Cricket Bcci is reason for kl rahul poor form said ex pakistan skipper.
">ಬ್ರೇಕಿಂಗ್ ನ್ಯೂಸ್
21-03-23 12:42 pm Source: news18 ಕ್ರೀಡೆ
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮಾರ್ಚ್ 17 ರಂದು ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕೆ ಎಲ್ ರಾಹುಲ್ ಟೀಮ್ ಇಂಡಿಯಾದ ಗರಿಷ್ಟ ಸ್ಕೋರರ್ ಆಗಿದ್ದರು. 30ರ ಹರೆಯದ ಈ ಬಲಗೈ ಬ್ಯಾಟ್ಸ್ಮನ್ ಅಜೇಯ 75 ರನ್ ಗಳಿಸಿ ಭಾರತಕ್ಕೆ 39.5 ಓವರ್ ಗಳಲಿ 5 ವಿಕೆಟ್ ಕಳೆದುಕೊಂಡು 189 ರನ್ ಗಳಿಸಲು ನೆರವಾದರು.
ಟೀಕಾಕಾರರ ಬಾಯಿ ಮುಚ್ಚಿಸಿದ್ದ ಕೆ.ಎಲ್. ರಾಹುಲ್
ಪಂದ್ಯದ ಆರಂಭಕ್ಕೂ ಮುನ್ನ ತಂಡದಲ್ಲಿ ಕೆ.ಎಲ್. ಅವರ ಸ್ಥಾನದ ಬಗ್ಗೆ ಅನೇಕ ರೀತಿಯ ಪ್ರಶ್ನೆಗಳು ಎದ್ದಿದ್ದವು. ಆದರೆ ಅವರು ಏಕದಿನ ಸರಣಿಯ ಆರಂಭಿಕ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದರು.
ಮೊದಲ ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಕೆ.ಎಲ್.ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹಿನ್ನಡೆ ಅನುಭವಿಸಿದ್ದರು. ತಮ್ಮ ಸ್ಕೋರ್ ಅನ್ನು ದೊಡ್ಡದಾಗಿ ಪರಿವರ್ತಿಸುವಲ್ಲಿ ಅವರು ಸತತವಾಗಿ ವಿಫಲವಾದ ನಂತರ ಅವರನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ತಂಡದಿಂದ ಕೈಬಿಡಲಾಯಿತು. ಅವರನ್ನು ಟೆಸ್ಟ್ ಉಪನಾಯಕ ಸ್ಥಾನದಿಂದ ವಜಾ ಮಾಡಲಾಯಿತು ಮತ್ತು ಅನೇಕರು ಅವರ ಫಾರ್ಮ್ ಮತ್ತು ತಂಡದಲ್ಲಿ ಸ್ಥಾನದ ಬಗ್ಗೆ ಪ್ರಶ್ನೆ ಮಾಡಿದರು. ಅವರನ್ನು ಫ್ಲಾಟ್-ಟ್ರ್ಯಾಕ್ನಲ್ಲಿ ಮತ್ತು ಐಪಿಎಲ್ನಲ್ಲಿ ಮಾತ್ರ ರನ್ ಗಳಿಸುತ್ತಾರೆ ಅಂತೆಲ್ಲಾ ಹೇಳಲಾಯಿತು.
ರಾಹುಲ್ ಕಳಪೆ ಟೆಸ್ಟ್ ಫಾರ್ಮ್ ಬಗ್ಗೆ ಏನ್ ಹೇಳಿದ್ರು ಪಾಕ್ ಮಾಜಿ ನಾಯಕ
ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಭಟ್ ಅವರ ಪ್ರಕಾರ, ರಾಹುಲ್ ಅವರ ಕಳಪೆ ಟೆಸ್ಟ್ ಫಾರ್ಮ್ ಮತ್ತು ಟೀಕೆಗಳಿಗೆ ಯಾರನ್ನಾದರೂ ದೂಷಿಸಿದರೆ, ಅದು ಬೇರೆ ಯಾರೂ ಅಲ್ಲ, ಬಿಸಿಸಿಐ ಆಯ್ಕೆ ಸಮಿತಿ.
ಭಟ್ ಪ್ರಕಾರ, ರಾಹುಲ್ ಅವರು ರನ್ ಗಳಿಸಲು ಕಷ್ಟಪಡುತ್ತಿದ್ದಾಗಲೂ ಅವರನ್ನು ಹಾಗೆಯೇ ಆಡಿಸುತ್ತಲೇ ಇದ್ದರು. ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಶುಬ್ಮನ್ ಗಿಲ್ ತಂಡದಲ್ಲಿ ಒಳ್ಳೆಯ ಫಾರ್ಮ್ನಲ್ಲಿದ್ದರೂ ಸಹ ಮ್ಯಾನೇಜ್ಮೆಂಟ್ ರಾಹುಲ್ ಅವರನ್ನು ಆಡಿಸುತ್ತಲೇ ಇತ್ತು ಎಂದು ಭಟ್ ಹೇಳಿದ್ದಾರೆ.
"ರಾಹುಲ್ ತಮ್ಮ ಕಳಪೆ ಫಾರ್ಮ್ ಬಗ್ಗೆ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ರಾಹುಲ್ ಅವರ ಟೀಕೆಗೆ ಭಾರತದ ಆಯ್ಕೆ ಸಮಿತಿಯೇ ಕಾರಣ ಎಂದು ನಾನು ನಂಬುತ್ತೇನೆ. ಅವರು ಫಾರ್ಮ್ ನಲ್ಲಿ ಇಲ್ಲದಿದ್ದರೂ ಅವರನ್ನು ಸ್ಥಿರವಾಗಿ ಆಡಿಸುತ್ತಲೇ ಇದ್ದರು. ಶುಬ್ಮನ್ ಗಿಲ್ ಅವರಂತಹ ಫಾರ್ಮ್ನಲ್ಲಿರುವ ಆಟಗಾರನನ್ನು ತಂಡದಲ್ಲಿ ಹೊಂದಿದ್ದರೂ ಅವರನ್ನು ಆಡಿಸಲಿಲ್ಲ ಎಂದು ತಮ್ಮ ಹೇಳಿಕೆ ಬಹಿರಂಗಪಡಿಸಿದರು.
"ನೀವು ನಿಮ್ಮ ಆಟಗಾರರ ಬಗ್ಗೆ ವಿಶ್ವಾಸವನ್ನು ತೋರಿಸಬೇಕು. ಆದರೆ ಅದನ್ನು ಮಾತುಗಳ ಮೂಲಕವೂ ಮಾಡಬಹುದು ಮತ್ತು ನೀವು ಅವರನ್ನು ಅನಗತ್ಯ ಟೀಕೆಗಳಿಂದ ರಕ್ಷಿಸಬಹುದು" ಎಂದು ಭಟ್ ಹೇಳಿದರು. ಟೆಸ್ಟ್ ಕ್ರಿಕೆಟ್ನಲ್ಲಿ ಕಳೆದ ಒಂದು ವರ್ಷದಿಂದ ಕೇವಲ ಒಂದೇ ಒಂದು ಅರ್ಧಶತಕವನ್ನು ಗಳಿಸದ ರಾಹುಲ್ಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಎರಡು ಪಂದ್ಯಗಳಲ್ಲಿ ಆಡಲು ಅವಕಾಶ ಕೊಟ್ಟಿದ್ದು, ಅವರನ್ನು ಇನ್ನೂ ಹೆಚ್ಚು ಟೀಕೆಗೆ ಗುರಿಯಾಗುವಂತೆ ಮಾಡಿತು ಎಂದು ಭಟ್ ಹೇಳಿದರು.
Cricket Bcci is reason for kl rahul poor form said ex pakistan skipper.
13-10-25 10:09 pm
HK News Desk
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
D.K. Shivakumar, MLA Munirathna, RSS: ಮುನಿರತ್...
12-10-25 08:05 pm
13-10-25 10:37 pm
HK News Desk
Kerala, IT professional dead, RSS members: ಆರ...
13-10-25 05:31 pm
ಪಾಕಿಸ್ತಾನದ ಸೇನಾ ಔಟ್ ಪೋಸ್ಟ್ ಮೇಲೆ ಅಫ್ಘಾನ್ ಭೀಕರ...
12-10-25 10:19 pm
Afghan Foreign Minister, Amir Khan Muttaqi: ಮ...
11-10-25 12:52 pm
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
13-10-25 07:47 pm
Udupi Correspondent
ಆರೆಸ್ಸೆಸ್ ಸೇವಾ ಚಟುವಟಿಕೆ ತಿಳಿಯದ ಪ್ರಿಯಾಂಕ ಖರ್ಗೆ...
13-10-25 04:33 pm
Honey Bees Attack in Puttur: ಪುತ್ತೂರು ; ಹೆಜ್ಜ...
12-10-25 09:53 pm
ಪುತ್ತೂರಿಗೆ ಬಂದಿದ್ದ ಇಬ್ಬರು ಯುವತಿಯರು ದಿಢೀರ್ ನಾಪ...
12-10-25 06:53 pm
Uchila Fire, Mangalore: ಹೊತ್ತಿ ಉರಿದ ಉಚ್ಚಿಲದ ಗ...
12-10-25 05:46 pm
13-10-25 10:04 pm
Mangalore Correspondent
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm