ಬ್ರೇಕಿಂಗ್ ನ್ಯೂಸ್
29-12-22 12:10 pm Source: Vijayakarnataka ಕ್ರೀಡೆ
ಗೋವಾ ವಿರುದ್ದದ ಪಂದ್ಯದಲ್ಲಿ ಭರ್ಜರಿ ಬ್ಯಾಟ್ ಮಾಡಿದ ಕರ್ನಾಟಕ ತಂಡದ ಹಿರಿಯ ಬ್ಯಾಟ್ಸ್ಮನ್ ಮನೀಷ್ ಪಾಂಡೆ ಭರ್ಜರಿ ದ್ವಿಶತಕ ಸಿಡಿಸಿದ್ದಾರೆ. ಆ ಮೂಲಕ ಪಂದ್ಯದ ಎರಡನೇ ದಿನ ಕರ್ನಾಟಕ ತಂಡ ಮೇಲುಗೈ ಸಾಧಿಸಲು ನೆರವಾಗಿದ್ದಾರೆ.
ಬುಧವಾರ ಇಲ್ಲಿನ ಗೋವಾ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಆರಂಭವಾದ 2022-23ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಎಲೈಟ್ ಸಿ ಪಂದ್ಯದ ಎರಡನೇ ದಿನದಾಟ ಮನೀಷ್ ಪಾಂಡೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದರು. ದಿನವೀಡಿ ಗೋವಾ ಬೌಲರ್ಗಳನ್ನು ಕಾಡಿದ ಮನೀಷ್ ದ್ವಿಶತಕ ಬಾರಿಸಿದರು.
ನಾಯಕ ಮಯಾಂಕ್ ಅಗರ್ವಾಲ್ ವಿಕೆಟ್ ಒಪ್ಪಿಸಿದ ಬಳಿಕ ಬಿರುಸಿನ ಬ್ಯಾಟ್ ಮಾಡಿದ ಮನೀಷ್ ಪಾಂಡೆ ಎದುರಿಸಿದ 186 ಎಸೆತಗಳಲ್ಲಿ 11 ಭರ್ಜಸಿ ಸಿಕ್ಸರ್ ಹಾಗೂ 14 ಮನಮೋಹಕ ಬೌಂಡರಿಗಳೊಂದಿಗೆ ಅಜೇಯ 204 ರನ್ ಗಳಿಸಿದರು. ಆ ಮೂಲಕ ಕರ್ನಾಟಕ ತಂಡ ಮೇಲುಗೈ ಸಾಧಿಸಲು ನೆರವಾದರು.
ಮನೀಷ್ ಪಾಂಡೆಗೂ ಮುನ್ನ ವಿಶಾಲ್ ಒನತ್ 91 ರನ್ ಗಳಿಗೆ ವಿಕೆಟ್ ಒಪ್ಪಿಸಿ ಶತಕ ವಂಚಿತರಾದರು. ಇದಕ್ಕೂ ಮುನ್ನ ಮೊದಲನೇ ದಿನ ಸಮರ್ಥ್ ಆರ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಎದುರಿಸಿದ್ದ 238 ಎಸೆತಗಳಲ್ಲಿ ಸಮರ್ಥ್ ಅವರು 14 ಬೌಂಡರಿಗಳೊಂದಿಗೆ 140 ರನ್ ಗಳಿಸಿದ್ದರು. ಒಟ್ಟಾರೆ 148.2 ಓವರ್ಗಳಿಗೆ 7 ವಿಕೆಟ್ ಕಳೆದುಕೊಂಡು 603 ರನ್ಗಳಿಸಿ ಕರ್ನಾಟಕ ತಂಡ ಡಿಕ್ಲೆರ್ ಮಾಡಿಕೊಂಡಿತು.
ಗೋವಾ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ದರ್ಶನ್ ಮಿಶಲ್ ಅವರು ಮೂರು ವಿಕೆಟ್ಗಳನ್ನು ಕಬಳಿಸಿದ್ದಾರೆ. ಅಂದಹಾಗೆ ಅರ್ಜುನ್ ತೆಂಡೂಲ್ಕರ್ ಎರಡನೇ ದಿನ 26.2 ಓವರ್ಗಳಿಗೆ 79 ರನ್ ನೀಡಿದರೂ ಎರಡು ನಿರ್ಣಾಯಕ ವಿಕೆಟ್ಗಳನ್ನು ಪಡೆದಿದ್ದರು. ಲಕ್ಷ್ಯ ಗರ್ಗ್ ಹಾಗೂ ಸಿದ್ದೇಶ್ ಲಾಡ್ ತಲಾ ಒಂದೊಂದು ವಿಕೆಟ್ಗಳನ್ನು ಪಡೆದರು.
ಗೋವಾ 45ಕ್ಕೆ 1: ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಗೋವಾ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 23 ಓವರ್ಗಳಿಗೆ ಒಂದು ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿದೆ. ಸುಮೀರನ್ ಅಮೋಂಕರ್ 31* ಹಾಗೂ ಸುಯೇಷ್ ಪ್ರಭುದೇಸಾಯಿ 6* ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕರ್ನಾಟಕ ಪರ ರೋನಿತ್ ಮೋರೆ ಒಂದು ವಿಕೆಟ್ ಕಬಳಿಸಿದರು.
ಕರ್ನಾಟಕ: ಪ್ರಥಮ ಇನಿಂಗ್ಸ್ 148.2 ಓವರ್ಗಳಿಗೆ 603-7 ಡಿಕ್ಲೆರ್ (ಮನೀಷ್ ಪಾಂಡೆ 204*, ಆರ್ ಸಮರ್ಥ್ 140, ವಿಶಾಲ್ ಒನತ್ 91, ಮಯಾಂಕ್ ಅಗರ್ವಾಲ್ 50; ದರ್ಶನ್ ಮಿಶಲ್ 145ಕ್ಕೆ 3, ಅರ್ಜುನ್ ತೆಂಡೂಲ್ಕರ್ 79ಕ್ಕೆ 2)
ಗೋವಾ: ಪ್ರಥಮ ಇನಿಂಗ್ಸ್ 23 ಓವರ್ಗಳಿಗೆ 45-1 (ಸುಮೀರನ್ ಅಮೋಂಕರ್ 31*, ಸುಯೇಷ್ ಫ್ರಭು ದೇಸಾಯಿ 6*; ರೋನಿತ್ ಮೋರೆ 10 ಕ್ಕೆ 1)
Ranji Trophy 2022 Manish Pandey’s 208 Puts Karnataka In Command After Arjun Tendulkar Shines For Goa.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm