ಬ್ರೇಕಿಂಗ್ ನ್ಯೂಸ್
06-03-23 02:34 pm Source: news18 ಕ್ರೀಡೆ
ಟೀಂ ಇಂಡಿಯಾದ ಸ್ಟಾರ್ ವೇಗಿ ದೀಪಕ್ ಚಹಾರ್ ಅವರ ಜೀವನದ ಕಥೆ ಅದೆಷ್ಟೋ ಯುವಕರಿಗೆ ಸ್ಪೋರ್ತಿಯಾಗಬಹುದು. ಅವರು 1992 ರಲ್ಲಿ ಆಗ್ರಾದಲ್ಲಿ ಜನಿಸಿದರು. ಅವರು ಮಧ್ಯಮ ವರ್ಗದ ಕುಟುಂಬದ ಭಾಗವಾಗಿದ್ದರು. ಚಹಾರ್ ಅವರ ತಂದೆ ಭಾರತೀಯ ವಾಯುಪಡೆಯಲ್ಲಿ ಸೈನಿಕರಾಗಿದ್ದರು. ಆರಂಭದಲ್ಲಿ ಮಗನ ಓದಿನ ಕಡೆ ಹೆಚ್ಚು ಗಮನ ಹರಿಸಿದರು.
ಆದರೆ ದೀಪಕ್ ಕ್ರಿಕೆಟ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಆದರೆ ತಂದೆಯ ಹೆದರಿಕೆಗಾಗಿ ಈ ವಿಷಯ ಅವರಿಗೆ ಹೇಳಿರಲಿಲ್ಲ. ಅಧ್ಯಯನದ ಅಷ್ಟಾಗಿ ಗುರುತಿಸಿಕೊಳ್ಳದ ಕಾರಣ, ಅವರ ತಂದೆ ಲೋಕೇಂದರ್ ಸಿಂಗ್ ಅವರನ್ನು ಆಗಾಗ್ಗೆ ಗದರಿಸುತ್ತಿದ್ದರು. ಆದರೆ ಒಂದು ದಿನ ನೆರೆಯವರು ಲೋಕೇಂದರ್ ಸಿಂಗ್ಗೆ ಚಹಾರ್ ಆಟದ ಬಗ್ಗೆ ಸಲಹೆ ನೀಡಿದರು. ಮಗ ಆಡುತ್ತಿರುವುದನ್ನು ಕಂಡ ತಂದೆಗೆ ಒಬ್ಬ ವೇಗದ ಬೌಲರ್ ಕಾಣಿಸಿದ. ನಂತರ ಅವರು ಚಹಾರ್ ಅವರನ್ನು ಜೈಪುರದ ಕ್ರಿಕೆಟ್ ಅಕಾಡೆಮಿಗೆ ಸೇರಿಸಿದರು.
ತಂದೆಯ ಪೋಸ್ಟಿಂಗ್ ಅನ್ನು ರಾಜಸ್ಥಾನದಲ್ಲಿ ಮಾಡಲಾಯಿತು, ನಂತರ ಅವರೇ ಚಹರ್ ಅವರ ಕೋಚ್ ಆದರು. ಆದರೆ ಹೆಚ್ಚಿನ ಅಭ್ಯಾಸದ ಅಗತ್ಯವಿದ್ದಾಗ, ಲೋಕೇಂದರ್ ಸಿಂಗ್ ಮಗನಿಗಾಗಿ ಕೆಲಸವನ್ನು ತೊರೆದರು. ದೀಪಕ್ನ ತಂದೆ ಪ್ರತಿದಿನ 500 ಎಸೆತಗಳನ್ನು ಎಸೆಯುತ್ತಿದ್ದರು, ಅದರಲ್ಲಿ 250 ಇನ್-ಸ್ವಿಂಗ್ ಮತ್ತು 250 ಔಟ್-ಸ್ವಿಂಗ್ ಎಸೆತಗಳು. 2008 ರ ರಣಜಿ ಟ್ರೋಫಿ ಟ್ರಯಲ್ನಲ್ಲಿ, ರಾಜಸ್ಥಾನ್ ಕ್ರಿಕೆಟ್ ಅಸೋಸಿಯೇಷನ್ನ ನಿರ್ದೇಶಕ ಗ್ರೆಗ್ ಚಾಪೆಲ್ ಅವರು ಭಾರತಕ್ಕಾಗಿ ಆಡಲು ಸೂಚಿಸಿದ್ದರು.
ಫೆಬ್ರವರಿ 2010 ರಂದು ದೀಪಕ್ ಚಹಾರ್ ಥಮ ದರ್ಜೆಗೆ ಪಾದಾರ್ಪಣೆ ಮಾಡಿದರು. ಇದರಲ್ಲಿ ಅವರು ಕೇವಲ 7 ಓವರ್ಗಳಲ್ಲಿ 8 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಅವರು ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ತೋರಿಸಿದರು. ಆದರೆ ಈ ವೇಗಿ ಟೀಂ ಇಂಡಿಯಾವನ್ನು ತಲುಪುವ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಪದೇ ಪದೇ ಗಾಯಗಳಿಂದ ಅವರು ತಂಡದಿಂದ ಹೊರಗುಳಿಯುತ್ತಿದ್ದರು. ಅವರು ಮೂರು ವರ್ಷಗಳ ಕಾಲ ದೇಶೀಯ ಕ್ರಿಕೆಟ್ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಬಳಿಕ 2011ರಲ್ಲಿ, ಅವರನ್ನು ಆರ್ಸಿಬಿ ಶಿಬಿರಕ್ಕೆ ಸೇರಿಸಿಕೊಂಡರು. ಆದರೆ ಅವರಿಗೆ ಅವಕಾಶ ದೊರಕಲಿಲ್ಲ.
2016 ರಲ್ಲಿ, ಅವರು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ನ ಭಾಗವಾದರು ಮತ್ತು ಟೀಮ್ ಇಂಡಿಯಾ ನಾಯಕ ಎಂಎಸ್ ಧೋನಿ ಅವರ ಕಣ್ಣಿಗೆ ಬಿದ್ದರು. 2 ವರ್ಷಗಳಿಂದ ಅವರಿಗೆ ಇಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆದರೆ ಅವರು ಚೆನ್ನೈನ ಭಾಗವಾದಾಗ ಧೋನಿ ಅವರನ್ನು ಬಳಸಿಕೊಂಡರು. ಅದರ ನಂತರ ಈ ಆಟಗಾರ ಹಿಂತಿರುಗಿ ನೋಡಲಿಲ್ಲ. 2018 ರಲ್ಲಿ, ಚಹಾರ್ ಇಂಗ್ಲೆಂಡ್ ವಿರುದ್ಧ T20 ಚೊಚ್ಚಲ ಪಂದ್ಯವನ್ನು ಆಡುವ ಮೂಲಕ ತಮ್ಮ ಕನಸನ್ನು ಈಡೇರಿಸಿಕೊಂಡರು.
Deepak Chahar father left his air force job for his son.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm