ಬ್ರೇಕಿಂಗ್ ನ್ಯೂಸ್
23-12-20 02:33 pm Source: MYKHEL Madhukara Shetty ಕ್ರೀಡೆ
ಗುರುಗ್ರಾಮ್, ಡಿ.23 : ಟೀಮ್ ಇಂಡಿಯಾದ ಪ್ರಮುಖ ಸ್ಪಿನ್ನರ್ ಯುಜುವೇಂದ್ರ ಚಾಹಲ್ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಪ್ರೇಯಸಿ ಧನಶ್ರೀ ವರ್ಮಾ ಜೊತೆಗೆ ಗುರುಗ್ರಾಮ್ನಲ್ಲಿ ಡಿಸೆಂಬರ್ 22ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುಗ್ರಾಮ್ನ ಕರ್ಮ ಲೇಕ್ ರೆಸಾರ್ಟ್ನಲ್ಲಿ ಆಪ್ತ ವಲಯದ ಸಮ್ಮುಖದಲ್ಲಿ ಈ ಮದುವೆ ಕಾರ್ಯಕ್ರಮ ನಡೆದಿದೆ.
ಮದುವೆ ಕಾರ್ಯಕ್ರಮದ ಫೋಟೋಗಳನ್ನು ಯುಜುವೇಂದ್ರ ಚಾಹಲ್ ಹಾಗೂ ಧನಶ್ರೀ ವರ್ಮಾ ಇಬ್ಬರೂ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು ಈ ಫೋಟೋಗಳೂ ವೈರಲ್ ಆಗುತ್ತಿದೆ. ನವ ದಂಪತಿಗಳಿಗೆ ಅಭಿಮಾನಿಗಳು ಶುಭಾಶಯಗಳನ್ನು ಸುರಿಮಳೆ ಹರಿಸುತ್ತಿದ್ದಾರೆ. ಕಡು ಕೆಂಪು ಬಣ್ಣದ ಲೆಹಂಗಾದಲ್ಲಿ ಧನಶ್ರೀ ಕಂಗೊಳಿಸುತ್ತಿದ್ದರೆ ಯುಜುವೇಂದ್ರ ಚಾಹಲ್ ಶೇರ್ವಾನಿ ಹಾಗೂ ಟರ್ಬನ್ ತೊಟ್ಟು ಮದುಮಗನಾಗಿ ಮಿಂಚುತ್ತಿದ್ದಾರೆ.


ಧನಶ್ರೀ ವರ್ಮಾ ಡಾನ್ಸ್ ಕೊರಿಯೋಗ್ರಾಫರ್ ಆಗಿ ಖ್ಯಾತರಾಗಿದ್ದು ಲಾಕ್ಡೌನ್ ಸಂದರ್ಭದಲ್ಲಿ ಈ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿ ಈಗ ಮದುವೆಯ ಹಂತಕ್ಕೆ ತಲುಪಿದೆ. ಲಾಕ್ಡೌನ್ ಸಂದರ್ಭದಲ್ಲಿ ಟಿಕ್ಟಾಕ್ನಲ್ಲಿ ನೃತ್ಯಗಳನ್ನು ಮಾಡುತ್ತಾ ಚಾಹಲ್ ಖ್ಯಾತರಾಗಿದ್ದರು. ಈ ಸಂದರ್ಭದಲ್ಲಿ ನೃತ್ಯಾಭ್ಯಾಸಕ್ಕಾಗಿ ಧನಶ್ರೀ ಅವರನ್ನು ಚಾಹಲ್ ಸಂಪರ್ಕಿಸಿದ್ದು ಹೀಗೆ ಗುರು ಶಿಷ್ಯರಾಗಿ ಆರಂಭವಾದ ಈ ಪರಿಚಯ ಬಳಿಕ ಪ್ರೀತಿಗೆ ತಿರುಗಿತ್ತು ಎಂದು ಧನಶ್ರೀ ವರ್ಮಾ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಯುಜವೇಂದ್ರ ಚಾಹಲ್ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್ಗಳ ಸರಣಿಯ ಭಾಗವಾಗಿದ್ದರು. ಸೀಮಿತ ಓವರ್ಗಳ ಸರಣಿ ಅಂತ್ಯವಾದ ಬಳಿಕ ಚಾಹಲ್ ಭಾರತಕ್ಕೆ ಮರಳಿದ್ದು ಮದುವೆಯ ಸಿದ್ಧತೆಯನ್ನು ನಡೆಸಿದ್ದರು. ಮಂಗಳವಾರದಂದು ಚಾಹಲ್ ಹಾಗೂ ಧನಶ್ರೀ ಮದುವೆಯ ಬಂಧನಕ್ಕೆ ಒಳಗಾಗಿದ್ದಾರೆ.
ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಯುಜುವೇಂದ್ರ ಚಾಹಲ್ ಹಾಗೂ ಧನಶ್ರಿ ರೋಕಾ ಕಾರ್ಯಕ್ರಮದ ಮೂಲಕ ತಮ್ಮ ಮದುವೆಯ ನಿರ್ಧಾರವನ್ನು ಬಹಿರಂಗ ಪಡಿಸಿದ್ದರು. ಐಪಿಎಲ್ ಸಂದರ್ಭದಲ್ಲಿ ಧನಶ್ರೀ ಯುಎಇಗೆ ತೆರಳಿ ಚಾಹಲ್ಗೆ ಸಾಥ್ ನೀಡಿದ್ದರು.
This News Article is a Copy of MYKHEL
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm