ಬ್ರೇಕಿಂಗ್ ನ್ಯೂಸ್
05-07-23 01:30 pm Source: News18 Kannada ಕ್ರೀಡೆ
ಭಾರತ ತಂಡಕ್ಕೆ ಬಿಸಿಸಿಐ ಜುಲೈ 4 ಮಂಗಳವಾರದಂದು ಹೊಸ ಮುಖ್ಯ ಆಯ್ಕೆ ಮಾಡಿದೆ. ಚೇತನ್ ಶರ್ಮಾ ಬದಲಿಗೆ ಭಾರತದ ಮಾಜಿ ಆಲ್ ರೌಂಡರ್ ಅಜಿತ್ ಅಗರ್ಕರ್ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ. ಟಿವಿ ಕುಟುಕು ಕಾರ್ಯಾಚರಣೆಯಲ್ಲಿ ಚೇತನ್ ಶರ್ಮಾ ಹೆಸರು ಕಾಣಿಸಿಕೊಂಡ ನಂತರ ಅವರು ಹುದ್ದೆಗೆ ರಾಜೀನಾಮೆ ನೀಡಿದರು. ಹೀಗಾಗಿ ಬಿಸಿಸಿಐ ಅಜಿತ್ ಅಗರ್ಕರ್ ಹೆಸರನ್ನು ಪ್ರಕಟಿಸಿದೆ. ಭಾರತ ಕ್ರಿಕೆಟ್ ತಂಡದ ಮುಖ್ಯ ಆಯ್ಕೆದಾರರಾಗುವುದರೊಂದಿಗೆ ಅಜಿತ್ ಅಗರ್ಕರ್ ಅವರ ಮುಂದೆ ಹಲವು ಸವಾಲುಗಳು ಬಂದಿವೆ. ಈ ಹುದ್ದೆಯಲ್ಲಿ ಕುಳಿತುಕೊಳ್ಳುವುದರೊಂದಿಗೆ ಅವರು ಅನೇಕ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇವುಗಳಲ್ಲಿ, ಪ್ರಮುಖವಾದ 5 ಪ್ರಮುಖ ನಿರ್ಧಾರಗಳ ಬಗ್ಗೆ ಇಲ್ಲಿದೆ ಮಾಹಿತಿ.
ಐಸಿಸಿ ಏಕದಿನ ವಿಶ್ವಕಪ್ ಆಯ್ಕೆ ಇದೀಗ ಅಜಿತ್ ಅಗರ್ಕರ್ ಮೇಲಿದೆ. ಇದಕ್ಕೂ ಮೊದಲು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ತಂಡವನ್ನು ಆಯ್ಕೆ ಮಾಡಬೇಕಾಗುತ್ತದೆ. 2022ರ ಐಸಿಸಿ ಟಿ20 ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ20 ಮಾದರಿಯಲ್ಲಿ ಯಾವುದೇ ಪಂದ್ಯವನ್ನು ಆಡಿಲ್ಲ. ನವೆಂಬರ್ 2022 ರಿಂದ, ಇಬ್ಬರೂ ಬ್ಯಾಟ್ಸ್ಮನ್ಗಳು ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಇಳಿದಿಲ್ಲ. ಮುಖ್ಯ ಆಯ್ಕೆಗಾರರಾಗಿ, 2024ರ ಟಿ 20 ವಿಶ್ವಕಪ್ಗೆ ಈ ಇಬ್ಬರನ್ನು ಮುಂದುವರಿಸಬೇಕೆ ಮತ್ತು ಈಗ ಯುವ ಆಟಗಾರರಿಗೆ ಅವಕಾಶ ನೀಡಬಹುದೇ ಎಂದು ಅಜಿತ್ ನಿರ್ಧರಿಸಬೇಕು.
ರೋಹಿತ್ ಶರ್ಮಾ ಅವರ ವಯಸ್ಸನ್ನು ನೋಡಿದರೆ, ಅವರ ನಿರ್ಗಮನದ ನಂತರ ಮುಂದಿನ ಟೆಸ್ಟ್ ನಾಯಕ ಯಾರು ಎಂಬ ಪ್ರಶ್ನೆಗಳು ಎಲ್ಲಾ ಕಡೆಯಿಂದ ಎದ್ದಿವೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲಿನ ನಂತರ ಅವರನ್ನು ಟೆಸ್ಟ್ ನಾಯಕತ್ವದಿಂದ ತೆಗೆದುಹಾಕುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅಜಿತ್ ಅಗರ್ಕರ್ ಇದೀಗ ಹೊಸ ಟೆಸ್ಟ್ ನಾಯಕನನ್ನು ಹುಡುಕಬೇಕಿದೆ. ಭಾರತ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಗಾಯಗೊಂಡಿದ್ದಾರೆ. ಇದೀಗ ಅವರ ವಾಪಸಾತಿಯ ಸುದ್ದಿ ಹೊರಬೀಳುತ್ತಿದೆ, ಆದರೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಹೊಸ ಮುಖ್ಯ ಆಯ್ಕೆಗಾರ ಅಜಿತ್ ಬುಮ್ರಾಗೆ ಮರಳಲು ಅವಕಾಶ ನೀಡಬೇಕೇ ಅಥವಾ ವಿಶ್ವಕಪ್ಗೆ ಮೊದಲು ಅವರೊಂದಿಗೆ ರಿಸ್ಕ್ ತೆಗೆದುಕೊಳ್ಳದಿರುವುದು ಸರಿಯೇ ಎಂದು ನಿರ್ಧರಿಸಬೇಕು.
ಕಳೆದ ವರ್ಷ ವಿಕೆಟ್ ಕೀಪರ್ ರಿಷಭ್ ಪಂತ್ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಹೀಗಾಗಿ ಅವರು ಐಸಿಸಿ ವಿಶ್ವಕಪ್ ತಂಡದ ಭಾಗವಾಗುವುದಿಲ್ಲ. ಯಾರನ್ನು ವಿಕೆಟ್ ಕೀಪರ್ ಆಗಿ ಮುನ್ನಡೆಸಬೇಕು ಎಂಬುದನ್ನು ಇಲ್ಲಿ ನಿರ್ಧರಿಸಬೇಕು. ಆಯ್ಕೆ ಸಮಿತಿಯ ಹಿಂದಿನ ಅಧ್ಯಕ್ಷರಿಂದ ಅವಕಾಶ ಪಡೆದ ಕೆಎಲ್ ರಾಹುಲ್ ಅಥವಾ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಅವರಲ್ಲಿ ಒಬ್ಬರನ್ನು ಪೂರ್ಣ ಸಮಯದ ವಿಕೆಟ್ ಕೀಪರ್ ಆಗಿ ಮುನ್ನಡೆಸಬೇಕು.
ರಣಜಿ ಟ್ರೋಫಿಯಲ್ಲಿ ಸ್ಫೋಟಕ ಫಾರ್ಮ್ ತೋರಿರುವ ಸರ್ಫರಾಜ್ ಖಾನ್ ಮೇಲೆ ಅಜಿತ್ ಅಗರ್ಕರ್ ತೆಗೆದುಕೊಳ್ಳಬೇಕಾದ ಪ್ರಮುಖ ನಿರ್ಧಾರ ಇದಿಗ ಎಲ್ಲರ ಗಮನಸೆಳೆಯುತ್ತಿದೆ. ವೆಸ್ಟ್ ಇಂಡೀಸ್ಗೆ ಆಯ್ಕೆಯಾದ ಟೆಸ್ಟ್ ತಂಡದಲ್ಲಿ ಅವರಿಗೆ ಅವಕಾಶ ಸಿಗದಿದ್ದಾಗ ಸಾಕಷ್ಟು ಚರ್ಚೆ ನಡೆದಿತ್ತು. ಶಿಸ್ತು ಮತ್ತು ಫಿಟ್ನೆಸ್ ಅನ್ನು ಬಿಸಿಸಿಐ ಆಯ್ಕೆ ಮಾಡದಿರಲು ಕಾರಣ ಎಂದು ಉಲ್ಲೇಖಿಸಲಾಗಿದೆ.
BCCI Chief selector Ajit Agarkar has to take 5 Big Decisions.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm