ಬ್ರೇಕಿಂಗ್ ನ್ಯೂಸ್
18-04-23 12:45 pm Source: news18 ಕ್ರೀಡೆ
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಅಂತಿಮ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ. ಜೂನ್ 7 ರಿಂದ ಜೂನ್ 11 ರವರೆಗೆ ಲಂಡನ್ನ ಓವಲ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ರೋಹಿತ್ ಶರ್ಮಾ ಭಾರತ ತಂಡದ ನಾಯಕರಾದರೆ, ಆಸ್ಟ್ರೇಲಿಯಾ ತಂಡವನ್ನು ಪ್ಯಾಟ್ ಕಮ್ಮಿನ್ಸ್ ಮುನ್ನಡೆಸಲಿದ್ದಾರೆ. ಕಳೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲೂ ಭಾರತ ಫೈನಲ್ ತಲುಪಿತ್ತು, ಆದರೆ ನ್ಯೂಜಿಲೆಂಡ್ ಕೈಯಲ್ಲಿ ಸೋಲನ್ನು ಎದುರಿಸಬೇಕಾಯಿತು.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಂತರ, ಕೆಲವು ಭಾರತೀಯ ಆಟಗಾರರು ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಬಹುದು. ಈ ಬ್ಯಾಟರ್ಗಳು ಅಥವಾ ಬೌಲರ್ಗಳು ಮತ್ತೆ ಬಿಳಿ ಜೆರ್ಸಿಯಲ್ಲಿ ಕಾಣಿಸುವುದಿಲ್ಲ ಎನ್ನಲಾಗುತ್ತಿದೆ.
ಇಶಾಂತ್ ಶರ್ಮಾ: 2021 ರಲ್ಲಿ ICC ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಂದ್ಯಾವಳಿಯ ಪ್ರಾರಂಭದ ಸಮಯದಲ್ಲಿ ಇಶಾಂತ್ ಶರ್ಮಾ ಭಾರತಕ್ಕೆ ಪ್ರಮುಖ ವೇಗದ ಬೌಲರ್ ಆಗಿದ್ದರು. ಆದರೆ ಬಳಿಕ ಕಳಪೆ ಫಾರ್ಮ್ನಿಂದಾಗಿ ಅವರು ತಂಡದಿಂದ ದೂರವುಳಿದರು. ಬಲಗೈ ವೇಗದ ಬೌಲರ್ 105 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ನವೆಂಬರ್ 2021 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕಾಗಿ ಅವರ ಕೊನೆಯ ಟೆಸ್ಟ್ ಪಂದ್ಯ ಆಡಿದ್ದಾರೆ. ಇಶಾಂತ್ ಶರ್ಮಾ ಅವರು ಸುದೀರ್ಘ ಸಮಯದಿಂದ ಹೊರಗುಳಿದಿರುವುದರಿಂದ ಟೆಸ್ಟ್ನಲ್ಲಿ ಹೆಚ್ಚಿನ ಅವಕಾಶಗಳು ಸಿಗುತ್ತಿಲ್ಲ. ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಇಶಾಂತ್ ಶರ್ಮಾ ಅವರನ್ನು ಬಿಸಿಸಿಐ ಹೊರಗಿಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ವೇಗಿ ಡಬ್ಲ್ಯುಟಿಸಿ ಫೈನಲ್ನ ನಂತರ ಟೆಸ್ಟ್ನಿಂದ ನಿವೃತ್ತಿ ಘೋಷಿಸಬಹುದು.
ಭುವನೇಶ್ವರ್ ಕುಮಾರ್: ಈ ಪಟ್ಟಿಯಲ್ಲಿ ಸೇರ್ಪಡೆಗೊಂಡ ಎರಡನೇ ಆಟಗಾರ ಭುವನೇಶ್ವರ್ ಕುಮಾರ್. ಬಲಗೈ ವೇಗದ ಬೌಲರ್ ಈ ವರ್ಷದ ಆರಂಭದಿಂದಲೂ ಭಾರತ ಪರ ಆಡಿಲ್ಲ. ಕಳೆದ ತಿಂಗಳು ಬಿಸಿಸಿಐ ಬಿಡುಗಡೆ ಮಾಡಿದ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲೂ ಅವರು ಆಯ್ಕೆಯಾಗಿಲ್ಲ. ಆದರೆ, ಭುವನೇಶ್ವರ್ ಕುಮಾರ್ ಭಾರತ ಪರ ಟೆಸ್ಟ್ ಆಡದೇ ಬಹಳ ದಿನಗಳೇ ಕಳೆದಿವೆ. ಭುವನೇಶ್ವರ್ ಕುಮಾರ್ 2018 ರಲ್ಲಿ ಭಾರತಕ್ಕಾಗಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಅವರು ಜನವರಿ 2022 ರಲ್ಲಿ ಕೊನೆಯ ODI ಮತ್ತು ನವೆಂಬರ್ 2022 ರಲ್ಲಿ ಕೊನೆಯ T20 ಅಂತರಾಷ್ಟ್ರೀಯ ಪಂದ್ಯವನ್ನು ಆಡಿದರು. ಇಂತಹ ಪರಿಸ್ಥಿತಿಯಲ್ಲಿ, ಈ ವೇಗಿ ಡಬ್ಲ್ಯುಟಿಸಿ ಫೈನಲ್ನ ನಂತರ ಟೆಸ್ಟ್ನಿಂದ ನಿವೃತ್ತಿ ಘೋಷಿಸಬಹುದು.
ವೃದ್ಧಿಮಾನ್ ಸಹಾ: ಈ ಪಟ್ಟಿಯಲ್ಲಿ ವೃದ್ಧಿಮಾನ್ ಸಹಾ ಅವರ ಹೆಸರೂ ಸೇರಿದೆ. ಸಹಾ ವಿಕೆಟ್ಕೀಪರ್-ಬ್ಯಾಟ್ಸ್ಮನ್ ಆಗಿದ್ದು, ಡಿಸೆಂಬರ್ 2021 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೊನೆಯದಾಗಿ ಭಾರತ ತಂಡಕ್ಕಾಗಿ ಆಡಿದ್ದರು. ಒಂದು ವರ್ಷ ಕಳೆದರೂ ಸಹಾ ಭಾರತ ಟೆಸ್ಟ್ ತಂಡಕ್ಕೆ ಮರಳಿಲ್ಲ. ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್ ಅಲಭ್ಯತೆಯ ಹೊರತಾಗಿಯೂ ಸಾಹಾ ಅವರನ್ನು ಆಯ್ಕೆ ಮಾಡಿರಲಿಲ್ಲ. ತಂಡವು ವಿಕೆಟ್ ಕೀಪರ್ ಆಗಿ ಅನ್ ಕ್ಯಾಪ್ಡ್ ಕೆಎಸ್ ಭರತ್ ಅವರನ್ನು ಆಯ್ಕೆ ಮಾಡಿತ್ತು.
ಜಯಂತ್ ಯಾದವ್: ಜಯಂತ್ ಅವರು WTC ಫೈನಲ್ನ ನಂತರ ಟೆಸ್ಟ್ನಿಂದ ನಿವೃತ್ತರಾಗಬಹುದು. ಈ ಬಲಗೈ ಸ್ಪಿನ್ನರ್ ಭಾರತದ ಪರ ಕೇವಲ 6 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಜಯಂತ್ ಯಾದವ್ 2016ರಲ್ಲಿ ಭಾರತದ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದರು ಮತ್ತು ಜನವರಿ 2022ರಲ್ಲಿ ಕೊನೆಯ ಪಂದ್ಯವನ್ನು ಆಡಿದ್ದರು. ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಅವರಂತಹ ಸ್ಪಿನ್ನರ್ಗಳು ಪ್ರಸ್ತುತ ಟೆಸ್ಟ್ನಲ್ಲಿ ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜಯಂತ್ ಯಾದವ್ಗೆ ಟೆಸ್ಟ್ ನಲ್ಲಿ ಆಡುವ ಅವಕಾಶ ಸಿಗುವುದು ಕಷ್ಟ. ಅಂತಹ ಪರಿಸ್ಥಿತಿಯಲ್ಲಿ, WTC ಫೈನಲ್ ನಂತರ, ಅವರು ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಬಹುದು.
wtc final 2023 4 indian cricketers retire from tests cricket.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm