ಬ್ರೇಕಿಂಗ್ ನ್ಯೂಸ್
07-01-21 05:03 pm Source: MYKHEL Madhukara Shetty ಕ್ರೀಡೆ
ಐಪಿಎಲ್ನ 14ನೇ ಆವೃತ್ತಿ ಇನ್ನೇನು ಮೂರ್ನಾಲ್ಕು ತಿಂಗಳಲ್ಲಿ ಆರಂಭವಾಗಲಿದೆ. ಅದಕ್ಕೂ ಮುನ್ನ ಐಪಿಎಲ್ ತಂಡಗಳ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಸೋಮವಾರ ಐಪಿಎಲ್ ಆಡಳಿತ ಮಂಡಳಿಯ ಸಭೆ ನಡೆದಿದ್ದು ಫೆಬ್ರವರಿ 11ರಂದು ಮಿನಿ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ.
ಸೋಮವಾರ ವರ್ಚುವಲ್ ವೇದಿಕೆಯಲ್ಲಿ ನಡೆದ ಮೀಟಿಂಗ್ನಲ್ಲಿ ಖಚಿತ ದಿನಾಂಕ ಹಾಗೂ ಐಪಿಎಲ್ ಆಯೋಜನೆಯ ಸ್ಥಳದ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ. ಆದರೆ ಈ ಬಾರಿಯ ಐಪಿಎಲ್ನಲ್ಲಿ ಈ ಹಿಂದಿನ ಆವೃತ್ತಿಯಂತೆ 8 ತಂಡಗಳು ಮಾತ್ರವೇ ಪಾಲ್ಗೊಳ್ಳಲಿದೆ ಎಂಬ ಖಚಿತ ನಿರ್ಧಾರವನ್ನು ಈ ಹಿಂದೆಯೇ ತೆಗೆದುಕೊಳ್ಳಲಾಗಿತ್ತು.
ಫೆಬ್ರವರಿ ತಿಂಗಳ ಮೊದಲ ವಾರದಿಂದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆರಂಭವಾಗಲಿದೆ. ಮೊದಲ ಹಾಗೂ ಎರಡನೇ ಟೆಸ್ಟ್ನ ವಿರಾಮದ ಸಂದರ್ಭದಲ್ಲಿ ಮಿನಿ ಹರಾಜು ನಡೆಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಹಾಗಾದರೆ ಈ ಹರಾಜು ಪ್ರಕ್ರಿಯೆಯ ನಿಯಮಗಳೇನು? ಯಾವ ಆಟಗಾರರು ವರ್ಗಾವಣೆಗೆ ಅರ್ಹರಾಗಿರುತ್ತಾರೆ?

ಆಟಗಾರರ ವರ್ಗಾವಣೆ ನಿಯಮ
ಐಪಿಎಲ್ನಲ್ಲಿನ ಹೊಸ ನಿಯಮದ ಪ್ರಕಾರ ಫ್ರಾಂಚೈಸಿಗಳು ಆಂತರಿಕವಾಗಿ ಕ್ಯಾಪ್ಡ್ ಅಥವಾ ಅನ್ಕ್ಯಾಪ್ಡ್ ಆಟಗಾರರನ್ನು ಬದಲಾಯಿಸಿಕೊಲ್ಳುವ ಅವಕಾಶವನ್ನು ನೀಡಲಾಗಿದೆ. ಈ ಹಿಂದೆ ಕೇವಲ ಅನ್ಕ್ಯಾಪ್ಡ್ ಅಂದರೆ ಆಡದ ಆಟಗಾರರನ್ನು ಮಾತ್ರವೇ ವರ್ಗಾವಣೆ ಮಾಡುವ ಅವಕಾಶವಿತ್ತು.

ತಂಡದ ಪರ್ಸ್ನಲ್ಲಿ ಉಳಿದಿರುವ ಮೊತ್ತ
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಈಗ ಕೇವಲ 0.15 ಕೋಟಿ ಮಾತ್ರವೇ ಬಾಕಿ ಉಳಿದುಕೊಂಡಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 16.5 ಕೋಟಿ ಮೊತ್ತವನ್ನು ಹೊಂದಿದ್ದು ಹೆಚ್ಚಿನ ಮೊತ್ತವನ್ನು ಉಳಿಸಿಕೊಂಡಿರುವ ತಂಡವಾಗಿದೆ. ರಾಜಸ್ಥಾನ ರಾಯಲ್ಸ್(14.75 ಕೋಟಿ), ಸನ್ರೈಸರ್ಸ್ ಹೈದರಾಬಾದ್ (10.1ಕೋಟಿ) ಡೆಲ್ಲಿ ಕ್ಯಾಪಿಟಲ್ಸ್ (9 ಕೋಟಿ), ಕೊಲ್ಕತ್ತಾ ನೈಟ್ ರೈಡರ್ಸ್(8.5 ಕೋಟಿ) ರಾಯಲ್ ಚಾಲೆಂಜರ್ಸ್ ಬೆಂಗಳೂರು (6.4 ಕೋಟಿ) ಮುಂಬೈ ಇಂಡಿಯನ್ಸ್(1.95 ಕೋಟಿ)

ಐಪಿಎಲ್ 2021 ಶೆಡ್ಯೂಲ್
ಐಪಿಎಲ್ನ 14ನೇ ಆವೃತ್ತಿ ಮಾರ್ಚ್ ಅಂತ್ಯಕ್ಕೆ ಆರಂಭವಾಗಿ ಮೇ ಮಧ್ಯಭಾಗದಲ್ಲಿ ಅಂತ್ಯವಾಗುವ ನಿರೀಕ್ಷೆಯಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಬಾರಿಯ ಐಪಿಎಲ್ ಆವೃತ್ತಿಯನ್ನು ಭಾರತದಲ್ಲೇ ಆಯೋಜಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿಯ ಐಪಿಎಲ್ ಆವೃತ್ತಿ ಕೊರೊನಾ ವೈರಸ್ನ ಕಾರಣದಿಂದಾಗಿ ಯುಎಇನಲ್ಲಿ ಆಯೋಜನೆಯಾಗಿತ್ತು. ಕೊರೊನಾ ವೈರಸ್ನ ತೀವ್ರತೆ ಕಡಿಮೆಯಾಗದಿದ್ದಲ್ಲಿ ಈ ಬಾರಿಯೂ ಯುಎಇನಲ್ಲೆ ಐಪಿಎಲ್ ಆಯೋಜನೆಯಾಗುವ ಸಂಭವವಿದೆ.
This News Article is a Copy of MYKHEL
13-01-26 10:13 pm
HK News Desk
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
13-01-26 10:30 pm
Mangalore Correspondent
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm