ಬ್ರೇಕಿಂಗ್ ನ್ಯೂಸ್
16-06-23 01:44 pm Source: Vijayakarnataka ಕ್ರೀಡೆ
ಹೊಸದಿಲ್ಲಿ: ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬಾರಿ ಸದ್ದು ಮಾಡಿದ್ದ ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ಹಾಗೂ ತಮ್ಮ ನಡುವಣ ಜಗಳದ ಬಗ್ಗೆ ಲಖನೌ ಸೂಪರ್ ಜಯಂಟ್ಸ್ ಹಾಗೂ ಅಫಘಾನಿಸ್ತಾನ ವೇಗಿ ನವೀನ್ ಉಲ್ ಹಕ್ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ.
ಮೇ. 1 ರಂದು ಲಖನೌದ ಏಕನಾ ಕ್ರೀಡಾಂಗಣದಲ್ಲಿ ಲಖನೌ ಸೂಪರ್ ಜಯಂಟ್ಸ್ ವಿರುದ್ಧ ನಡೆದಿದ್ದ ಲೋ ಸ್ಕೋರಿಂಗ್ ಪಂದ್ಯದಲ್ಲಿ 18 ರನ್ ಅಂತರದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವು ಸಾಧಿಸಿತ್ತು. ಲಖನೌ ಇನಿಂಗ್ಸ್ನಲ್ಲಿ ನವೀನ್ ಉಲ್ ಹಕ್ ಹಾಗೂ ವಿರಾಟ್ ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಪಂದ್ಯ ಮುಗಿದ ಬಳಿಕ ಆಟಗಾರರು ಪರಸ್ಪರ ಹಸ್ತಲಾಘವ ನೀಡುವ ವೇಳೆಯೂ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ನಡುವೆಯೂ ಮಾತಿಗೆ ಮಾತು ಬೆಳೆದಿತ್ತು.
ಅಷ್ಟೇ ಅಲ್ಲದೆ ಪಂದ್ಯದ ಮುಗಿದ ಬೆನ್ನಲ್ಲೆ ಡಗ್ಔಟ್ನಿಂದ ಮೈದಾನಕ್ಕೆ ಬಂದ ಲಖನೌ ಸೂಪರ್ ಜಯಂಟ್ಸ್ ಮೆಂಟರ್ ಗೌತಮ್ ಗಂಭೀರ್ ಅವರು, ವಿರಾಟ್ ಕೊಹ್ಲಿಯನ್ನು ನಿಂದಿಸಿದ್ದರು. ಈ ವೇಳೆ ನಡೆದಿದ್ದ ಜಗಳದಲ್ಲಿ ಇವರಿಬ್ಬರೂ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರು. ಆದರೆ, ಕೆ.ಎಲ್ ರಾಹುಲ್ ಹಾಗೂ ಅಮಿತ್ ಮಿಶ್ರಾ ಪರಿಸ್ಥಿತಿಯನ್ನು ತಣ್ಣಗಾಗಿಸಿದ್ದರು.
ಮೇ. 1 ರಂದು ಲಖನೌದ ಏಕನಾ ಕ್ರೀಡಾಂಗಣದಲ್ಲಿ ಲಖನೌ ಸೂಪರ್ ಜಯಂಟ್ಸ್ ವಿರುದ್ಧ ನಡೆದಿದ್ದ ಲೋ ಸ್ಕೋರಿಂಗ್ ಪಂದ್ಯದಲ್ಲಿ 18 ರನ್ ಅಂತರದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವು ಸಾಧಿಸಿತ್ತು. ಲಖನೌ ಇನಿಂಗ್ಸ್ನಲ್ಲಿ ನವೀನ್ ಉಲ್ ಹಕ್ ಹಾಗೂ ವಿರಾಟ್ ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಪಂದ್ಯ ಮುಗಿದ ಬಳಿಕ ಆಟಗಾರರು ಪರಸ್ಪರ ಹಸ್ತಲಾಘವ ನೀಡುವ ವೇಳೆಯೂ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ನಡುವೆಯೂ ಮಾತಿಗೆ ಮಾತು ಬೆಳೆದಿತ್ತು.
ಅಷ್ಟೇ ಅಲ್ಲದೆ ಪಂದ್ಯದ ಮುಗಿದ ಬೆನ್ನಲ್ಲೆ ಡಗ್ಔಟ್ನಿಂದ ಮೈದಾನಕ್ಕೆ ಬಂದ ಲಖನೌ ಸೂಪರ್ ಜಯಂಟ್ಸ್ ಮೆಂಟರ್ ಗೌತಮ್ ಗಂಭೀರ್ ಅವರು, ವಿರಾಟ್ ಕೊಹ್ಲಿಯನ್ನು ನಿಂದಿಸಿದ್ದರು. ಈ ವೇಳೆ ನಡೆದಿದ್ದ ಜಗಳದಲ್ಲಿ ಇವರಿಬ್ಬರೂ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರು. ಆದರೆ, ಕೆ.ಎಲ್ ರಾಹುಲ್ ಹಾಗೂ ಅಮಿತ್ ಮಿಶ್ರಾ ಪರಿಸ್ಥಿತಿಯನ್ನು ತಣ್ಣಗಾಗಿಸಿದ್ದರು.
ವಿರಾಟ್ ಕೊಹ್ಲಿಯೇ ಜಗಳಕ್ಕೆ ಕಾರಣ:
ಐಪಿಎಲ್ ಸೇರಿದಂತೆ ವಿಶ್ವದ ಬಹುತೇಕ ಫ್ರಾಂಚೈಸಿ ಲೀಗ್ಗಳಲ್ಲಿ ಕಾಣಿಸಿಕೊಳ್ಳುವ ಅಫಘಾನಿಸ್ತಾನ ವೇಗಿ ನವೀನ್ ಉಲ್ ಹಕ್ ಅವತ್ತು ಜಗಳ ಆರಂಭಿಸಿದ್ದೇ ವಿರಾಟ್ ಕೊಹ್ಲಿ ಎಂದು ಗಂಭೀರ ಆರೋಪ ಮಾಡಿದ್ದಾರೆ. "ಪಂದ್ಯದಲ್ಲಾಗಲಿ ಅಥವಾ ಪಂದ್ಯ ಮುಗಿದ ನಂತರ ನಾನು ಯಾವುದೇ ಅಸಭ್ಯ ಪದ ಬಳಕೆ ಮಾಡಿರಲಿಲ್ಲ ಹಾಗೂ ಜಗಳ ಕೂಡ ಮಾಡಿರಲಿಲ್ಲ. ಪಂದ್ಯ ಮುಗಿದ ನಂತರ ಹಸ್ತಲಾಘವ ಮಾಡುವ ಸಮಯದಲ್ಲಿ ವಿರಾಟ್ ಕೊಹ್ಲಿಯೇ ಜಗಳ ಆರಂಭಿಸಿದ್ದರು," ಎಂದು ಸಂದರ್ಶನವೊಂದರಲ್ಲಿ ನವೀನ್ ಉಲ್ ಹಕ್ ಆರೋಪಿಸಿದ್ದಾರೆ.
"ಪಂದ್ಯ ಮುಗಿದ ನಂತರ ಅಂಪೈರ್ಗಳು ದಂಡ ವಿಧಿಸಿರುವ ವಿಧಾನ ಗಮನಿಸಿದರೆ ಜಗಳ ಯಾರು ಆರಂಭಿಸಿದ್ದರು ಎಂದು ನಿಮಗೆ ಚೆನ್ನಾಗಿ ಅರ್ಥವಾಗುತ್ತದೆ," ಎಂದು ಹೇಳಿದ ನವೀನ್, "ನಾನು ಸಾಮಾನ್ಯವಾಗಿ ಯಾರನ್ನು ಸ್ಲೆಡ್ಜ್ ಮಾಡಲು ಹೋಗುವುದಿಲ್ಲ, ಹಾಗೇನಾದರೂ ಮಾಡಿದರೆ ಒಬ್ಬ ಬೌಲರ್ ಆಗಿ ಬ್ಯಾಟರ್ಗಳ ವಿರುದ್ಧ ಮಾತ್ರ ಮಾಡುತ್ತೇನೆ. ಇದು ಕೇವಲ ಮೈದಾನದಲ್ಲಿ ಮಾತ್ರ. ಆದರೆ ಅಂದಿನ ಪಂದ್ಯದಲ್ಲಿ ಯಾರನ್ನೂ ಸ್ಲೆಡ್ಜ್ ಮಾಡಿರಲಿಲ್ಲ ಮತ್ತು ಒಂದು ಅಸಹ್ಯ ಪದವನ್ನೂ ಬಳಸಿರಲಿಲ್ಲ," ಎಂದಿದ್ದಾರೆ.
ಬಲವಂತವಾಗಿ ನನ್ನ ಕೈಯನ್ನು ಹಿಡಿದಿದ್ದರು:
"ಅಂದು ನಡೆದ ಜಗಳದಲ್ಲಿ ನಾನು ಹೇಗೆ ಸಿಕ್ಕಿ ಹಾಕಿಕೊಂಡಿದ್ದೆ ಎಂಬುದು ಅಲ್ಲಿದ್ದ ಆಟಗಾರರಿಗೆ ಚೆನ್ನಾಗಿ ಗೊತ್ತಿದೆ. ನಾನು ಯಾವತ್ತೂ ನನ್ನ ತಾಳ್ಮೆಯನ್ನು ಕಳೆದುಕೊಂಡಿಲ್ಲ. ನಾನು ಬ್ಯಾಟ್ ಮಾಡುವಾಗ ಹಾಗೂ ನಂತರವೂ ಶಾಂತವಾಗಿಯೇ ವರ್ತಿಸಿದ್ದೆ. ಪಂದ್ಯ ಮುಗಿದ ನಂತರ ವಿರಾಟ್ ಕೊಹ್ಲಿಗೆ ಹಸ್ತಲಾಘವ ಮಾಡಿ ಮುಂದೆ ಹೋಗುತ್ತಿದ್ದೆ. ಆದರೆ ಅವರು ನನ್ನ ಕೈಯನ್ನು ಬಲವಾಗಿ ಹಿಡಿದಿದ್ದ ಕಾರಣ ನನಗೆ ತುಂಬಾ ಕೋಪ ಬಂತು. ಹಾಗಾಗಿ ನಾನು ನನ್ನ ಕೈಯನ್ನು ಎಳೆದುಕೊಂಡೆ. ಏಕೆಂದರೆ ನಾನು ಕೂಡ ಮನುಷ್ಯ. ನನಗೂ ಕೋಪ ಬರುತ್ತದೆ," ಎಂದು ನವೀನ್ ಉಲ್ ಹಕ್ ಹೇಳಿದ್ದಾರೆ.
ಕೆಟ್ಟ ಪದಗಳಿಂದ ನಿಂದಿಸಿದರೆ ನಾನು ಸುಮ್ಮನೆ ಇರಲ್ಲ:
"ನಾನು ಯಾವತ್ತೂ ಯಾರನ್ನೂ ಕೆಣಕಲು ಪ್ರಯತ್ನಿಸಿಲ್ಲ. 16ರ ವಯೋಮಿತಿ ಕ್ರಿಕೆಟ್ ಆಡಿದ ದಿನದಿಂದ ಇಲ್ಲಿಯವರಗೂ ನಾನು ಯಾರನ್ನೂ ಕೆಟ್ಟ ಪದಗಳಿಂದ ನಿಂದಿಸಿಲ್ಲ. ಆದರೆ ಮೈದಾನದಲ್ಲಿ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರೆ ಮಾತ್ರ ನಾನು ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ಅವರು ದೊಡ್ಡ ಆಟಗಾರರಾಗಿರಲಿ ಅಥವಾ ಸಣ್ಣವರಾಗಿರಲಿ. ಅದು ಕ್ಲಬ್, ಅಫಾಫ್ಘಾನಿಸ್ತಾನ ಅಥವಾ ಐಪಿಎಲ್ ಪಂದ್ಯವಾಗಿರಲಿ ನಾನು ಸುಮ್ಮನೆ ಇರುವುದಿಲ್ಲ," ಎಂದಿದ್ದಾರೆ ನವೀನ್ ಉಲ್ ಹಕ್.
"ಆ ಘಟನೆಯು ನನ್ನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ನಿಂದಿಸುವವರಿಗೆ ಹೇಗೆ ಉತ್ತರಿಸಬೇಕೆಂದು ನನಗೆ ಚೆನ್ನಾಗಿ ಗೊತ್ತು. ನಾನು 80 ಸಾವಿರ ಮಂದಿಗೆ ಉತ್ತರಿಸಲು ಸಾಧ್ಯವಿಲ್ಲ. ಆದ್ದರಿಂದ ನಾನು ಆಟದ ಮೇಲೆ ಗಮನ ಕೇಂದ್ರೀಕರಿಸಿದೆ. ನನಗೆ ನನ್ನ ಸಾಮರ್ಥ್ಯದ ಬಗ್ಗೆ ನಂಬಿಕೆ ಇದೆ. ನನ್ನ ಆಟದ ಬಗ್ಗೆ ಎಲ್ಲರೂ ಮಾತನಾಡಬೇಕು ಎಂದು ಬಯಸುತ್ತೇನೆ," ಎಂದು ಆಫ್ಘನ್ ವೇಗಿ ತಿಳಿಸಿದ್ದಾರೆ.
"ನಾನು ಸಾಮಾಜಿಕ ಜಾಲತಾಣಗಳಲ್ಲಿ ವಿವಾದವನ್ನು ಬೆಳೆಸಲು ಇಷ್ಟಪಡುವುದಿಲ್ಲ. ಆದರೆ ಎದುರಾಳಿಗಳು ನನ್ನ ಬಗ್ಗೆ ಮಾಧ್ಯಮಗಳಲ್ಲಿ ಕೆಟ್ಟದಾಗಿ ಮಾತನಾಡಿದರೆ, ಅದನ್ನು ನನ್ನಿಂದ ಸಹಿಸಲು ಸಾಧ್ಯವಿಲ್ಲ. ನಾನು ಯಾರ ಹೆಸರನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ಮಾವಿನ ಹಣ್ಣನ್ನು ಸವಿಯಲು ತುಂಬಾ ಇಷ್ಟ ಪಡುತ್ತೇನೆ." ಎಂದು ನವೀನ್ ಉಲ್ ಹಕ್ ಹೇಳಿದ್ದಾರೆ.
He caught my hand forcefully lsg pacer Naveen ul haq ends silence on ugly spat with rcb star Virat kohli.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 01:43 pm
HK News Desk
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm