ಬ್ರೇಕಿಂಗ್ ನ್ಯೂಸ್
12-12-20 04:15 pm Source: MYKHEL Madhukara Shetty ಕ್ರೀಡೆ
ಐಪಿಎಲ್ ಅಭಿಮಾನಿಗಳಿಗೆ ಆರ್ಸಿಬಿ ತಂಡ ಎಷ್ಟು ಪರಿಚಿತವೋ ಮಿಸ್ಟರ್ ನ್ಯಾಗ್ಸ್ ಕೂಡ ಅಷ್ಟೇ ಪರಿಚಿತ. ಯಾಕೆಂದರೆ ಆರ್ಸಿಬಿಯ ಈ ಇನ್ಸೈಡರ್ ಮಿಸ್ಟರ್ ನ್ಯಾಗ್ಸ್ ತಂಡದ ಆಟಗಾರರಷ್ಟೇ ಅಭಿಮಾನಿ ವರ್ಗವನ್ನು ಪಡೆದುಕೊಂಡಿದ್ದಾರೆ. ಈ ಮಿಸ್ಟರ್ ನ್ಯಾಗ್ಸ್ ಖ್ಯಾತಿಯ ನಟ ದಾನೀಶ್ ಸೇಠ್ ಈಗ ಒಂಟಿ ಜೀವನದಿಂದ ಜಂಟಿ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಬೆಂಗಳೂರು ಮೂಲದವರಾದ ದಾನೀಶ್ ಸೇಠ್ ಈ ಮಿಸ್ಟರ್ ನ್ಯಾಗ್ಸ್ ಪಾತ್ರವನ್ನು ಕಳೆದ ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಈ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಕೂಡ ಸಂಪಾದಿಸಿದ್ದಾರೆ. ಇದೀಗ ದಾನೀಶ್ ಸೇಠ್ ತಮ್ಮ ಬಾಳ ಸಂಗಾತಿಯನ್ನು ಆಯ್ಕೆ ಮಾಡಿದ್ದು ಈ ಬಗ್ಗೆ ಟ್ವಿಟ್ಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
"ಅವರು ಯಸ್ ಅಂದಿದ್ದಾರೆ. ತುಂಬಾ ಸಂತೋಷಗೊಂಡಿದ್ದೇನೆ. ನಿಮ್ಮ ಜೀವನವನ್ನು ನನ್ನ ಜೊತೆಗೆ ಕಳೆಯಲು ತೀರ್ಮಾನಿಸಿದಕ್ಕೆ ಧನ್ಯವಾದಗಳು @ಅನ್ಯ ರಂಗಸ್ವಾಮಿ" ಎಂದು ದಾನೀಶ್ ಸೇಠ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ದಾನೀಶ್ ಸೇಠ್ ಜೀವನ ಸಂಗಾತಿಯಾಗಲಿರುವ ಅನ್ಯ ರಂಗಸ್ವಾಮಿ ಕೂಡ ಬೆಂಗಳೂರು ಮೂಲದವೇ ಆಗಿದ್ದು ಮುಂಬೈನಲ್ಲಿ ಗ್ರಾಫಿಕ್ಸ್ ಡಿಸೈನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಐಪಿಎಲ್ನಲ್ಲಿ ಆರ್ಸಿಬಿ ತಂಡದ ಪಂದ್ಯದ ಸಂದರ್ಭದಲ್ಲಿ ಅಭಿಮಾನಿಗಳು ಈ ಮಿಸ್ಟರ್ ನ್ಯಾಗ್ಸ್ ಮಾಡುವ ತರಲೆ ಹಾಗೂ ತಮಾಷೆಯನ್ನು ನೋಡಲು ಅಭಿಮಾನಿಗಳು ಆರ್ಸಿಬಿಯ ಪಂದ್ಯವನ್ನು ನೋಡಿದಷ್ಟೇ ಸಂತಸ ಪಡುತ್ತಾರೆ. ತಂಡ ಗೆಲ್ಲಲಿ ಅಥವಾ ಸೋಲಲಿ ನ್ಯಾಗ್ಸ್ ಮಾಡುವ ಸಮಯೋಚಿತ ತಮಾಷೆಗಳು ಗೆಲುವಿನಲ್ಲಿ ಮಾತ್ರವಲ್ಲ ಸೋಲಿನಲ್ಲೂ ಅಭಿಮಾನಿಗಳ ಮುಖದಲ್ಲಿ ನಗು ತರಿಸುತ್ತದೆ.
This News Article is a Copy of MYKHEL
She said yes! Very happy. Thanks for deciding to spend your life with me @anyarangaswami ❤️ pic.twitter.com/Ifbpe97xrS
— Danish Sait (@DanishSait) December 11, 2020
13-10-25 10:09 pm
HK News Desk
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
D.K. Shivakumar, MLA Munirathna, RSS: ಮುನಿರತ್...
12-10-25 08:05 pm
13-10-25 10:37 pm
HK News Desk
Kerala, IT professional dead, RSS members: ಆರ...
13-10-25 05:31 pm
ಪಾಕಿಸ್ತಾನದ ಸೇನಾ ಔಟ್ ಪೋಸ್ಟ್ ಮೇಲೆ ಅಫ್ಘಾನ್ ಭೀಕರ...
12-10-25 10:19 pm
Afghan Foreign Minister, Amir Khan Muttaqi: ಮ...
11-10-25 12:52 pm
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
13-10-25 07:47 pm
Udupi Correspondent
ಆರೆಸ್ಸೆಸ್ ಸೇವಾ ಚಟುವಟಿಕೆ ತಿಳಿಯದ ಪ್ರಿಯಾಂಕ ಖರ್ಗೆ...
13-10-25 04:33 pm
Honey Bees Attack in Puttur: ಪುತ್ತೂರು ; ಹೆಜ್ಜ...
12-10-25 09:53 pm
ಪುತ್ತೂರಿಗೆ ಬಂದಿದ್ದ ಇಬ್ಬರು ಯುವತಿಯರು ದಿಢೀರ್ ನಾಪ...
12-10-25 06:53 pm
Uchila Fire, Mangalore: ಹೊತ್ತಿ ಉರಿದ ಉಚ್ಚಿಲದ ಗ...
12-10-25 05:46 pm
13-10-25 10:04 pm
Mangalore Correspondent
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm