ಬ್ರೇಕಿಂಗ್ ನ್ಯೂಸ್
28-03-23 02:22 pm Source: news18 ಕ್ರೀಡೆ
ಈಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಎಂದರೆ ಬಿಸಿಸಿಐ ಮುಂಬರುವ 2023-24ರ ಋತುವಿಗಾಗಿ ವಾರ್ಷಿಕ ಆಟಗಾರರ ಒಪ್ಪಂದವನ್ನು ಭಾನುವಾರ ಪ್ರಕಟಿಸಿದ್ದು, ಟೀಮ್ ಇಂಡಿಯಾದ ಕೇಂದ್ರ ಗುತ್ತಿಗೆಯಲ್ಲಿ ಹಲವು ಬದಲಾವಣೆಗಳು ಕಂಡು ಬಂದಿವೆ.
ರವೀಂದ್ರ ಜಡೇಜಾಗೆ ಸಿಕ್ತು ಬಂಪರ್
ವಿಶ್ವದ ಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬರಾಗಿರುವ ರವೀಂದ್ರ ಜಡೇಜಾ ಮತ್ತು ಉದಯೋನ್ಮುಖ ಪ್ರತಿಭೆ ಅಕ್ಷರ್ ಪಟೇಲ್ ಅವರಿಗೆ ಈ ಬಾರಿಯ ಗುತ್ತಿಗೆಯಲ್ಲಿ ಬಿಸಿಸಿಐ ಬಡ್ತಿ ನೀಡಿದೆ. ಜಡೇಜಾ ಎ ನಿಂದ ಎ+ ಪಡೆದರೆ, ಪಟೇಲ್ ಸಿ ಗ್ರೇಡ್ನಿಂದ ಎ ಗ್ರೇಡ್ಗೆ ಬಡ್ತಿ ಪಡೆದುಕೊಂಡಿದ್ದಾರೆ. ಟಿ20 ತಂಡದ ಭವಿಷ್ಯದ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಬಿ ಗ್ರೇಡ್ನಿಂದ ಎ ಗ್ರೇಡ್ಗೆ ಪ್ರಮೋಟ್ ಆಗಿದ್ದಾರೆ. ಒಟ್ಟು 26 ಕ್ರಿಕೆಟಿಗರು ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ ಅವಕಾಶ ಪಡೆದಿದ್ದಾರೆ.
ಕೆಎಲ್ ರಾಹುಲ್ಗೆ ಶಾಕ್
ಭಾರತ ತಂಡದ ಉಪನಾಯಕ ಕೆಎಲ್ ರಾಹುಲ್ ಇತ್ತೀಚಿಗೆ ಮೂರು ಮಾದರಿಯಲ್ಲೂ ಕಳಪೆ ಪ್ರದರ್ಶನ ತೋರುತ್ತಿದ್ದಾರೆ. ಈ ಕಾರಣದಿಂದ ಅವರೂ ಎ ಗ್ರೇಡ್ನಿಂದ ಬಿ ಗ್ರೇಡ್ಗೆ ಹಿಂಬಡ್ತಿ ಪಡೆದುಕೊಂಡಿದ್ದಾರೆ. ಅವರು ಕಳೆದ ವರ್ಷದ ಒಪ್ಪಂದದಲ್ಲಿ ಎ ಗ್ರೇಡ್ನಲ್ಲಿದ್ದರು.
ಗುತ್ತಿಗೆ ಆಧಾರದಲ್ಲಿ ಆಟಗಾರರು ಪಡೆಯುವ ಹಣವೆಷ್ಟು?
ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ ಪಟ್ಟಿಯನ್ನು ಪ್ರಮುಖವಾಗಿ ನಾಲ್ಕು ಪ್ರತ್ಯೇಕ ವಿಭಾಗಗಳಾಗಿ ವಿಂಗಡಿಸಲಾಗಿದೆ. ಎ+ ಕೆಟಗರಿಯಲ್ಲಿ ಬರುವ ಕ್ರಿಕೆಟಿಗರಿಗೆ 7 ಕೋಟಿ ರೂಪಾಯಿ, ಎ ಕೆಟಗರಿಯಲ್ಲಿ ಬರುವವರಿಗೆ 5 ಕೋಟಿ ರೂಪಾಯಿ, ಬಿ ಕೆಟಗರಿಯವರಿಗೆ 3 ಕೋಟಿ ರೂಪಾಯಿ ಮತ್ತು ಸಿ ಕೆಟಗರಿಯ ಆಟಗಾರರಿಗೆ 1 ಕೋಟಿ ರೂಪಾಯಿ ಸಿಗಲಿದೆ.
ಎಲೈಟ್ ಎ+ ವಿಭಾಗದಲ್ಲಿ ಏಕದಿನ, ಟೆಸ್ಟ್ ಹಾಗೂ ಟಿ20 ಮೂರು ಸ್ವರೂಪಗಳಲ್ಲಿಯೂ ಖಾಯಂ ಸ್ಥಾನ ಗಿಟ್ಟಿಸುವ ಆಟಗಾರರಿರುತ್ತಾರೆ. ಎ ಕೆಟಗರಿಯಲ್ಲಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಅವಕಾಶ ಪಡೆಯುವ ಕ್ರಿಕೆಟಿಗರನ್ನು ಒಳಗೊಂಡಿದೆ.
ಸೀಮಿತ ಓವರ್ಗಳ ತಂಡಕ್ಕೆ ಅಥವಾ ಕೇವಲ ಟೆಸ್ಟ್ ಪಂದ್ಯಗಳಿಗೆ ಪರಿಗಣಿಸಲಾದ ಆಟಗಾರರು ಬಿ ಗುಂಪಿನಲ್ಲಿರುತ್ತಾರೆ. ಇನ್ನೂ ಸಿ ಗುಂಪಿನಲ್ಲಿರುವ ಆಟಗಾರರನ್ನು ಸಾಮಾನ್ಯವಾಗಿ ಮೂರು ಸ್ವರೂಪಗಳಲ್ಲಿ ಒಂದಕ್ಕೆ ನಿಮಿಯತವಾಗಿ ಪರಿಗಣಿಸಲಾಗುತ್ತದೆ.
ಎ+ನಲ್ಲಿ ಇರುವ ಆಟಗಾರರು
ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು ಗ್ರೇಡ್ ಎ ಯಿಂದ ಗ್ರೇಡ್ ಎ+ ಗೆ ಬಡ್ತಿ ನೀಡಲಾಗಿದ್ದು, ಅಗ್ರ ವರ್ಗದ ಆಟಗಾರರ ಸಂಖ್ಯೆ ಈಗ ಮೂರರಿಂದ ನಾಲ್ಕಕ್ಕೆ ಏರಿಸಲಾಗಿದೆ. ಈ ಮೊದಲು ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಈ ವಿಭಾಗದಲ್ಲಿ ಇದ್ದರು. ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ಅವರನ್ನು ಕ್ರಮವಾಗಿ ಗ್ರೇಡ್ ಬಿ ಮತ್ತು ಗ್ರೇಡ್ ಸಿ ಯಿಂದ ಎ ಗ್ರೇಡ್ಗೆ ಬಡ್ತಿ ನೀಡಲಾಗಿದೆ.
ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್ ಸಿ ಗ್ರೇಡ್ನಿಂದ ಬಿ ವಿಭಾಗಕ್ಕೆ ಬಡ್ತಿ ಪಡೆದಿದ್ದಾರೆ. ಆದರೆ ಶಾರ್ದೂಲ್ ಠಾಕೂರ್ ಬಿ ಇಂದ ಸಿ ಗ್ರೇಡ್ ಹಿಂಬಡ್ತಿ ಪಡೆದಿದ್ದಾರೆ. ಕಳೆದ ವರ್ಷ ಗುತ್ತಿಗೆಯಿಂದ ಹೊರ ಬಿದ್ದಿದ್ದ ಸ್ಪಿನ್ ಬೌಲರ್ ಕುಲ್ದೀಪ್ ಯಾದವ್ ಈ ಬಾರಿ ಕೇಂದ್ರ ಗುತ್ತಿಗೆಗೆ ಮರಳಿದ್ದು, ಸಿ ಗ್ರೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ವಿಕೆಟ್ ಕೀಪರ್ ಕೆಎಸ್ ಭರತ್ ಗುತ್ತಿಗೆ ಪಟ್ಟಿಯಲ್ಲಿ ಅವಕಾಶ ಪಡೆದ ಏಕೈಕ ಆಟಗಾರನಾಗಿದ್ದಾರೆ.
ಗುತ್ತಿಗೆಯಿಂದ ಹೊರ ಬಿದ್ದ ಆಟಗಾರರು
ಆಶ್ಚರ್ಯಕರ ಸಂಗತಿ ಎಂದರೆ ಹಿರಿಯ ಕ್ರಿಕೆಟಿಗರಾದ ಭುವನೇಶ್ವರ್ ಕುಮಾರ್, ಅಜಿಂಕ್ಯ ರಹಾನೆ ಮತ್ತು ಇಶಾಂತ್ ಶರ್ಮಾ, ಹನುಮ ವಿಹಾರಿ, ಮಯಾಂಕ್ ಅಗರ್ವಾಲ್, ವೃದ್ಧಿಮಾನ್ ಸಹಾ ಮತ್ತು ದೀಪಕ್ ಚಹರ್ 2023-24ರ ಬಿಸಿಸಿಐ ಗುತ್ತಿಗೆಯಿಂದ ಹೊರ ಬಿದ್ದಿದ್ದಾರೆ. ಇಶಾಂತ್ ಮತ್ತು ರಹಾನೆ ಕಳೆದ ಋತುವಿನಲ್ಲಿ ‘ಬಿ’ ಕೆಟಗರಿಯಲ್ಲಿದ್ದರು, ಉಳಿದವರು ‘ಸಿ’ ಕೆಟಗರಿಯಲ್ಲಿದ್ದರು.
Cricket bcci announces central contract ravindra jadeja promoted kl rahul demote full details here.
13-10-25 10:09 pm
HK News Desk
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
D.K. Shivakumar, MLA Munirathna, RSS: ಮುನಿರತ್...
12-10-25 08:05 pm
13-10-25 10:37 pm
HK News Desk
Kerala, IT professional dead, RSS members: ಆರ...
13-10-25 05:31 pm
ಪಾಕಿಸ್ತಾನದ ಸೇನಾ ಔಟ್ ಪೋಸ್ಟ್ ಮೇಲೆ ಅಫ್ಘಾನ್ ಭೀಕರ...
12-10-25 10:19 pm
Afghan Foreign Minister, Amir Khan Muttaqi: ಮ...
11-10-25 12:52 pm
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
13-10-25 07:47 pm
Udupi Correspondent
ಆರೆಸ್ಸೆಸ್ ಸೇವಾ ಚಟುವಟಿಕೆ ತಿಳಿಯದ ಪ್ರಿಯಾಂಕ ಖರ್ಗೆ...
13-10-25 04:33 pm
Honey Bees Attack in Puttur: ಪುತ್ತೂರು ; ಹೆಜ್ಜ...
12-10-25 09:53 pm
ಪುತ್ತೂರಿಗೆ ಬಂದಿದ್ದ ಇಬ್ಬರು ಯುವತಿಯರು ದಿಢೀರ್ ನಾಪ...
12-10-25 06:53 pm
Uchila Fire, Mangalore: ಹೊತ್ತಿ ಉರಿದ ಉಚ್ಚಿಲದ ಗ...
12-10-25 05:46 pm
13-10-25 10:04 pm
Mangalore Correspondent
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm