ಬ್ರೇಕಿಂಗ್ ನ್ಯೂಸ್
26-06-24 09:34 pm HK News Desk ಕ್ರೀಡೆ
ಪ್ರಾವಿಡೆನ್ಸ್, ಜೂನ್ 26: ಟಿ 20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಕೊನೇ ಹಂತಕ್ಕೆ ಬಂದಿದ್ದು ಎರಡು ಸೆಮಿಫೈನಲ್ ಪಂದ್ಯಗಳು ಗುರುವಾರ (ಜೂನ್ 27) ನಡೆಯಲಿವೆ. ಭಾರತೀಯ ಕಾಲಮಾನ ಬೆಳಗ್ಗೆ 6 ಗಂಟೆಗೆ ನಡೆಯುವ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದ್ದು, ರಾತ್ರಿ 8ಕ್ಕೆ ನಡೆಯುವ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ಸೆಣಸಾಡಲಿವೆ.
2022ರ ಟೂರ್ನಿಯ ಸೆಮಿಫೈನಲ್ ನಲ್ಲಿ ಭಾರತವನ್ನು ಇಂಗ್ಲೆಂಡ್ 10 ವಿಕೆಟ್ ಗಳಿಂದ ಸೋಲಿಸಿತ್ತು. ಈ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಸಜ್ಜಾಗಿದೆ. ಸೂಪರ್ 8 ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದ ಭಾರತ ಏಕದಿನ ವಿಶ್ವಕಪ್ ಫೈನಲಿನ ಸೋಲಿಗೆ ಸೇಡು ತೀರಿಸಿಕೊಂಡದ್ದು ಇನ್ನೂ ಹಸಿರಾಗಿದೆ.
ಪ್ರಾವಿಡೆನ್ಸ್ ಅಂಗಣವು ಸ್ಪಿನ್ನರ್ ಗಳಿಗೆ ನೆರವಾಗಲಿದ್ದು ಕುಲದೀಪ್ ಯಾದವ್, ಅಕ್ಸರ್ ಪಟೇಲ್ ಹಾಗೂ ರವೀಂದ್ರ ಜಡೇಜ ಅವರನ್ನು ಒಳಗೊಂಡಿರುವ ಭಾರತದ ಸ್ಪಿನ್ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಇಂಗ್ಲೆಂಡ್ ಆದಿಲ್ ರಶೀದ್ ಜೊತೆಗೆ ಮೊಯಿನ್ ಆಲಿ ಹಾಗೂ ಲಯಮ್ ಲಿವಿಂಗ್ ಸ್ಟೋನ್ ಅವರ ಸೇವೆಯನ್ನೂ ಬಳಸಿಕೊಳ್ಳಲಿದೆ. ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ ನೇತೃತ್ವದ ಬಾರತದ ಬ್ಯಾಟಿಂಗ್ ವಿಭಾಗ ಕೂಡ ಬಲಶಾಲಿಯಾಗಿದ್ದು, ವಿರಾಟ್ ಕೊಹ್ಲಿ, ರಿಷಬ್ ಪಂತ್, ಸೂರ್ಯ ಕುಮಾರ್, ಶಿವಮ್ ದುಬೆ, ಆಲ್ರೌಂಡರ್ ಗಳಾದ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಅಕ್ಸರ್ ಪಟೇಲ್ ಯಾವುದೇ ಬಲಿಷ್ಠ ಬೌಲಿಂಗ್ ಪಡೆಯನ್ನು ತಡೆದು ನಿಲ್ಲಬಲ್ಲರು. ಇಡೀ ಟೂರ್ನಿಯಲ್ಲಿ ನಿಯಂತ್ರಿತ ಬೌಲಿಂಗ್ ದಾಳಿಯ ಜೊತೆಗೆ ಅಗತ್ಯವಿದ್ದಾಗ ವಿಕೆಟ್ ಕೂಡ ಕಬಳಿಸುತ್ತಿರುವ ಜಸ್ಪ್ರೀತ್ ಬುಮ್ರಾಗೆ ಸರಿಯಾದ ಜೊತೆ ನೀಡುತ್ತಿರುವ ಅರ್ಷದೀಪ್ ಸಿಂಗ್ ಭಾರತದ ಬೌಲಿಂಗ್ ಶಕ್ತಿಗಳಾಗಿದ್ದಾರೆ.
ಇಂಗ್ಲೆಂಡ್ ತಂಡವೂ ಸಾಕಷ್ಟು ಬಲಿಷ್ಠವಾಗಿದ್ದು, ಫಿಲ್ ಸಾಲ್ಟ್, ಜೋಸ್ ಬಟ್ಲರ್, ಬೇರ್ ಸ್ಟೋ ಮೊದಲಾದ ಆಟಗಾರರಿಂದ ಕೂಡಿದೆ.
ಮತ್ತೊಂದು ಸೆಮಿಫೈನಲ್ ನಲ್ಲಿ ಅಫ್ಘಾನಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ ಸೆಣಸಲಿದ್ದು ಈ ಪಂದ್ಯವೂ ಕುತೂಹಲ ಕೆರಳಿಸಿದೆ. ವಿಶ್ವಕಪ್ ನಂಥ ಮಹಾನ್ ಟೂರ್ನಿಯಲ್ಲಿ ಯಾವಾಗಲೂ ಅಂತಿಮ ಹಂತದಲ್ಲಿ ಎಡವುವ ದಕ್ಷಿಣ ಆಫ್ರಿಕಾ ಈ ಬಾರಿಯಾದರೂ ತಮ್ಮ ಚೋಕರ್ಸ್ ಹಣೆಪಟ್ಟಿ ಕಳಚುವುದೇ ಎಂದು ಕಾದು ನೋಡಬೇಕಿದೆ.
The T20 World Cup 2024 has reached its business end with the semi-finals set to start on June 27 with South Africa and Afghanistan locking horns at the Brian Lara Cricket Academy in Trinidad and Tobago. South Africa have won all their matches so far in the tournament, but haven't been convincing with their performances. They had close games against the Netherlands and Nepal and almost had a slip-up against West Indies in their final Super 8 clash.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm