ಬ್ರೇಕಿಂಗ್ ನ್ಯೂಸ್
21-02-23 01:03 pm Source: news18 ಕ್ರೀಡೆ
ಕ್ರಿಕೆಟ್ನಲ್ಲಿ ಆಟಗಾರರ ಆಕ್ರಮಣಕಾರಿ ಬ್ಯಾಟಿಂಗ್ ಇತ್ತೀಚೆಗೆ ಜೋರಾಗಿದೆ. ಟಿ20 ಕ್ರಿಕೆಟ್ ಮಾತ್ರವಲ್ಲ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲೂ ಆಕ್ರಮಣಕಾರಿ ಆಟ ಹೆಚ್ಚಾಗಿದೆ. ಇಂಗ್ಲೆಂಡ್ ತಂಡ ವಿಭಿನ್ನವಾಗಿ ಅಪ್ರೋಚ್ ಮಾಡ್ತಿದೆ. ಆಕ್ರಮಣಕಾರಿಯಾಗಿ ಆಡುತ್ತಾ ಸತತ ಗೆಲುವುಗಳನ್ನು ಪಡೆದುಕೊಳ್ಳುತ್ತಿದೆ.
ಟೆಸ್ಟ್ ಪಂದ್ಯ ಆರಂಭವಾದ ಮೊದಲ ಗಂಟೆಯಲ್ಲಿ ಬೌಲರ್ಗಳ ಪ್ರಾಬಲ್ಯ ಹೆಚ್ಚಲಿದ್ದು, ಬ್ಯಾಟ್ಸ್ಮನ್ಗಳು ಎಚ್ಚರಿಕೆಯಿಂದ ಆಡಬೇಕಿದೆ. ಆರಂಭದಿಂದಲೂ ಬ್ಯಾಟ್ಸ್ಮನ್ಗಳ ಮೇಲೆ ಬೌಲರ್ಗಳಿಗೆ ಅಗ್ರೆಸ್ಸಿವ್ ಆಗಿ ದಾಳಿ ನಡೆಸುತ್ತಾರೆ. ಇತ್ತೀಚೆಗೆ ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್ಮನ್ ಹೊರಹೊಮ್ಮಿದ್ದಾರೆ.
109 ಸಿಕ್ಸರ್ ಸಿಡಿಸಿ ಬ್ರೆಂಡನ್ ಮೆಕಲಮ್ ಸಾಧನೆಯನ್ನು ಬೆನ್ ಸ್ಟೋಕ್ಸ್ ಮುರಿದಿದ್ದಾರೆ. ಆದರೆ ಟೆಸ್ಟ್ನಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ ಟೀಂ ಇಂಡಿಯಾ ಆಟಗಾರ ಯಾರು ಗೊತ್ತಾ? ಸದ್ಯ ಟಾಪ್ನಲ್ಲಿರುವ ಬೆನ್ಸ್ಟೋಕ್ಸ್ ದಾಖಲೆ ಮುರಿಯುವ ಅವಕಾಶ ಯಾರಿಗಿದೆ ಅಂತ ನೋಡುವುದಾದರೆ.. ಕಪಿಲ್ ದೇವ್: ಟೀಂ ಇಂಡಿಯಾ ಆಲ್ಟೈಮ್ ಟೆಸ್ಟ್ ಪ್ಲೇಯರ್ ಕಪಿಲ್ ದೇವ್ ಒಬ್ಬರು. ಕಪಿಲ್ ದೇವ್ ಟೆಸ್ಟ್ ವೃತ್ತಿ ಜೀವನದಲ್ಲಿ 61 ಸಿಕ್ಸರ್ ಸಿಡಿಸಿದ್ದಾರೆ. 1980ರಲ್ಲಿ ಸಾಕಷ್ಟು ಮಂದಿ ಉತ್ತಮ ಫಾಸ್ಟ್ ಬೌಲರ್ಗಳನ್ನು ಎದುರಿಸಿ ಟೆಸ್ಟ್ ಕ್ರಿಕೆಟ್ನಲ್ಲಿ 61 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು. ಬೌಲರ್ಗಳಿಗೆ ಯಾವುದೇ ಮಿತಿಗಳು ಇಲ್ಲದ ಸಂದರ್ಭದಲ್ಲಿ, ಯಾವುದೇ ಸೆಫ್ಟಿ ಇಲ್ಲದ ಸಮಯದಲ್ಲಿ ಸಿಕ್ಸರ್ ಸಿಡಿಸುವುದು ಎಲ್ಲರಿಗೂ ಸಾಧ್ಯವಿಲ್ಲ ಅಂತ ಹೇಳಬಹುದು.
ರೋಹಿತ್ ಶರ್ಮಾ: ಟೀಂ ಇಂಡಿಯಾ ಪರ ಟೆಸ್ಟ್ನಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಸ್ಥಾನ ಪಡೆದುಕೊಂಡಿದ್ದಾರೆ. ಲಿಸ್ಟ್ನಲ್ಲಿ ಇತರರಿಗೆ ಹೋಲಿಕೆ ಮಾಡಿದರೆ ರೋಹಿತ್ ಶರ್ಮಾ ಕಡಿಮೆ ಪಂದ್ಯಗಳನ್ನು ಆಡಿದ್ದಾರೆ. ಸದ್ಯ ಟೀಂ ಇಂಡಿಯಾ ಟೆಸ್ಟ್ ಕ್ಯಾಪ್ಟನ್ ಆಗಿರುವ ಹಿಟ್ಮ್ಯಾನ್ ಕಡಿಮೆ ಇನ್ನಿಂಗ್ಸ್ಗಳಲ್ಲಿ 68 ಸಿಕ್ಸರ್ ಸಿಡಿಸಿದ್ದಾರೆ. 80 ಇನ್ನಿಂಗ್ಸ್ಗಳಲ್ಲಿ ರೋಹಿತ್ ಸಾಧನೆ ಮಾಡಿದ್ದಾರೆ. 10 ವರ್ಷಗಳ ಟೆಸ್ಟ್ ವೃತ್ತಿ ಜೀವನದಲ್ಲಿ ಟೀಂ ಇಂಡಿಯಾ ಪರ 47 ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. 2019ರಲ್ಲಿ ಟೆಸ್ಟ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯಲು ಆರಂಭಿಸಿದ ಬಳಿಕ ಅದ್ಬುತ ಬ್ಯಾಟಿಂಗ್ ಪ್ರದರ್ಶಿಸಿದ್ದು, ರೋಹಿತ್ ಭವಿಷ್ಯದಲ್ಲಿ ಟೀಂ ಇಂಡಿಯಾ ಪರ ಟೆಸ್ಟ್ನಲ್ಲಿ ಹೆಚ್ಚು ಸಿಕ್ಸರ್ ಸಿಡಿಸುವ ಸಾಧನೆ ಮಾಡುವ ಅವಕಾಶವಿದೆ. ಬೆನ್ ಸ್ಟೋಕ್ಸ್ ದಾಖಲೆಯನ್ನು ಮುರಿಯುವ ಅವಕಾಶವನ್ನು ರೋಹಿತ್ ಹೊಂದಿದ್ದಾರೆ.
ಸಚಿನ್ ತೆಂಡೂಲ್ಕರ್: ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ ಸಚಿನ್ ತೆಂಡೂಲ್ಕರ್. ಟೀಂ ಇಂಡಿಯಾ ಪರ ಹೆಚ್ಚು ಸಿಕ್ಸರ್ ಸಿಡಿಸಿದ ಪಟ್ಟಿಯ ಸ್ಥಾನದಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಸಚಿನ್ ತಮ್ಮ ವೃತ್ತಿ ಜೀವನದಲ್ಲಿ 200 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 329 ಟೆಸ್ಟ್ ಇನ್ನಿಂಗ್ಸ್ಗಳಲ್ಲಿ 69 ಸಿಕ್ಸರ್ ಸಿಡಿಸಿದ್ದಾರೆ. ಎಂಎಸ್ ಧೋನಿ: ಟೆಸ್ಟ್ ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ಪರ ಅತ್ಯಾಧಿಕ ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. 90 ಟೆಸ್ಟ್ ಪಂದ್ಯಗಳಲ್ಲಿ 144 ಇನ್ನಿಂಗ್ಸ್ಗಳಿಂದ 78 ಸಿಕ್ಸರ್ ಸಿಡಿಸಿದ್ದಾರೆ. ಧೋನಿ ಟೆಸ್ಟ್ ಕ್ರಿಕೆಟ್ ಆರಂಭದಲ್ಲಿ ಆಕ್ರಮಣಕಾರಿಯಾಗಿ ಆಡಿದ್ರೂ ಆ ಬಳಿಕ ನಾಯಕತ್ವ ಜವಾಬ್ದಾರಿ ವಹಿಸಿಕೊಂಡ ಕಾರಣ ತಮ್ಮ ಬ್ಯಾಟಿಂಗ್ ಶೈಲಿಯನ್ನು ಬದಲಿಸಿಕೊಂಡಿದ್ದರು.
ವಿರೇಂದ್ರ ಸೆಹ್ವಾಗ್: ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಾಧಿಕ ಸಿಕ್ಸರ್ ಸಿಡಿಸಿದ ಆಟಗಾರ ಪಟ್ಟಿಯಲ್ಲಿ ಸೆಹ್ವಾಗ್ ಮೊದಲ ಸ್ಥಾನದಲ್ಲಿದ್ದಾರೆ. ಅಲ್ಲದೆ ವಿಶ್ವ ಕ್ರಿಕೆಟ್ನಲ್ಲಿ ಟೆಸ್ಟ್ ಮಾದರಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರಲ್ಲಿ ಸೆಹ್ವಾಗ್ 6ನೇ ಸ್ಥಾನದಲ್ಲಿದ್ದಾರೆ. 164 ಟೆಸ್ಟ್ ಇನ್ನಿಂಗ್ಸ್ನಲ್ಲಿ 49.34 ಸರಾಸರಿಯಲ್ಲಿ 8,586 ಟೆಸ್ಟ್ ರನ್ಗಳನ್ನು ಸೆಹ್ವಾಗ್ ಸಿಡಿಸಿದ್ದಾರೆ. ಇದರಲ್ಲಿ 2 ದ್ವಿಶತಕ, 23 ಶತಕಗಳು ಸೇರಿದೆ.
ಸದ್ಯ ಈ ಪಟ್ಟಿಯಲ್ಲಿರುವ ಆಟಗಾರರಲ್ಲಿ ರೋಹಿತ್ ಶರ್ಮಾ ಮಾತ್ರ ಕ್ರಿಕೆಟ್ ಆಡುತ್ತಿದ್ದಾರೆ. ಟೆಸ್ಟ್ನಲ್ಲಿ ಎರಡು ಸಿಕ್ಸರ್ ಸಿಡಿದರೆ ಸಚಿನ್ರನ್ನು ಹಿಂದಿಕ್ಕಿ ಮುಂದೆ ಸಾಗಲಿದ್ದು, 23 ಸಿಕ್ಸರ್ ಸಿಡಿಸಿದರೆ ಧೋನಿ, 24 ಸಿಕ್ಸರ್ ಸಿಡಿಸಿದರೆ ಸೆಹ್ವಾಗ್ ಅವರನ್ನು ಕೂಡ ಹಿಂದಿಕ್ಕಿ ಟೀಂ ಇಂಡಿಯಾ ಪರ ಮೊದಲ ಸ್ಥಾನದಲ್ಲಿ ನಿಲ್ಲಲಿದ್ದಾರೆ.
IND vs AUS test series 2023 five Indian batters with most sixes in test cricket.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm