ಬ್ರೇಕಿಂಗ್ ನ್ಯೂಸ್
02-01-23 12:34 pm Source: Vijayakarnataka ಕ್ರೀಡೆ
ತಮ್ಮ ಶಿಷ್ಯ ಹಾಗೂ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರು ರಾಷ್ಟ್ರೀಯ ತಂಡಕ್ಕೆ ಕಮ್ಬ್ಯಾಕ್ ಮಾಡಲು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ನೆರವು ನೀಡಿದ್ದಾರೆಂದು ಕಪಿಲ್ ಪಾಂಡೆ ಇತ್ತೀಚೆಗೆ ಹೇಳಿಕೊಂಡಿದ್ದಾರೆ.
ಸ್ಪೋರ್ಟ್ಸ್ ಕೀಡಾ ಜೊತೆ ಮಾತನಾಡಿದ ಕಪಿಲ್ ಪಾಂಡೆ,"ಕುಲ್ದೀಪ್ ಯಾದವ್ ಗಾಯಕ್ಕೆ ತುತ್ತಾಗಿ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿದ್ದಾಗ ನಾಯಕ ರೋಹಿತ್ ಶರ್ಮಾ ನೆರವು ನೀಡಿದ್ದರು. ಅದೇ ರೀತಿ ಕುಲ್ದೀಪ್ ಯಾದವ್ಗೆ ಅಷ್ಟೇ ಸಹಕಾರವನ್ನು ರಾಹುಲ್ ದ್ರಾವಿಡ್ ಕೊಟ್ಟಿದ್ದರು. ಇವರ ಜೊತೆಗೆ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಹಿರಿಯ ಆಟಗಾರರು ಕೂಡ ಕುಲ್ದೀಪ್ ಯಾದವ್ ಕಮ್ಬ್ಯಾಕ್ಗೆ ನೆರವಾಗಿದ್ದಾರೆ," ಎಂದರು.
ಗಾಯಕ್ಕೆ ತುತ್ತಾದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಲು ಕುಲ್ದೀಪ್ ಯಾದವ್ ತುಂಬಾ ಕಠಿಣ ಪರಿಶ್ರಮ ಪಟ್ಟಿದ್ದಾರೆ. ಇದರ ಫಲವಾಗಿ ಅವರು 2022ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ 21 ವಿಕೆಟ್ ಕಬಳಿಸಿದ್ದರು ಎಂದರು.
"ಕುಲ್ದೀಪ್ ಯಾದವ್ ಅವರು ಕಮ್ಬ್ಯಾಕ್ ಮಾಡಲು ಸಾಕಷ್ಟು ಪರಿಶ್ರಮ ಪಟ್ಟಿದ್ದರು. ತಂಡದಲ್ಲಿ ಇರಲಿ ಅಥವಾ ಇಲ್ಲದೇ ಇರಲಿ ನಾವಿಬ್ಬರೂ ಜೊತೆಗೂಡಿ ಸಾಕಷ್ಟು ಕೆಲಸ ಮಾಡಿದ್ದೇವೆ. ಅದರಂತೆ ಅವರು ಪಟ್ಟ ಪರಿಶ್ರಮದಿಂದ ದಿಲ್ಲಿ ಕ್ಯಾಪಿಟಲ್ಸ್ ಪರ ಐಪಿಎಲ್ ಟೂರ್ನಿಯಲ್ಲಿ 21 ವಿಕೆಟ್ಗಳನ್ನು ಕಬಳಿಸಿದ್ದರು," ಎಂದು ಕಪಿಲ್ ಪಾಂಡೆ ತಿಳಿಸಿದರು.
ಟೆಸ್ಟ್, ಒಡಿಐ ಹಾಗೂ ಟಿ20 ಸೇರಿದಂತೆ ಮೂರೂ ಸ್ವರೂಪದಲ್ಲಿ ಆಡುವ ಸಲುವಾಗಿ ಕುಲ್ದೀಪ್ ಯಾದವ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಕಡೆಗೂ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಈ ಹಾದಿಯಲ್ಲಿ ಯುವ ಸ್ಪಿನ್ನರ್ ಹೆಚ್ಚಿನ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
"ಗಾಯಕ್ಕೆ ತುತ್ತಾದ ಬಳಿಕ ಕುಲ್ದೀಪ್ ಯಾದವ್ ಯಾವುದೇ ಹಿನ್ನಡೆ ಅನುಭವಿಸಲಿಲ್ಲ. ಯಾವುದಕ್ಕೂ ಎದೆಗುಂದದೆ ಹೆಚ್ಚಿನ ಪರಿಶ್ರಮ ಪಟ್ಟು ಕಮ್ಬ್ಯಾಕ್ ಮಾಡಿದ್ದಾರೆ. ಭಾರತ ತಂಡದ ಪರ ಟೆಸ್ಟ್, ಏಕದಿನ ಹಾಗೂ ಟಿ20 ಸೇರಿದಂತೆ ಮೂರೂ ಸ್ವರೂಪದಲ್ಲಿ ಆಡಬೇಕೆಂದು ನಾವು ಅವರನ್ನು ತಯಾರಿ ಮಾಡಿದ್ದೇವೆ," ಎಂದು ತಿಳಿಸಿದರು.
ಬರೋಬ್ಬರಿ ಎರಡು ವರ್ಷಗಳ ಬಳಿಕ ಭಾರತ ಟೆಸ್ಟ್ ತಂಡಕ್ಕೆ ಮರಳಿದ್ದ ಕುಲ್ದೀಪ್ ಯಾದವ್ ಅವರು ಮೊದಲನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ 40 ರನ್ ಹಾಗೂ 5 ವಿಕೆಟ್ ಸಾಧನೆ ಮಾಡಿದ್ದರು. ನಂತರ ದ್ವಿತೀಯ ಇನಿಂಗ್ಸ್ನಲ್ಲಿ 3 ವಿಕೆಟ್ ಕಬಳಿಸಿದ್ದರು. ಆ ಮೂಲಕ ಭಾರತ ತಂಡದ ಗೆಲುವಿಗೆ ನೆರವಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
"ಬಾಂಗ್ಲಾದೇಶ ವಿರುದ್ದದ ಟೆಸ್ಟ್ ಸರಣಿಯಲ್ಲಿಯೂ ಅವರು ಅತ್ಯುತ್ತಮ ಫಲಿತಾಂಶವನ್ನು ಪಡೆದುಕೊಂಡಿದ್ದರು. ಅವರು ಚೆಂಡನ್ನು ಎರಡೂ ಹಾದಿಯಲ್ಲಿ ತಿರುಗಿಸಿದ್ದರು ಹಾಗೂ ವೇಗವನ್ನು ಬದಲಿಸುತ್ತಿದ್ದರು. ಆದ್ದರಿಂದ ಕುಲ್ದೀಪ್ ಯಾದವ್ ಅವರ ಎಸೆತಗಳನ್ನು ಅರಿತುಕೊಳ್ಳುವುದು ಬಾಂಗ್ಲಾ ಬ್ಯಾಟ್ಸ್ಮನ್ಗಳಿಗೆ ತುಂಬಾ ಕಠಿಣವಾಗಿತ್ತು," ಎಂದು ಕಪಿಲ್ಪಾಂಡೆ ಹೇಳಿದರು.
Captain, Coach Helped Him Make Comeback-Kuldeep Yadavs Coach Kapil Pandey Praises Rohit Sharma, Rahul Dravid.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm