ಬ್ರೇಕಿಂಗ್ ನ್ಯೂಸ್
15-06-23 02:45 pm Source: News18 Kannada ಕ್ರೀಡೆ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಅಂತಿಮ ಸೋಲಿನ ನಂತರ ಟೀಮ್ ಇಂಡಿಯಾ ಮೇಲೆ ಟೀಕೆ ಹೆಚ್ಚಾಗುತ್ತಿದೆ. ಟೀಂ ಇಂಡಿಯಾ ಅಭಿಮಾನಿಗಳು ಕೂಡ ಸಿಟ್ಟಿಗೆದ್ದಿದ್ದಾರೆ. ಅದರಲ್ಲೂ ಟೀಂ ಇಂಡಿಯಾ ಆಯ್ಕೆಯಲ್ಲಿ ಬದಲಾಗಬೇಕಿದೆ ಎಂದಿದ್ದಾರೆ.
ಐಪಿಎಲ್ ಗೆ ಹೆಚ್ಚಿನ ಆದ್ಯತೆ ನೀಡಿ ಅಂತಾರಾಷ್ಟ್ರೀಯ ಕ್ರಿಕೆಟ್ ಕಡೆಗಣಿಸಲಾಗುತ್ತಿದೆ ಎನ್ನಲಾಗಿದೆ. ಅದರಲ್ಲೂ ಐಸಿಸಿ ಟ್ರೋಫಿಗಳಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನ ಕಂಡು ಅಭಿಮಾನಿಗಳು ಸಿಟ್ಟಾಗಿದ್ದಾರೆ.
ಟೀಂ ಇಂಡಿಯಾ ಕಳೆದ ಬಾರಿ 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಆ ನಂತರ ಮತ್ತೆ ಅಂತಹ ಸಾಧನೆ ಮಾಡಲಿಲ್ಲ. ಇತ್ತೀಚಿನ ದಿನಗಳಲ್ಲಿ, ಭಾರತವು T20 ವಿಶ್ವಕಪ್ಗಳು, ಎರಡು ODI ವಿಶ್ವಕಪ್ಗಳು, ಎರಡು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗಳು ಮತ್ತು ಒಂದು ಚಾಂಪಿಯನ್ಸ್ ಟ್ರೋಫಿಯನ್ನು ಆಡಿದೆ.
ಒಟ್ಟು 4 ಫೈನಲ್ (2014 T20, 2017 ಚಾಂಪಿಯನ್ಸ್ ಟ್ರೋಫಿ, 2021, 2023 ವಿಶ್ವ ಟೆಸ್ಟ್ ಚಾಂಪಿಯನ್ಶಿಪ್) ಆಡಿದ್ದಾರೆ. ನಾಲ್ಕು ಸೆಮಿಫೈನಲ್ (2016 T20, 2022 T20, 2015 ODI, 2019 ODI ವಿಶ್ವಕಪ್). ಪ್ರತಿ ಬಾರಿಯೂ ಪ್ರಮುಖ ಟೂರ್ನಿಗಳಲ್ಲಿ ಸೋತು ಮನೆಗೆ ವಾಪಸ್ಸಾಗುತ್ತಿದೆ.
ಈ ಕ್ರಮದಲ್ಲಿ ಟೀಂ ಇಂಡಿಯಾ ಆಯ್ಕೆ ಬಗ್ಗೆ ಟೀಕೆಗಳು ಬರುತ್ತಿವೆ. ನಾಯಕನಾಗಿ ರೋಹಿತ್ ಶರ್ಮಾ ಅವರ ಪ್ರದರ್ಶನದ ಬಗ್ಗೆ ಮಾಜಿ ಆಟಗಾರರು ಮತ್ತು ಫ್ಯಾನ್ಸ್ ಸಿಟ್ಟಾಗಿದ್ದಾರೆ. ಬ್ಯಾಟ್ಸ್ ಮನ್ ಆಗಿಯೂ ರೋಹಿತ್ ಶರ್ಮಾ ನಿರೀಕ್ಷೆಗೆ ತಕ್ಕಂತೆ ಆಡುತ್ತಿಲ್ಲ.
ಭಾರತ ಮುಂದಿನ ತಿಂಗಳು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಟೀಂ ಇಂಡಿಯಾದಿಂದ ದೂರ ಉಳಿದಿರುವ ಅನುಭವಿ ಆಟಗಾರ ಶಿಖರ್ ಧವನ್ಗೆ ಅವಕಾಶ ನೀಡುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಶಿಖರ್ ಧವನ್ ವಿದೇಶದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ವಿಶೇಷವಾಗಿ ಬೌನ್ಸಿ ವಿಕೆಟ್ಗಳಲ್ಲಿ ಅವರು ಅದ್ಭುತವಾಗಿ ಆಡಬಲ್ಲರು.
ತವರಿನಲ್ಲಿ ರೋಹಿತ್ ಶರ್ಮಾ ಅವರ ಟೆಸ್ಟ್ ಸರಾಸರಿ 66.73 ಆಗಿದೆ. ವಿದೇಶದಲ್ಲಿ ಅದೇ ಆದರೆ 31 ಮಾತ್ರ. ಫ್ಲಾಟ್ ವಿಕೆಟ್ಗಳಲ್ಲಿ ಮಿಂಚುತ್ತಿರುವ ರೋಹಿತ್ ಶರ್ಮಾ ಬೌನ್ಸಿ ವಿಕೆಟ್ಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ತವರಿನಲ್ಲಿ ಧವನ್ ಅವರ ಟೆಸ್ಟ್ ಸರಾಸರಿ 44.38 ಆಗಿದೆ. ಇದು ವಿದೇಶದಲ್ಲಿ 40 ಆಗಿದೆ.
ಅದರೊಂದಿಗೆ ಧವನ್ ಬಿಗ್ ಮ್ಯಾಚ್ ಪ್ಲೇಯರ್ ಎಂದು ಗುರುತಿಸಿಕೊಂಡಿದ್ದಾರೆ. ದ್ವಿಪಕ್ಷೀಯ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೂ ಧವನ್ ಐಸಿಸಿ ಟೂರ್ನಿಗಳಲ್ಲಿ ಮಿಂಚಿದ್ದಾರೆ. ಪ್ರಮುಖ ಪಂದ್ಯಗಳಲ್ಲಿ ರನ್ ಗಳಿಸುವುದರಲ್ಲಿ ಧವನ್ ವಿಶೇಷವಾಗಿದ್ದಾರೆ. ಇಂತಹ ಆಟಗಾರನನ್ನು ಪಕ್ಕಕ್ಕೆ ಇಟ್ಟಿರುವುದು ಎಷ್ಟು ಸಮರ್ಥನೆ ಎಂದು ಅಭಿಮಾನಿಗಳು ಬಿಸಿಸಿಐಗೆ ಪ್ರಶ್ನಿಸುತ್ತಿದ್ದಾರೆ.
India vs West Indies shikhar dhawan deserves one more chance to play for team India.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 01:43 pm
HK News Desk
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm