ಬ್ರೇಕಿಂಗ್ ನ್ಯೂಸ್
11-01-21 02:07 pm Source: MYKHEL ಕ್ರೀಡೆ
ಸಿಡ್ನಿ : ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಡ್ರಾದೊಂದಿಗೆ ಅಂತ್ಯಗೊಂಡಿದೆ. ಸೋಲಿನ ಸಮೀಪದಲ್ಲಿದ್ದ ಭಾರತವನ್ನು ದ್ವಿತೀಯ ಇನ್ನಿಂಗ್ಸ್ನಲ್ಲಿ ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ರಿಷಭ್ ಪಂತ್ ಅರ್ಧ ಶತಕ ಮತ್ತು ಹನುಮ ವಿಹಾರಿ, ರವಿಚಂದ್ರನ್ ಅಶ್ವಿನ್ ಅವರ ಅಜೇಯ ಆಟ ಸೋಲಿನಿಂದ ಪಾರು ಮಾಡಿದೆ. ಇದರೊಂದಿಗೆ ನಾಲ್ಕು ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ ವಿಲ್ ಪುಕೊವ್ಸ್ಕಿ 62, ಮಾರ್ನಸ್ ಲಾಬುಶೇನ್ 91, ಸ್ಟೀವನ್ ಸ್ಮಿತ್ 131, ಮ್ಯಾಥ್ಯೂ ವೇಡ್ 13, ಮಿಚೆಲ್ ಸ್ಟಾರ್ಕ್ 24 ರನ್ ಬಾರಿಸಿದ್ದರು. ಆಸೀಸ್ 105.4 ಓವರ್ಗೆ 338 ರನ್ ಪೇರಿಸಿತ್ತು.

ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಹಿನ್ನಡೆ
ಮೊದಲ ಇನ್ನಿಂಗ್ಸ್ನಲ್ಲಿ ಭಾರತದಿಂದ ರೋಹಿತ್ ಶರ್ಮಾ 26, ಶುಬ್ಮನ್ ಗಿಲ್ 50, ಚೇತೇಶ್ವರ್ ಪೂಜಾರ 50, ನಾಯಕ ಅಜಿಂಕ್ಯ ರಹಾನೆ 22, ರಿಷಭ್ ಪಂತ್ 36, ರವೀಂದ್ರ ಜಡೇಜಾ ಅಜೇಯ 28, ರವಿಚಂದ್ರನ್ ಅಶ್ವಿನ್ 10, ಮೊಹಮ್ಮದ್ ಸಿರಾಜ್ 6 ರನ್ ಬಾರಿಸಿದರು. ಭಾರತ 100.4 ಓವರ್ಗೆ ಎಲ್ಲಾ ವಿಕೆಟ್ ಕಳೆದು 244 ರನ್ ಪೇರಿಸಿ 94 ರನ್ ಹಿನ್ನಡೆ ಅನುಭವಿಸಿತು.

312 ರನ್ಗೆ ಆಸ್ಟ್ರೇಲಿಯಾ ಡಿಕ್ಲೇರ್
ದ್ವಿತೀಯ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ, ಡೇವಿಡ್ ವಾರ್ನರ್ 13, ವಿಲ್ ಪುಕೊವ್ಸ್ಕಿ 10, ಮಾರ್ನಸ್ ಲಾಬುಶೇನ್ 73, ಸ್ಟೀವನ್ ಸ್ಮಿತ್ 81, ಕ್ಯಾಮರಾನ್ ಗ್ರೀನ್ 84, ಟಿಮ್ ಪೇನ್ ಅಜೇಯ 39 ರನ್ನೊಂದಿಗೆ 87 ಓವರ್ಗೆ 6 ವಿಕೆಟ್ ಕಳೆದು 312 ರನ್ ಗಳಿಸಿ ಡಿಕ್ಲೇರ್ ಘೋಷಿಸಿದೆ.

ರಿಷಭ್ ಪಂತ್ ಭರ್ಜರಿ ಬ್ಯಾಟಿಂಗ್
ದ್ವಿತೀಯ ಇನ್ನಿಂಗ್ಸ್ನಲ್ಲಿ ಭಾರತದಿಂದ ರೋಹಿತ್ ಶರ್ಮಾ 52, ಶುಬ್ಮನ್ ಗಿಲ್ 31, ಚೇತೇಶ್ವರ್ ಪೂಜಾರ 77, ರಿಷಭ್ ಪಂತ್ 97, ಹನುಮ ವಿಹಾರಿ ಅಜೇಯ 23, ರವಿಚಂದ್ರನ್ ಅಶ್ವಿನ್ ಅಜೇಯ ಅಜೇಯ 39 ರನ್ ಸೇರಿಸಿದರು. 131 ಓವರ್ಗೆ ಭಾರತ 5 ವಿಕೆಟ್ ಕಳೆದು 334 ರನ್ ಬಾರಿಸಿತ್ತು. ಆದರೆ ದಿನದಾಟ ಮುಗಿದಿದ್ದರಿಂದ ಫಲಿತಾಂಶ ಡ್ರಾ ಎಂದು ಘೋಷಿಸಲ್ಪಟ್ಟಿತು.

ಪ್ಯಾಟ್ ಕಮಿನ್ಸ್ ಬೆಸ್ಟ್ ಬೌಲಿಂಗ್
ಆಸ್ಟ್ರೇಲಿಯಾ ಇನ್ನಿಂಗ್ಸ್ನಲ್ಲಿ ಜಸ್ಪ್ರೀತ್ ಬೂಮ್ರಾ 2+1, ಮೊಹಮ್ಮದ್ ಸಿರಾಜ್ 1+1, ಆರ್ ಅಶ್ವಿನ್ 2, ನವದೀಪ್ ಸೈನಿ 2+2, ರವೀಂದ್ರ ಜಡೇಜಾ 4 ವಿಕೆಟ್ ಪಡೆದರೆ, ಭಾರತದ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 1, ಜೋಶ್ ಹ್ಯಾಝಲ್ವುಡ್ 2+2, ಪ್ಯಾಟ್ ಕಮಿನ್ಸ್ 4+1, ನೇಥನ್ ಲಿಯಾನ್ 1 ವಿಕೆಟ್ನೊಂದಿಗೆ ಗಮನ ಸೆಳೆದರು. ಸ್ಟೀವ್ ಸ್ಮಿತ್ ಪಂದ್ಯಶ್ರೇಷ್ಠರೆನಿಸಿದರು.
This News Article is a Copy of MYKHEL
13-01-26 10:13 pm
HK News Desk
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
13-01-26 10:30 pm
Mangalore Correspondent
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm