ಬ್ರೇಕಿಂಗ್ ನ್ಯೂಸ್
02-08-23 01:54 pm Source: Vijayakarnataka ಕ್ರೀಡೆ
ಭಾರತದ ಆತಿಥ್ಯದಲ್ಲಿ ನಡೆಯಲಿರುವ 2023ರ ಸಾಲಿನ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯಲ್ಲಿ ಕೆಲ ಮಹತ್ವದ ಬದಲಾವಣೆ ಆಗಿದೆ. ಪ್ರಮುಖವಾಗಿ ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಣ ಹೈ ವೋಲ್ಟೇಜ್ ಪಂದ್ಯವನ್ನು ಒಂದು ದಿನ ಮುಂಚಿತವಾಗಿಯೇ ನಡೆಸಲು ಬಿಸಿಸಿಐ ಮತ್ತು ಐಸಿಸಿ ಮುಂದಾಗಿವೆ. ಭದ್ರತೆ ದೃಷ್ಟಿಯಲ್ಲಿ ಅಕ್ಟೋಬರ್ 15ರಂದು ನಡೆಯಬೇಕಿದ್ದ ಪಂದ್ಯವನ್ನು ಅಕ್ಟೋಬರ್ 14ರಂದು ಆಯೋಜಿಸಲು ನಿರ್ಧರಿಸಲಾಗಿದೆ. ಬದಲಾದ ವೇಳಾಪಟ್ಟಿ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೂಡ ಸಮ್ಮತಿ ಸೂಚಿಸಿದೆ.
ಭಾರತಕ್ಕೆ ವಿಂಡೀಸ್ ವಿರುದ್ಧ ಭರ್ಜರಿ ಜಯ:
ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಟೀಮ್ ಇಂಡಿಯಾ 2-1 ಅಂತರದ ಜಯ ದಾಖಲಿಸಿದೆ. ಮಂಗಳವಾರ ನಡೆದ ಸರಣಿ ನಿರ್ಣಾಯಕ ಮೂರನೇ ಹಾಗೂ ಅಂತಿಮ ಹಣಾಹಣಿಯಲ್ಲಿ ಅಧಿಕಾರಯುತ ಆಟವಾಡಿದ ಹಾರ್ದಿಕ್ ಪಾಂಡ್ಯ ಸಾರಥ್ಯದ ಟೀಮ್ ಇಂಡಿಯಾ, ಎಲ್ಲ ವಿಭಾಗಗಳಲ್ಲಿಯೂ ಆತಿಥೇಯರ ಸದ್ದಡಗಿಸಿ 200 ರನ್ಗಳ ಜಯ ದಾಖಲಿಸಿತು. ಮೊದಲಿಗೆ ವಿಂಡೀಸ್ ನೆಲದಲ್ಲಿ ದಾಖಲೆಯ ಗರಿಷ್ಠ ಸ್ಕೋರ್ ಆಗಿ 351 ರನ್ ಸಿಡಿಸಿದ ಭಾರತ ತಂಡ, ಬಳಿಕ ಎದುರಾಳಿಯನ್ನು 151 ರನ್ಗಳಿಗೆ ಆಲ್ಔಟ್ ಮಾಡಿತು.
ಕಮ್ಬ್ಯಾಕ್ ಪಂದ್ಯದಲ್ಲಿ ಜಯದೇವ್ ಉನಾದ್ಕಟ್ಗೆ ವಿಕೆಟ್
ಟ್ರಿನಿಡಾಡ್: ಬರೋಬ್ಬರಿ 3539 ದಿನಗಳ ಬಳಿಕ ಭಾರತದ ಏಕದಿನ ಕ್ರಿಕೆಟ್ ತಂಡದಲ್ಲಿ ಮರಳಿ ಸ್ಥಾನ ಪಡೆದ ಎಡಗೈ ವೇಗದ ಬೌಲರ್ ಜಯದೇವ್ ಉನಾದ್ಕಟ್, ಕಮ್ಬ್ಯಾಕ್ ಪಂದ್ಯದಲ್ಲಿ ವಿಕೆಟ್ ಕೂಡ ಪಡೆದರು. ಬ್ರಿಯಾನ್ ಲಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ಎದುರು ನಡೆದ 3ನೇ ಹಾಗೂ ಸರಣಿ ನಿರ್ಣಾಯಕ ಒಡಿಐ ಪಂದ್ಯದಲ್ಲಿ ಎದುರಾಳಿಯ ಅಪಾಯಕಾರಿ ಬ್ಯಾಟರ್ ಕೇಸಿ ಕಾರ್ಟಿ (6) ವಿಕೆಟ್ ಪಡೆದು ಸಂಭ್ರಮಿಸಿದರು.
ಶುಭಮನ್ ಗಿಲ್ - ಇಶಾನ್ ಕಿಶನ್ ದಾಖಲೆಯ ಜೊತೆಯಾಟ
ಟ್ರಿನಿಡಾಡ್: ವೆಸ್ಟ್ ಇಂಡೀಸ್ ಎದುರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಮ್ ಇಂಡಿಯಾದ ಯುವ ಆರಂಭಿಕ ಜೋಡಿ ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್, ಏಕದಿನ ಕ್ರಿಕೆಟ್ ಸರಣಿಯ ಮೂರನೇ ಹಾಗೂ ಸರಣಿ ನಿರ್ಣಾಯಕ ಅಂತಿಮ ಪಂದ್ಯದಲ್ಲಿ ಮೊದಲ ವಿಕೆಟ್ಗೆ 118 ಎಸೆತಗಳಲ್ಲಿ 141 ರನ್ ಕಲೆಹಾಕುವ ಮೂಲಕ, ವೆಸ್ಟ್ ಇಂಡೀಸ್ ನೆಲದಲ್ಲಿ ಮೊದಲ ವಿಕೆಟ್ಗೆ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಜೋಡಿ ಎಂದೆನಿಸಿಕೊಂಡಿದೆ. ಈ ಮೂಲಕ 6 ವರ್ಷ ಹಳೇ ದಾಖಲೆಯನ್ನು ಗಿಲ್-ಕಿಶನ್ ಅಳಿಸಿಹಾಕಿದ್ದಾರೆ.
ದೇವಧರ್ ಟ್ರೋಫಿ 2023: ದಕ್ಷಿಣ ವಲಯ ಫೈನಲ್ಗೆ
ಬೆಂಗಳೂರು: ತಮಿಳುನಾಡಿನ ಯುವ ಆರಂಭಿಕ ಬ್ಯಾಟರ್ ಸಾಯ್ ಸುದರ್ಶನ್ (132) ಬಾರಿಸಿದ ಮನಮೋಹಕ ಶತಕದ ಬಲದಿಂದ ಅಬ್ಬರಿಸಿದ ದಕ್ಷಿಣ ವಲಯ ತಂಡ ಕೇಂದ್ರ ವಲಯ ಎದುರು 7 ವಿಕೆಟ್ಗಳ ಜಯ ದಾಖಲಿಸಿ ಫೈನಲ್ಗೆ ದಾಪುಗಾಲಿಟ್ಟಿದೆ. ಅತ್ತ ರಿಯಾನ್ ಪರಾಗ್ ಶತಕದ ಬಲದಿಂದ ಮಿಂಚಿದ ಪೂರ್ವ ವಲಯ ತಂಡ ಪಶ್ಚಿಮ ವಲಯವನ್ನು 157 ರನ್ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ. ಆಗಸ್ಟ್ 3ರಂದು ಪುದುಚರಿಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಫೈನಲ್ ನಡೆಯಲಿದೆ.
Latest sports news today live 2 august 2023 India wins ODC series south zone storm in to Deodhar trophy final
15-03-25 12:33 pm
HK News Desk
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 01:47 pm
Mangalore Correspondent
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm