ಬ್ರೇಕಿಂಗ್ ನ್ಯೂಸ್
22-04-23 01:40 pm Source: news18 ಕ್ರೀಡೆ
ಐಪಿಎಲ್ 2023ರ 29ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ (CSK vs SRH) ತಂಡಗಳು ಮುಖಾಮುಖಿ ಆದವು. ಈ ಪಂದ್ಯದಲ್ಲಿ ಹೈದರಾಬಾದ್ ಮೊದಲು ಬ್ಯಾಟ್ ಮಾಡಿ ಚೆನ್ನೈ ತಂಡಕ್ಕೆ 135 ರನ್ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 18.4 ಓವರ್ಗಳಿಗೆ 3 ವಿಕೆಟ್ ನಷ್ಟಕ್ಕೆ 138 ರನ್ ಗಳಿಸುವ ಮೂಲಕ 7 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು. ಆದರೆ, ಹೈದರಾಬಾದ್ ಪಂದ್ಯದಲ್ಲಿ ಚೆನ್ನೈ ಪ್ಲೇಯರ್ ರವೀಂದ್ರ ಜಡೇಜಾ ಹಾಗೂ SRH ಬ್ಯಾಟರ್ ಕ್ಲಾಸೆನ್ ಪರಸ್ಪರ ವಾಗ್ವಾದ ನಡೆಸಿದ ಘಟನೆ ನಡೆದಿದೆ. ಇಬ್ಬರು ಆಟಗಾರರ ಜಗಳವನ್ನು ಬಿಡಿಸಲು ಅಂತಿಮವಾಗಿ ಕೂಲ್ ಕ್ಯಾಪ್ಟನ್ ಧೋನಿ ಬರಬೇಕಾಯಿತು.
ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ, 13ನೇ ಓವರ್ ಬೌಲ್ ಮಾಡಿದ ಜಡೇಜಾಗೆ ವಿಕೆಟ್ ಪಡೆಯುವ ಅವಕಾಶವಿತ್ತು. ಓವರ್ನ ಮೊದಲ ಎಸೆತವನ್ನು ಮಯಾಂಕ್ ಅಗರ್ವಾಲ್ ನೆರ ಶಾಟ್ ಹೊಡೆದರು. ಬಾಲ್ ನೇರವಾಗಿ ಜಡೇಜಾ ಕೈಸರುವುದರಲ್ಲಿತ್ತು. ಆದರೆ ನಾನ್-ಸ್ಟ್ರೈಕರ್ನಲ್ಲಿ ನಿಂತಿದ್ದ ಹೈದರಾಬಾದ್ ಆಟಗಾರ ಹೆನ್ರಿಚ್ ಕ್ಲಾಸೆನ್ ಇದಕ್ಕೆ ಅಡ್ಡಿಯಾದರು. ಇಲ್ಲಿ ಬಾಲ್ ನಾನ್-ಸ್ಟ್ರೈಕರ್ ತುದಿಯೇ ನೇರವಾಗಿ ಬಂದಿತ್ತು.ಇದನ್ನು ಜಡೇಜಾ ಕ್ಯಾಚ್ ಪಡೆಯಲು ಯತ್ನಿಸಿದರು. ಆದರೆ, ಕ್ಲಾಸೆನ್ಗೆ ಡಿಕ್ಕಿ ಹೊಡೆದು ಜಡ್ಡು ಕ್ಯಾಚ್ ಮಿಸ್ ಮಾಡಿಕೊಂಡರು.
ಇದರಿಂದ ಕ್ಲಾನಿಸ್ ಮೇಲೆ ಸಿಟ್ಟಾದ ಜಡ್ಡು, ಮೊದಲಿಗೆ ಕೈ ಸನ್ನೆಯ ಮೂಲಕ ಸಿಟ್ಟನ್ನು ವ್ಯಕ್ತಪಡಿಸಿದರು. ಅಲ್ಲದೇ ಆ ಓವರ್ನ 4ನೇ ಎಸತದವರೆಗೂ ಜಡೇಜಾ ಕ್ಲಾಸಿನ್ ಅವರನ್ನು ಗುರಾಯಿಸಿದ ಘಟನೆ ನಡೆಯಿತು. ಆದರೆ, ಈ ಓವರ್ನ 5ನೇ ಎಸೆತದಲ್ಲಿ ಮಾಯಾಂಕ್ ಅರ್ಗವಾಲ್ ಅವರನ್ನು ಧೋನಿ ಸ್ಟಂಪ್ ಔಟ್ ಮಾಡಿದರು. ಈ ವೇಳೆ ಜಡ್ಡು ವಿಕೆಟ್ ಪಡೆದ ಬಳಿಕ ಜಡೇಜಾ ಅವರು ಕ್ಲಾಸಿನ್ ಬಳಿ ತಿರುಗಿ ಮತ್ತೊಮ್ಮೆ ಗುರಾಯಿಸುತ್ತಾ ತಮ್ಮ ಕೋಪವನ್ನು ವ್ಯಕ್ತಪಡಿಸಿದರು.
ಆದರೆ, ಅಷ್ಟರಲ್ಲಿ ಜಡ್ಡು ಬಳಿ ಬಂದ ನಾಯಕ ಧೋನಿ ಇಬ್ಬರ ನಡುವಿನ ದೃಷ್ಟಿ ಯುದ್ದಕ್ಕೆ ಅಂತ್ಯ ಹಾಡಿದರು. ಅಲ್ಲದೇ ರವೀಂದ್ರ ಜಡೇಜಾ ತಮ್ಮ 4 ಓವರ್ಗಳಲ್ಲಿ ಕೇವಲ 22 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದಾರೆ. ಐಪಿಎಲ್ 2023ರ ಅಂಕಪಟ್ಟಿ ನೋಡುವುದಾರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡವು 6 ಪಂದ್ಯದಲ್ಲಿ 4ರಲ್ಲಿ ಗೆದ್ದು 2ರಲ್ಲಿ ಸೋತಿದ್ದು, 8 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಅದೇ ಸಮಯದಲ್ಲಿ ಸನ್ರೈಸರ್ಸ್ ಹೈದರಾಬಾದ್ 6 ಪಂದ್ಯದಲ್ಲಿ 2ರಲ್ಲಿ ಗೆದ್ದು, 4ರಲ್ಲಿ ಸೋತಿದ್ದು 4 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ.
ipl 2023 jadeja clashes with srh batsman henrich klaasen.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm