ಬ್ರೇಕಿಂಗ್ ನ್ಯೂಸ್
26-12-22 11:56 am Source: Vijayakarnataka ಕ್ರೀಡೆ
ಬಾಂಗ್ಲಾದೇಶ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 3 ವಿಕೆಟ್ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಕನ್ನಡಿಗ ಕೆ.ಎಲ್.ರಾಹುಲ್ ಸಾರಥ್ಯದ ಟೀಮ್ ಇಂಡಿಯಾ 2-0 ಅಂತದರಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು.
ಇಲ್ಲಿನ ಶೇರ್ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡಕ್ಕೆ ದ್ವಿತೀಯ ಇನಿಂಗ್ಸ್ನಲ್ಲಿ ಗೆಲ್ಲಲು 145 ರನ್ ಅಗತ್ಯವಿತ್ತು. ಆದರೆ, ಪಂದ್ಯದ ಮೂರನೇ ದಿನವೇ ಬಾಂಗ್ಲಾದೇಶ ತಂಡದ ಸ್ಪಿನ್ನರ್ಗಳು, 4 ವಿಕೆಟ್ ಕಬಳಿಸುವ ಮೂಲಕ 45 ರನ್ಗಳಿಗೆ 4 ಪ್ರಮುಖ ವಿಕೆಟ್ ಕಬಳಿಸಿ ಭಾರತ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದರು.
ನಾಲ್ಕನೇ ದಿನವಾದ ಭಾನುವಾರ ಕೂಡ ಬಾಂಗ್ಲಾ ಬೌಲರ್ಗಳು ಉತ್ತಮ ಪ್ರದರ್ಶನ ತೋರಿ 74 ರನ್ಗಳಿಗೆ ಪ್ರಮುಖ 7 ವಿಕೆಟ್ ಉರುಳಿಸಿ ಗೆಲುವಿನ ಸನಿಹದಲ್ಲಿತ್ತು. ಆ ಮೂಲಕ ಟೀಮ್ ಇಂಡಿಯಾ ವಿರುದ್ಧ ಮೊದಲ ಟೆಸ್ಟ್ ಗೆಲುವು ಸಾಧಿಸುವ ಆಸೆಯನ್ನು ಬಾಂಗ್ಲಾದೇಶ ಹೊಂದಿತ್ತು. ಆದರೆ 8ನೇ ವಿಕೆಟ್ಗೆ ಜೊತೆಗೂಡಿದ ರವಿಚಂದ್ರನ್ ಅಶ್ವಿನ್ ಹಾಗೂ ಶ್ರೇಯಸ್ ಅಯ್ಯರ್ ಜೋಡಿ 71 ರನ್ ಜೊತೆಯಾಟವಾಡುವ ಮೂಲಕ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿತು.
ಅದರಲ್ಲೂ ವಿಶೇಷವಾಗಿ ಆರ್ ಅಶ್ವಿನ್ 62 ಎಸೆತಗಳಲ್ಲಿ ಅಜೇಯ 46 ರನ್ ಹಾಗೂ ಶ್ರೇಯಸ್ ಅಯ್ಯರ್ ಅಜೇಯ 29 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಇದಕ್ಕೂ ಮುನ್ನ ಅಕ್ಷರ್ ಪಟೇಲ್ 34 ನಿರ್ಣಾಯಕ ರನ್ಗಳನ್ನು ಕಲೆ ಹಾಕಿದ್ದರು.
ಸರಣಿ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಚೇತೇಶ್ವರ್ ಪೂಜಾರ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿ, "ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಬಾಂಗ್ಲಾದೇಶದ ಸ್ಪಿನ್ನರ್ಗಳು ಉತ್ತಮ ಪ್ರದರ್ಶನ ನೀಡಿ ನಮ್ಮ ಅಗ್ರ ಕ್ರಮಾಂಕದ ಪ್ರಮುಖ 3 ವಿಕೆಟ್ಗಳನ್ನು ಕಬಳಿಸಿ ತಂಡಕ್ಕೆ ಆಘಾತ ನೀಡಿದ್ದರು. ಹಾಗಾಗಿ ದಿನದ ಕೊನೆಯ ಹಂತದಲ್ಲಿ ಪ್ರಮುಖ ಬ್ಯಾಟರ್ಗಳನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಅಕ್ಷರ್ ಪಟೇಲ್ ಅವರನ್ನು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಕಳುಹಿಸಲಾಗಿತ್ತು," ಎಂದರು.
"ಬಾಂಗ್ಲಾದೇಶದ ಮೂವರು ಸ್ಪಿನ್ನರ್ಗಳ ಪೈಕಿ ಇಬ್ಬರು ಎಡಗೈ ಸ್ಪಿನ್ನರ್ಗಳಾಗಿದ್ದರು. ಅಕ್ಷರ್ ಪಟೇಲ್ ಎಡಗೈ ಬ್ಯಾಟರ್ ಆಗಿದ್ದು ತಾಳ್ಮೆಯಿಂದ ಬ್ಯಾಟ್ ಮಾಡಿ ವಿಕೆಟ್ ಕಾಪಾಡಿಕೊಂಡರು. ತಂಡದ ಪ್ರಮುಖ ಬ್ಯಾಟರ್ಗಳ ವಿಕೆಟ್ ಕಾಪಾಡಿಕೊಳ್ಳಲು ಇದು ಸಹಕಾರಿ ಆಯಿತು. ಇದು ಕೂಡ ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿತು," ಎಂದು ಚೇತೇಶ್ವರ್ ಪೂಜಾರ ಪ್ರಶಂಸಿಸಿದರು.
"ತಂಡವು 140 ಅಥವಾ 145 ರನ್ಗಳ ಸುಲಭದ ಗುರಿಯನ್ನು ಚೇಸ್ ಮಾಡುವಾಗ ಪ್ರತಿಯೊಂದು ರನ್ ಕೂಡ ಮಹತ್ವ ಪಡೆಯುತ್ತದೆ. ಬ್ಯಾಟರ್ಗಳು ಕೂಡ ರನ್ ಗಳಿಸುವುದು ಅಷ್ಟೇ ಮುಖ್ಯ ಆಗಿರುತ್ತದೆ. ಅಕ್ಷರ್ ಪಟೇಲ್ ಉತ್ತಮ ಬ್ಯಾಟರ್ ಆಗಿದ್ದಾರೆ, ಆದ್ದರಿಂದ ಅವರು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದು ನನಗೆ ಅಚ್ಚರಿ ಮೂಡಿಸಿಲ್ಲ. ಬದಲಿಗೆ ಅವರ ಬ್ಯಾಟ್ನಿಂದ ತಂಡದ ಗೆಲುವಿಗೆ ಉಪಯುಕ್ತ ರನ್ಗಳು ಹರಿದು ಬಂದಿವೆ. ತಂಡದ ಗೆಲುವಿನಲ್ಲಿ ಅಕ್ಷರ್ ಪಟೇಲ್ ಕೂಡ ನಿರ್ಣಾಯಕ ಪಾತ್ರ ವಹಿಸಿದ್ದಾರೆ," ಎಂದು ಚೇತೇಶ್ವರ್ ಪೂಜಾರ ಹೇಳಿದರು.
Ind Vs Ban Low Order Batsman Axar Patel Promoted Batting Is A Crucial Role To Win The Match Against Bangladesh, Says Cheteshwar Pujara.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm