ಬ್ರೇಕಿಂಗ್ ನ್ಯೂಸ್
27-06-24 11:15 am HK News Desk ಕ್ರೀಡೆ
ಗಯಾನ, (ವೆಸ್ಟ್ ಇಂಡೀಸ್) ಜೂನ್ 27: 1992ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಯ ಯಾವುದೇ ಪ್ರಕಾರದ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ತಲುಪಲು ವಿಫಲವಾಗುತ್ತಲೇ ಚೋಕರ್ಸ್ ಎಂಬ ಹಣೆಪಟ್ಟಿ ಹೊತ್ತಿದ್ದ ದಕ್ಷಿಣ ಆಫ್ರಿಕಾ ತನಗಂಟಿದ್ದ ಅಪವಾದದಿಂದ ಹೊರಬಂದಿದ್ದು ಟಿ 20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್ ಪ್ರವೇಶ ಮಾಡಿದೆ. ಗುರುವಾರ ನಡೆದ ಮೊದಲ ಸೆಮಿಫೈನಲ್ ನಲ್ಲಿ ಆಫ್ರಿಕನ್ನರು ಅಫ್ಘಾನಿಸ್ತಾನ ತಂಡವನ್ನು ಒಂಬತ್ತು ವಿಕೆಟ್ ಅಂತರದಿಂದ ನಿರಾಯಾಸವಾಗಿ ಸೋಲಿಸಿ ಶಾಪ ವಿಮೋಚನೆ ಮಾಡಿಕೊಂಡಿದ್ದಾರೆ.
ಕಠಿಣ ಪಿಚ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ಯಾವ ಹಂತದಲ್ಲೂ ಹರಿಣಗಳ ಬೌಲಿಂಗ್ ದಾಳಿಗೆ ಪ್ರತ್ಯುತ್ತರ ನೀಡುವಲ್ಲಿ ವಿಫಲವಾಯಿತು. ಮೊದಲ ಓವರ್ನಲ್ಲೇ ರಹಮಾನುಲ್ಲಾ ಗುರ್ಬಾಜ್ (0) ಖಾತೆ ತೆರೆಯದೆ ನಿರ್ಗಮನ ಕಂಡ ನಂತರ ಯಾವ ಬ್ಯಾಟರ್ ಗಳೂ ಹರಿಣಗಳ ಬೌಲಿಂಗ್ ದಾಳಿಯನ್ನು ಮೆಟ್ಟಿ ನಿಲ್ಲಲಿಲ್ಲ. ಇಡೀ ಅಫ್ಘನ್ ತಂಡದಲ್ಲಿ ಅಜ್ಮತುಲ್ಲಾ ಒಮರ್ಜಾಯಿ(10) ಒಬ್ಬರಷ್ಟೇ ಎರಡಂಕೆ ತಲುಪಿದರು. ದಕ್ಷಿಣ ಆಫ್ರಿಕಾ ಇತರೆ ರೂಪದಲ್ಲಿ ನೀಡಿದ 13 ರನ್ ಗಳೇ ಅಫ್ಘನ್ ಪಾಲಿನ ಗರಿಷ್ಠ ಮೊತ್ತವಾಗಿತ್ತು. ಆಫ್ರಿಕಾ ಪರ ತಬ್ರೈಜ್ ಶಮ್ಸಿ(6/3), ಮಾರ್ಕೋ ಜಾನೆಸನ್(16/3), ಆನ್ರಿಕ್ ನೋಕಿಯ(7/2), ಕಾಗಿಸೊ ರಬಾಡ(14/2) ಬಿಗು ಬೌಲಿಂಗ್ ದಾಳಿಯ ಮೂಲಕ ಎದುರಾಳಿ ತಂಡದ ಬ್ಯಾಟಿಂಗ್ ಪಡೆಯನ್ನು ಬುಡಮೇಲು ಮಾಡಿದರು. ಪರಿಣಾಮ ಅಫ್ಘಾನಿಸ್ತಾನ ತಂಡ 11.5 ಓವರ್ಗಳಲ್ಲಿ 56 ರನ್ ಗೆ ಆಲೌಟಾಯಿತು. ಇದು ಟಿ 20 ವಿಶ್ವಕಪ್ ನಾಕೌಟ್ ಹಂತದಲ್ಲಿ ದಾಖಲಾದ ಅತ್ಯಂತ ಕಡಿಮೆ ಮೊತ್ತ ಎನಿಸಿತು.
ಸುಲಭ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕ್ವಿಂಟನ್ ಡಿಕಾಕ್(5)ರನ್ನು ಬೇಗನೆ ಕಳೆದುಕೊಂಡರೂ ರೀಜಾ ಹೆಂಡ್ರಿಕ್ಸ್ ಮತ್ತು ನಾಯಕ ಐಡನ್ ಮಾರ್ಕ್ರಂ ಹೆಚ್ಚಿನ ಆಘಾತವಾಗದಂತೆ ಗೆಲುವಿನ ಓಟ ಪೂರೈಸಿದರು. 8.5 ಓವರ್ನಲ್ಲೇ ಒಂದು ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿ ಫೈನಲ್ ಪ್ರವೇಶಿಸಿತು.
ಸಂಕ್ಷಿಪ್ತ ಸ್ಕೋರ್ಅ ಫ್ಘಾನಿಸ್ತಾನ 11.5 ಓವರ್ಗಳಲ್ಲಿ 56(ಇತರೆ ಸ್ಕೋರ್ 13, ಒಮರ್ಜಾಯಿ 10, ಶಮ್ಸಿ 6/3, ಜಾನೆಸನ್ 16/3)
ದಕ್ಷಿಣ ಆಫ್ರಿಕಾ 8.5 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 60(ಹೆಂಡ್ರಿಕ್ಸ್ 29*, ಮಾರ್ಕ್ರಂ 23*, ಫರೂಕಿ 11/1)
A long, tortuous World Cup title drought is closer than ever to ending for South Africa after a nine-wicket win over first-time semifinalist Afghanistan at the global Twenty20 cricket tournament on Wednesday.
13-10-25 10:09 pm
HK News Desk
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
D.K. Shivakumar, MLA Munirathna, RSS: ಮುನಿರತ್...
12-10-25 08:05 pm
13-10-25 10:37 pm
HK News Desk
Kerala, IT professional dead, RSS members: ಆರ...
13-10-25 05:31 pm
ಪಾಕಿಸ್ತಾನದ ಸೇನಾ ಔಟ್ ಪೋಸ್ಟ್ ಮೇಲೆ ಅಫ್ಘಾನ್ ಭೀಕರ...
12-10-25 10:19 pm
Afghan Foreign Minister, Amir Khan Muttaqi: ಮ...
11-10-25 12:52 pm
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
13-10-25 07:47 pm
Udupi Correspondent
ಆರೆಸ್ಸೆಸ್ ಸೇವಾ ಚಟುವಟಿಕೆ ತಿಳಿಯದ ಪ್ರಿಯಾಂಕ ಖರ್ಗೆ...
13-10-25 04:33 pm
Honey Bees Attack in Puttur: ಪುತ್ತೂರು ; ಹೆಜ್ಜ...
12-10-25 09:53 pm
ಪುತ್ತೂರಿಗೆ ಬಂದಿದ್ದ ಇಬ್ಬರು ಯುವತಿಯರು ದಿಢೀರ್ ನಾಪ...
12-10-25 06:53 pm
Uchila Fire, Mangalore: ಹೊತ್ತಿ ಉರಿದ ಉಚ್ಚಿಲದ ಗ...
12-10-25 05:46 pm
13-10-25 10:04 pm
Mangalore Correspondent
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm