ಸೇರಿಕೊಂಡಿದ್ದು ನನಗೆ ಒಳ್ಳೆಯ ಅವಕಾಶ ನೀಡಿದೆ. ಹೊಸ ಸವಾಲು ಹೇಗಿರಲಿದೆ ಎಂಬ ಬಗ್ಗೆ ರೋಮಾಂಚಿತನಾಗಿದ್ದೇನೆ. ಮೈದಾನದಲ್ಲಿ ಐಪಿಎಲ್ ತಂಡ ಭವಿಷ್ಯದಲ್ಲಿ ಬೇರೂರಲು ಅಭಿವೃದ್ಧಿ ಕ್ರಮಗಳನ್ನು ಮಾಡಲಿದ್ದೇನೆ. ಕ್ರಿಕೆಟ್ ಮೂಲ ಸೌಕರ್ಯಗಳತ್ತ ಗಮನ ಹರಿಸಲಿದ್ದೇನೆ,' ಎಂದು ಸಂಗಕ್ಕಾರ ಹೇಳಿದ್ದಾರೆ.
ಶ್ರೀಲಂಕಾ ತಂಡದ ಮಾಜಿ ನಾಯಕರಾಗಿರುವ ಕುಮಾರ ಸಂಗಕ್ಕಾರ, 134 ಟೆಸ್ಟ್ ಪಂದ್ಯಗಳಲ್ಲಿ 12400 ರನ್, 38 ಶತಕ, 404 ಏಕದಿನ ಪಂದ್ಯಗಳಲ್ಲಿ 14234 ರನ್, 25 ಶತಕ, 56 ಟಿ20ಐ ಪಂದ್ಯಗಳಲ್ಲಿ 1382 ರನ್ ಬಾರಿಸಿದ್ದಾರೆ. 71 ಐಪಿಎಲ್ ಪಂದ್ಯಗಳಲ್ಲಿ 1687 ರನ್ ದಾಖಲೆ ಹೊಂದಿದ್ದಾರೆ. ಐಪಿಎಲ್ನಲ್ಲಿ ಸಂಗಕ್ಕಾರ ಕಿಂಗ್ಸ್ XI ಪಂಜಾಬ್, ಡೆಕ್ಕನ್ ಚಾರ್ಜರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದ್ದರು.
This News Article is a Copy of MYKHEL
13-01-26 10:13 pm
HK News Desk
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
13-01-26 10:30 pm
Mangalore Correspondent
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm