ಬ್ರೇಕಿಂಗ್ ನ್ಯೂಸ್
30-01-23 02:26 pm Source: news18 ಕ್ರೀಡೆ
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತ್ಯಂತ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಪಾರ ಅಭಿಮಾನಿಗಳನ್ನು ಹೊಂದಿದೆ. ಈಗಾಗಲೇ ಐಪಿಎಲ್ 2023ಗೆ ಆರ್ಸಿಬಿ ಅಂತಿಮ ತಂಡವನ್ನು ಸಿದ್ಧಗೊಳಿಸಿದೆ. ಆದರೆ ಈ ಬಾರಿ ತಂಡದ ಸ್ಟಾರ್ ಆಲ್ ರೌಂಡರ್ ಆದ ಗ್ಲೆನ್ ಮ್ಯಾಕ್ಸ್ವೆಲ್ ಐಪಿಎಲ್ ಆರ್ಂಭಕ್ಕೂ ಮುನ್ನವೇ ಅಪಘಾತಕ್ಕೀಡಾಗಿದ್ದರು. ಬರ್ತಡೇ ಪಾರ್ಟಿ ವೇಳೆ ಮ್ಯಾಕ್ಸ್ವೆಲ್ ಕಾಲುಜಾರಿ ಬಿದ್ದು ಎಡ ಫೈಬುಲಾ ಮುರಿತಕ್ಕೆ ಒಳಗಾಗಿದ್ದರು.
ಹೀಗಾಗಿ ಮ್ಯಾಕ್ಸ್ವೆಲ್ ಆಸೀಸ್ ಪರ ಅನೇಕ ಸರಣಿಗಳಿಂದ ದೂರ ಉಳಿದಿದ್ದರು. ಅದಕ್ಕಾಗಿ ಶಸ್ತ್ರ ಚಿಕಿತ್ಸೆಗೂ ಅವರು ಒಳಗಾಗಿದ್ದರು. ಆದರೆ ಇದೀಗ ಆರ್ಸಿಬಿ ಅಭಿಮಾನಿಗಳಿಗೆ ಒಂದು ಸಮತಸದ ಸುದ್ದಿ ಕೇಳಿಬಂದಿದೆ. ಐಪಿಎಲ್ ಆರಂಭಕ್ಕೂ ಮುನ್ನವೇ ತಂಡಕ್ಕೆ ಸ್ಟಾರ್ ಆಲ್ರೌಂಡರ್ ಕಂಬ್ಯಾಕ್ ಮಾಡುವುದು ಖಚಿತವಾಗಿದೆ.
ಹೌದು, ಆರ್ಸಿಬಿ ತಂಡದ ಸ್ಟಾರ್ ಪ್ಲೇಯರ್ ಮ್ಯಾಕ್ಸ್ವೆಲ್ ಕೆಲವೇ ವಾರಗಳಲ್ಲಿ ರಾಷ್ಟ್ರೀಯ ತಂಡ ಸೇರಿಕೊಳ್ಳಲಿದ್ದಾರೆ ಎಂದು ಆಸ್ಟ್ರೇಲಿಯಾ ಪತ್ರಿಕೆಗಳು ವರದಿ ಮಾಡಿದೆ. ಇದರಿಂದಾಗಿ ಮ್ಯಾಕ್ಸ್ವೆಲ್ ಗುಣಮುಖರಾಗಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಮ್ಯಾಕ್ಸ್ವೆಲ್ ಅವರು ಆಸ್ಟ್ರೇಲಿಯಾ ತಂಡದ ಪರ ಇನ್ನೇನು ಕೆಲವೇ ದಿನಗಳಲ್ಲಿ ಆಡುವ ಜೊತೆಗೆ ಐಪಿಎಲ್ 2023 ವೇಳೆ ಆರ್ಸಿಬಿ ತಂಡ ಸೇರಿಕೊಳ್ಳುವುದು ಖಚಿತವಾಗಿದೆ.
ಹೀಗಾಗಿ ಮ್ಯಾಕ್ಸ್ವೆಲ್ ಮೆಲ್ಬೋರ್ನ್ ನಲ್ಲಿ ನಡೆಯಲಿರುವ ಕ್ವೀನ್ಸ್ಲ್ಯಾಂಡ್ ವಿರುದ್ಧದ ಶೆಫೀಲ್ಡ್ ಶೀಲ್ಡ್ ಪಂದ್ಯದಲ್ಲಿ ವಿಕ್ಟೋರಿಯಾ ಪರವಾಗಿ ಕಣಕ್ಕಿಳಿಯಲಿದ್ದಾರಂತೆ. ಈ ಸುದ್ದಿ ಸಹ ಆರ್ಸಿಬಿ ಅಭಿಮಾಣಿಗಳ ಸಂತಸಕ್ಕೆ ಕಾರಣವಾಗಿದೆ. ಐಪಿಎಲ್ 2023ರ ಮಿನಿ ಹರಾಜು ಮುಗಿದಿದೆ. ಎಲ್ಲಾ ತಂಡಗಳು ಮುಂದಿನ ಸೀಸನ್ಗೆ ತಮ್ಮ ತಂಡವನ್ನು ಬಲಿಷ್ಠವಾಗಿ ಕಟ್ಟಿದೆ. ಐಪಿಎಲ್ 2023ರ 16ನೇ ಸೀಸನ್ಗೆ ಆರ್ಸಿಬಿ ತಂಡ 25 ಆಟಗಾರರ ಬಲಿಷ್ಠ ತಂಡವನ್ನು ಕಟ್ಟಿದೆ. ಹರಾಜಿಗೂ ಮುನ್ನ ತಂಡ 5 ಜನ ಆಟಗಾರರನ್ನು ಬಿಡುಗಡೆ ಮಾಡಿತ್ತು. ಆದರೆ ಈ ಹರಾಜಿನಲ್ಲಿ 7 ಆಟಗಾರರನ್ನು ತಂಡ ಖರೀದಿಸಿದೆ.
2023ಕ್ಕೆ RCB ಸಂಪೂರ್ಣ ತಂಡ: ಫಾಫ್ ಡು ಪ್ಲೆಸಿಸ್ (ಸಿ), ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮಹಿಪಾಲ್ ಲೊಮ್ರೋರ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಿರಾಜ್ ಹ್ಯಾಜಲ್ವುಡ್, ಸಿದ್ದಾರ್ಥ್ ಕೌಲ್, ಆಕಾಶ್ ದೀಪ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ , ವಿಲ್ ಜಾಕ್ಸ್ , ಮನೋಜ್ ಭಾಂಡಗೆ, ರಾಜನ್ ಕುಮಾರ್, ಅವಿನಾಶ್ ಸಿಂಗ್, ಸೋನು ಯಾದವ್.
IPL 2023 Glenn Maxwell will Join the RCB Team Soon.
15-03-25 12:33 pm
HK News Desk
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 01:47 pm
Mangalore Correspondent
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm