ಬ್ರೇಕಿಂಗ್ ನ್ಯೂಸ್
19-04-23 01:33 pm Source: news18 ಕ್ರೀಡೆ
ಇತ್ತೀಚೆಗೆ ಕ್ರಿಕೆಟ್ ಪಂದ್ಯದ ವೇಳೆ ವಿಭಿನ್ನ ಪೋಸ್ಟರ್ ತೋರಿಸುವುದು ಟ್ರೆಂಡ್ ಆಗುತ್ತಿದೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ ಅಂತಹ ಕ್ರೇಜ್ ಮುಂದುವರಿದಿದೆ. ಏಪ್ರಿಲ್ 17 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳೂ ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಉಭಯ ತಂಡಗಳಿಂದ ಅಮೋಘ ಬ್ಯಾಟಿಂಗ್ ಕಂಡುಬಂದಿತು. ರನ್ಫೆಸ್ಟ್ ಅಗಿದ್ದ ಈ ಪಂದ್ಯದಲ್ಲಿ ಬರೋಬ್ಬರಿ 444 ರನ್ ಸಿಡಿದಿತ್ತು. ಈ ಪಂದ್ಯದಲ್ಲಿ ಆರ್ಸಿಬಿ 8 ರನ್ಗಳ ರೋಚಕ ಸೋಲು ಕಂಡಿತ್ತು. ಪಂದ್ಯದ ವೇಳೆ ಪುಟ್ಟ ಅಭಿಮಾನಿಯೊಬ್ಬ ಸ್ಟ್ಯಾಂಡ್ನಲ್ಲಿ ಹಿಡಿದಿರುವ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಬಹಳ ಬೇಗನೆ ವೈರಲ್ ಆಗಿದೆ. ಆ ಪೋಸ್ಟರ್ನಲ್ಲಿ ಪುಟ್ಟ ಬಾಲಕ ತಾನೂ ವಿರಾಟ್ ಕೊಹ್ಲಿ ಪುತ್ರಿ ವಮಿಕಾ ಜೊತೆ ಡೇಟಿಂಗ್ ಮಾಡುವುದಾಗಿ ಕೇಳಿದ್ದಾನೆ. 'ಹಾಯ್, ವಿರಾಟ್ ಅಂಕಲ್.. ನಾನು ವಮಿಕಾಳನ್ನು ಡೇಟ್ಗೆ ಕರೆದುಕೊಂಡು ಹೋಗಬಹುದೇ.? ಎಂದು ಕೇಳುವ ಪೋಸ್ಟರ್ ಅನ್ನ ಬಾಲಕನ ಕೈಯಲ್ಲಿ ಹಿಡಿಸಲಾಗಿದೆ.
ಈ ಪೋಸ್ಟರ್ಅನ್ನು ಕೆಲವರು ತಮಾಷೆಯಾಗಿ ಪರಿಗಣಿಸಿದರೆ , ಇನ್ನೂ ಕೆಲವು ಅಭಿಮಾನಿಗಳು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಕನ ಕೈಯಲ್ಲಿ ಈ ಪೋಸ್ಟರ್ ನೀಡಿರುವ ಮಗುವಿನ ಪೋಷಕರ ವಿರುದ್ಧ ಕಿಡಿಕಾರಿರುವ ನೆಟ್ಟಿಗರು, ಇಂತಹ ವರ್ತನೆ ಸರಿಯಲ್ಲ ಎಂದಿದ್ದಾರೆ.
ಈ ಪೋಸ್ಟರ್ನಲ್ಲಿ ಕಾಣಿಸಿಕೊಂಡಿರುವ ಮಗುವನ್ನು ನೋಡಿದರೆ ಅದರಲ್ಲಿ ಬರೆದಿರುವ ಪದಗಳ ಸಂಪೂರ್ಣ ಅರ್ಥ ಕೂಡ ತಿಳಿಯಲ್ಲ. ಇದು ತಮಾಷೆಯ ವಿಷಯವಲ್ಲ, ಮಗುವನ್ನು ಈ ವಿಷಯಕ್ಕೆ ಬಳಸಿಕೊಂಡ ಪೋಷಕರಿಗೆ ನಾಚಿಕೆಯಾಗಬೇಕು. ಇಂತಹ ವಿಷಯಗಳಲ್ಲಿ ಪೋಷಕರು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಸ್ಟಾರ್ ಅನುಷ್ಕಾ ಶರ್ಮಾ ದಂಪತಿ ತಮ್ಮ ಮಗಳನ್ನು ಸಾಮಾಜಿಕ ಜಾಲತಾಣದಿಂದ ದೂರ ಉಳಿಸಿದ್ದಾರೆ. ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರೂ ಸಹಾ ತಮ್ಮ ಮಗಳ ಮುಖ ಕಾಣುವ ಒಂದೇ ಒಂದು ಫೋಟೋವನ್ನು ಅವರು ಶೇರ್ ಮಾಡಿಲ್ಲ. ಮಗುವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರೂ ಮಗುವಿನ ವಿವರವನ್ನು ಬಹಿರಂಗಪಡಿಸಲು ಬಯಸುವುದಿಲ್ಲ ಎಂದು ವಿರಾಟ್ ಕೊಹ್ಲಿ ದಂಪತಿಗಳು ಈಗಾಗಲೇ ಸಾಕಷ್ಟು ಬಾರಿ ಹೇಳಿದ್ದಾರೆ.
can i take vamika on date young fan placard for virat kohlis daughter gets criticized on twitter.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm