ಬ್ರೇಕಿಂಗ್ ನ್ಯೂಸ್
22-01-21 04:12 pm Source: MYKHEL Madhukara Shetty ಕ್ರೀಡೆ
ಬರೋಡಾ ಕ್ರಿಕೆಟಿಗ ದೀಪಕ್ ಹೂಡಾ ಅವರನ್ನು ಬರೋಡಾ ಕ್ರಿಕೆಟ್ ಅಸೋಸಿಯೇಶನ್ ಪ್ರಸಕ್ತ ಕ್ರಿಕೆಟ್ ಋತುವಿಗೆ ಸಂಪೂರ್ಣವಾಗಿ ಅಮಾನತುಗೊಳಿಸುವ ತೀರ್ಮಾ ಕೈಗೊಂಡಿದೆ. ಜನವರಿ 21ರಂದು ಅಪೆಕ್ಸ್ ಕೌನ್ಸಿಲ್ ಮೀಟಿಂಗ್ನಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಮಂಡಳಿಯ ಈ ನಿರ್ಧಾರಕ್ಕೆ ಕೆಲ ಸದಸ್ಯರಯ ವಿರೋಧವನ್ನು ವ್ಯಕ್ತಪಡಿಸಿರುವ ಘಟನೆ ಕೂಡ ನಡೆಯಿತು.
ಬರೋಡಾ ತಂಡದ ನಾಯಕ ಕೃನಾಲ್ ಪಾಂಡ್ಯ ಜೊತೆಗೆ ಮಾತಿನ ಚಕಮಕಿಯ ನಂತರ ದೀಪಕ್ ಹೂಡ ಅಸಮಾಧಾನಗೊಂಡು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಹೊರಬಂದಿದ್ದರು. ದೀಪಕ್ ಹೂಡಾ ಅವರ ಈ ವರ್ತನೆ ಬರೋಡಾ ಕ್ರಿಕೆಟ್ ಮಂಡಳಿಯ ಆಕ್ರೋಕ್ಕೆ ಕಾರಣವಾಗಿದೆ.
"ಪ್ರಸಕ್ತ ದೇಶೀಯ ಋತುವಿನಲ್ಲಿ ದೀಪಕ್ ಹೂಡಾ ಅವರನ್ನು ಬರೋಡಾ ತಂಡವನ್ನು ಪ್ರತಿನಿಧಿಸಲು ಪರಿಗಣಿಸಲಾಗುವುದಿಲ್ಲ ಎಂದು ಅಪೆಕ್ಸ್ ಕೌನ್ಸಿಲ್ ನಿರ್ಧರಿಸಿದೆ. ಘಟನೆಯ ಬಗ್ಗೆ ತಂಡದ ಮ್ಯಾನೇಜರ್ ಮತ್ತು ತರಬೇತುದಾರರ ವರದಿಗಳು ಹಾಗೂ ಹೂಡಾ ಅವರೊಂದಿಗಿನ ಮಾತುಕತೆಯನ್ನು ಪರಿಗಣಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ" ಎಂದು ಬರೋಡಾ ಮಂಡಳಿ ಹೇಳಿದೆ. ದೀಪಕ್ ಹೂಡಾ ಅವರು ಪ್ರಸಕ್ತ ನಡೆಯುತ್ತಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಹಾಗೂ ಈ ಋತುವಿನ ಮುಂಬರುವ ಟೂರ್ನಿಗಳಲ್ಲೂ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. 2021-22ರ ಋತುವಿನಲ್ಲಿ ಹೂಡಾ ಅವರು ಮತ್ತೆ ಆಡುವ ಅಚಕಾಶ ಪಡೆಯಲಿದ್ದಾರೆ" ಎಂದು ಬಿಸಿಎನ ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಮುಖ್ಯಸ್ಥ ಸತ್ಯಜಿತ್ ಗಾಯಕ್ವಾಡ್ ಹೇಳಿದ್ದಾರೆ.
ಆದರೆ ಬಿಸಿಎ ತೆಗೆದುಕೊಮಡಿರುವ ಈ ನಿರ್ಧಾರಕ್ಕೆ ಬಿಸಿಎ ಜೊತೆ ಕಾರ್ಯದರ್ಶಿ ಪರಾಗ್ ಪಟೇಲ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಹೂಡಾ ಅವರು ಮಾಡಿರುವ ತಪ್ಪೆಂದರೆ ತಂಡದ ಮ್ಯಾನೇಜ್ಮೆಂಟ್ ಜೊತೆಗೆ ಘಟನೆಯ ಬಗ್ಗೆ ಚರ್ಚಿಸದೆ ತಂಡದಿಂದ ಹೊರನಡೆದಿದ್ದಾರೆ. ಆದರೆ ಅದಕ್ಕಾಗಿ ಇಡೀ ಋತುವಿನಿಂದ ಅವರನ್ನು ಅಮಾನತು ಮಾಡುವುದು ಅನಗತ್ಯವಾಗಿತ್ತು. ಆತನ ಕೃತ್ಯವನ್ನು ಖಂಡಿಸಿ ಆತನಿಗೆ ಅವಕಾಶವನ್ನು ನೀಡಬಹುದಾಗಿತ್ತು ಎಂದಿದ್ದಾರೆ ಪರಾಗ್ ಪಟೇಲ್.
This News Article is a Copy of MYKHEL
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm