ಬ್ರೇಕಿಂಗ್ ನ್ಯೂಸ್
09-01-21 03:51 pm Source: MYKHEL Sadashiva ಕ್ರೀಡೆ
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ನ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ 2021ರ ಸೀಸನ್ನಲ್ಲಿ ಪರದಾಡಿತ್ತು. ಅಲ್ಲದೆ ಲೀಗ್ ಹಂತದಲ್ಲಿ ಹೊರ ಬಿದ್ದ ಮೊದಲ ತಂಡವಾಗಿ ಗುರುತಿಸಿಕೊಂಡಿತ್ತು. ಅಷ್ಟೇ ಅಲ್ಲ, ಐಪಿಎಲ್ ಇತಿಹಾಸದಲ್ಲಿ ಸಿಎಸ್ಕೆ ಪ್ಲೇ ಆಫ್ಗೆ ಪ್ರವೇಶಿಸದೆಯೇ ಹೊರ ಬಿದ್ದಿದ್ದು ಕಳೆದ ಸೀಸನ್ನಲ್ಲೇ ಮೊದಲು. ಟೂರ್ನಿ ಮುಗಿಯುವಾಗ ಸಿಎಸ್ಕೆ 7ನೇ ಸ್ಥಾನಿಯಾಗಿ ಅಂಕಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು.
14 ಆವೃತ್ತಿಯ ಐಪಿಎಲ್ಗೆ ಬಿಸಿಸಿಐ ತಯಾರಿ ನಡೆಸುತ್ತಿರುವ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಕೂಡ ತಂಡದಲ್ಲಿ ಆಟಗಾರರನ್ನು ಬದಲಾಯಿಸಿಕೊಳ್ಳಲು ಯೋಚಿಸುತ್ತಿದೆ. ಕಳೆದ ಸೀಸನ್ನಲ್ಲಿ ತಂಡ ಕೆಟ್ಟ ಪ್ರದರ್ಶನ ನೀಡಿದ್ದರಿಂದ ಮುಂಬರುವ ಸೀಸನ್ಲ್ಲಿ ಸಿಎಸ್ಕೆ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದೆ.
ಫೆಬ್ರವರಿಯಲ್ಲಿ 2021ರ ಐಪಿಎಲ್ಗಾಗಿ ಆಟಗಾರರ ಹರಾಜು ನಡೆಯಲಿದೆ. ಆದರೆ ಇದಕ್ಕೂ ಮುನ್ನವೇ ಸಿಎಸ್ಕೆ ಪ್ರಮುಖ 7-8 ಆಟಗಾರರನ್ನು ತಂಡದಿಂದ ಕೈಬಿಡಲಿದೆ ಎನ್ನಲಾಗುತ್ತಿದೆ.
ತಂಡದಿಂದ ಹೊರ ಹಾಕೋದ್ಯಾಕೆ
ಸಿಎಸ್ಕೆ ತಂಡದಿಂದ ಪ್ರಮುಖ ಆಟಗಾರರನ್ನು ಹೊರ ಹಾಕುವುದರಲ್ಲಿದೆ ಯಾಕೆಂದರೆ ಸಿಎಸ್ಕೆ ಪರ್ಸ್ನಲ್ಲಿ ಸದ್ಯ ಏನೂ ಹಣವಿಲ್ಲ. ಸಿಎಸ್ಕೆ ಪರ್ಸ್ನಲ್ಲಿ ಸದ್ಯ ಕೇವಲ 15 ಲಕ್ಷ ಮಾತ್ರ ಹಣವಿದೆ. ಈ ಬಾರಿಯ ಹರಾಜಿನ ವೇಳೆ ಪರ್ಸ್ ಮೌಲ್ಯವನ್ನು ಹೆಚ್ಚಿಸಲಾಗುವುದಿಲ್ಲ ಎಂದು ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಈಗಾಗಲೇ ಹೇಳಿರುವುದರಿಂದ ಹೆಚ್ಚು ಬೆಲೆ ಬಾಳುವ ಆದರೆ ಫಾರ್ಮ್ನಲ್ಲಿ ಇಲ್ಲದ ಪ್ರಮುಖ ಆಟಗಾರರನ್ನು ಕೈ ಬಿಡಲು ಸಿಎಸ್ಕೆ ಯೋಚಿಸಿದೆ ಎಂದು ತಿಳಿದುಬಂದಿದೆ.
ಪ್ರಮುಖ ಆಟಗಾರರು ಹೊರಕ್ಕೆ
2021ರ ಐಪಿಎಲ್ ಸೀಸನ್ನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಆಲ್ ರೌಂಡರ್ ಕೇದಾರ್ ಜಾಧವ್, ಇಮ್ರಾನ್ ತಾಹಿರ್, ಡ್ವೇನ್ ಬ್ರಾವೋ, ಹರ್ಭಜನ್ ಸಿಂಗ್ ಇಂಥ ಪ್ರಮುಖ ಆಟಗಾರರನ್ನು ಕೈಬಿಡಲಿದೆ. ಇದರಲ್ಲಿ ಕಳೆದ ಸೀಸನ್ನಲ್ಲಿ ಕೆಲವರಿಗೆ ಆಡಲು ಸರಿಯಾದ ಅವಕಾಶ ಲಭಿಸಲಿಲ್ಲ. ಅವಕಾಶ ಲಭಿಸಿದ ಒಂದಿಷ್ಟು ಮಂದಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆದರೆ ಮುಂದಿನ ಬಾರಿಯೂ ಸಿಎಸ್ಕೆ ಎಂದಿನ ನಾಯಕ ಎಂಎಸ್ ಧೋನಿ ಅವರೇ ಕ್ಯಾಪ್ಟನ್ ಆಗಿರಲಿದ್ದಾರೆ ಎನ್ನಲಾಗಿದೆ.
ಹೊರ ಬೀಳಬಹುದಾದ ಆಟಗಾರರು
1) ಕೇದಾರ ಜಾಧವ್ - 7.8 ಕೋ.ರೂ.
2) ಇಮ್ರಾನ್ ತಾಹಿರ್ - 1 ಕೋ.ರೂ.
3) ಪಿಯೂಷ್ ಚಾವ್ಲಾ - 6.75 ಕೋ.ರೂ.
4) ಹರ್ಭಜನ್ ಸಿಂಗ್ - 2 ಕೋ.ರೂ.
5) ಮುರಳಿ ವಿಜಯ್ - 2 ಕೋ.ರೂ.
6) ಡ್ವೇನ್ ಬ್ರಾವೋ - 6.4 ಕೋ.ರೂ. (ಫಿಟ್ನೆಸ್ ಅನ್ನು ಅವಲಂಬಿಸಿರುತ್ತದೆ)
7) ಜೋಶ್ ಹ್ಯಾಝಲ್ವುಡ್ 2.0 ಕೋ.ರೂ.
8) ಕರ್ಣ್ ಶರ್ಮಾ 5 ಕೋ.ರೂ.
ಉಳಿಸಿಕೊಳ್ಳಬಹುದಾದ ಆಟಗಾರರು
1) ಎಂ.ಎಸ್ ಧೋನಿ (15 ಕೋ.ರೂ.)
2) ದೀಪಕ್ ಚಾಹರ್
3) ಲುಂಗಿ ಎನ್ಗಿಡಿ (0.50 ಕೋ.ರೂ.)
4) ರವೀಂದ್ರ ಜಡೇಜಾ (7 ಕೋ.ರೂ.)
5) ರುತುರಾಜ್ ಗಾಯಕ್ವಾಡ್ (0.2 ಕೋ.ರೂ.)
6) ಶಾರ್ದೂಲ್ ಠಾಕೂರ್ (2.6 ಕೋ.ರೂ.)
7) ಸ್ಯಾಮ್ ಕರ್ರನ್ (5.5 ಕೋ.ರೂ.)
8) ನಾರಾಯಣ್ ಜಗದೀಶನ್ (0.2 ಕೋ.ರೂ.)
This News Article is a Copy of MYKHEL
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 01:34 pm
Udupi Correspondent
Manjunath Bhandary, Kukke Temple, Mangalore:...
14-05-25 08:05 pm
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm