ಬ್ರೇಕಿಂಗ್ ನ್ಯೂಸ್
14-12-22 01:42 pm Source: Vijayakarnataka ಕ್ರೀಡೆ
ಬಾಂಗ್ಲಾದೇಶ ಪ್ರವಾಸದಲ್ಲಿರುವ ಟೀಮ್ ಇಂಡಿಯಾ, ಏಕದಿನ ಕ್ರಿಕೆಟ್ ಸರಣಿಯಲ್ಲಿ 1-2 ಅಂತರದ ಹೀನಾಯ ಸೋಲುಂಡಿತು. ಈಗ ಎರಡು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಪೈಪೋಟಿ ನಡೆಸಲಿದ್ದು, ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಟೂರ್ನಿಯ ಎರಡನೇ ಆವೃತ್ತಿಯಲ್ಲಿ ಫೈನಲ್ ತಲುಪಲು ಈ ಸರಣಿಯಲ್ಲಿ ವೈಟ್ವಾಶ್ ಗೆಲುವನ್ನು ಭಾರತ ತಂಡ ಎದುರು ನೋಡುತ್ತಿದೆ. ಆದರೆ, ಸರಣಿ ಆರಂಭಕ್ಕೂ ಮೊದಲು ಗಾಯದ ಸಮಸ್ಯೆಗಳ ಕಾರಣ ಕ್ಯಾಪ್ಟನ್ ರೋಹಿತ್ ಶರ್ಮಾ ಸೇರಿದಂತೆ ಕೆಲ ಪ್ರಮುಖ ಆಟಗಾರರ ಸೇವೆಯನ್ನು ಟೀಮ್ ಇಂಡಿಯಾ ಕಳೆದುಕೊಂಡಿರುವುದು ಬಹುದೊಡ್ಡ ಹಿನ್ನಡೆ ತಂದೊಡ್ಡಿದೆ.
ರೋಹಿತ್ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಅನುಭವಿ ಆರಂಭಿಕ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್ ಮುನ್ನಡೆಸುತ್ತಿದ್ದಾರೆ. ಆದರೆ, ಅಚ್ಚರಿಯ ಚೆಳವಣಿಗೆ ಎಂಬಂತೆ ಬಾಂಗ್ಲಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯಕ್ಕೆ ವೈಸ್ ಕ್ಯಾಪ್ಟನ್ ಆಗಿ ಚೇತೇಶ್ವರ್ ಪೂಜಾರ ನೇಮಕೊಂಡಿದ್ದಾರೆ. ಇದಕ್ಕೂ ಮೊದಲು ಈ ಜವಾಬ್ದಾರಿ ತಂಡದ ಸ್ಟಾರ್ ವಿಕೆಟ್ಕೀಪರ್ ರಿಷಭ್ ಪಂತ್ ಅವರದ್ದಾಗಿತ್ತು. ಹೀಗಿರುವಾಗ ಪಂತ್ ಅವರಿಂದ ಈ ಜಾವಾಬ್ದಾರಿ ಕಿತ್ತುಕೊಂಡಿರುವ ಬಗ್ಗೆ ಮಾಜಿ ಕ್ರಿಕೆಟಿಗೆ ಮೊಹಮ್ಮದ್ ಕೈಫ್ ಅಸಮಾಧಾನ ಹೊರಹಾಕಿದ್ದಾರೆ.
"ಇದು ನಿಜಕ್ಕೂ ಅಚ್ಚರಿ ತಂದಿರುವ ನಿರ್ಧಾರ. ಕಳೆದ ಬಾರಿ ಭಾರತ ತಂಡ ಟೆಸ್ಟ್ ಕ್ರಿಕೆಟ್ ಆಡಿದ್ದ ಸಂದರ್ಭದಲ್ಲಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ತಂಡದ ವೈಸ್ ಕ್ಯಾಪ್ಟನ್ ಆಗಿದ್ದರು," ಎಂದು ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ ಕಾರ್ಯಕ್ರಮದಲ್ಲಿ ಕೈಫ್ ಮಾತನಾಡಿದ್ದಾರೆ. ಚೇತೇಶ್ವರ್ ಪೂಜಾರ ಅವರಿಗೆ ವೈಸ್ ಕ್ಯಾಪ್ಟನ್ ಜವಾಬ್ದಾರಿ ಹೊರಿಸುವ ಆಲೋಚನೆ ಮೊದಲೇ ಇದ್ದಿದ್ದರೆ, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೇ ಕೊಡಬೇಕಿತ್ತು ಎಂದು ಕೈಫ್ ಹೇಳಿದ್ದಾರೆ.
"ಇಂಗ್ಲೆಂಡ್ ಪ್ರವಾಸದಲ್ಲೂ ಪೂಜಾರ ಭಾರತ ತಂಡದಲ್ಲಿ ಇದ್ದರು. ಆಗ ಅವರಿಗೆ ವೈಸ್ಕ್ಯಾಪ್ಟನ್ ಕೊಡದೆ ಈಗ ಕೊಟ್ಟಿದ್ದೀರಿ ಎಂದರೆ ಆಗ ನಿಮ್ಮ ನಿರ್ಧಾರ ತಪ್ಪಾಗಿತ್ತು ಎಂದಾಗುತ್ತದೆ. ಇಂತಹ ವಿಚಾರದಲ್ಲಿ ಆತುರ ಏಕೆ? ಪಂತ್ ಅವರನ್ನು ಆತುರದಲ್ಲಿ ಕ್ಯಾಪ್ಟನ್ ಮಾಡುವ ಅಗತ್ಯವಿತ್ತೆ? ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ಈಗಷ್ಟೇ ಬೇರೂರುವ ಪ್ರಯತ್ನ ಮಾಡುತ್ತಿದ್ದಾರೆ. ಭಾರತ ತಂಡಕ್ಕೆ ಕೆಲ ಅದ್ಭುತ ಗೆಲುವುಗಳನ್ನು ದಕ್ಕಿಸಿಕೊಟ್ಟಿದ್ದಾರೆ. ಆದರೂ ಆತ ಇನ್ನೂ ಯುವ ಆಟಗಾರ. ಇಷ್ಟು ಬೇಗ ಯಾರನ್ನೂ ಕ್ಯಾಪ್ಟನ್ ಅಥವಾ ವೈಸ್ ಕ್ಯಾಪ್ಟನ್ ಮಾಡುವ ಅಗತ್ಯ ಇರಲಿಲ್ಲ. ಈ ಆತುರ ಯಾವುದಕ್ಕಾಗಿ ಎಂಬುದೇ ಅರ್ಥವಾಗುತ್ತಿಲ್ಲ. ಒಬ್ಬ ಆಟಗಾರ ಉತ್ತಮ ಆಟವಾಡಿ ಪಂದ್ಯಗಳನ್ನು ಗೆದ್ದುಕೊಡುವುದಕ್ಕೆ ಏಕೆ ಬಿಡುತ್ತಿಲ್ಲ? ಎಂಬುದು ತಿಳಿಯುತ್ತಿಲ್ಲ. ಕ್ಯಾಪ್ಟನ್ ಆಗುವುದಲ್ಲ ಪಂದ್ಯಗಳನ್ನು ಗೆದ್ದುಕೊಡುವುದು ಇಲ್ಲಿ ಮುಖ್ಯವಾಗುತ್ತದೆ. ಆದರೆ, ಇಲ್ಲಿ ಆಟಗಾರರ ಕಡೆಗಷ್ಟೇ ಹೆಚ್ಚು ಗಮನ ಕೊಡುತ್ತಿದ್ದಾರೆ. ಪಂದ್ಯಗಳನ್ನು ಗೆಲ್ಲುವುದರ ಕಡೆಗಲ್ಲ. ಈಗ ವೈಸ್ ಕ್ಯಾಪ್ಟನ್ಸಿ ಕೊಟ್ಟು ಮತ್ತೆ ಕಸಿದುಕೊಂಡು ತಪ್ಪಿನ ಮೇಲೆ ತಪ್ಪು ಮಾಡಲಾಗಿದೆ," ಎಂದು ಕೈಫ್ ಟೀಕೆ ಮಾಡಿದ್ದಾರೆ.
ಪ್ರಥಮ ಟೆಸ್ಟ್ಗೆ ಭಾರತ ಆಯ್ದುಕೊಂಡ 11ರ ಬಳಗ
ಶುಭಮನ್ ಗಿಲ್, ಕೆಎಲ್ ರಾಹುಲ್ (ನಾಯಕ), ಚೇತೇಶ್ವರ ಪೂಜಾರ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್.
ಪ್ರಥಮ ಟೆಸ್ಟ್ ಭಾರತ ತಂಡ ಹೀಗಿದೆ
ಕೆ.ಎಲ್ ರಾಹುಲ್ (ನಾಯಕ), ಅಭಿಮನ್ಯು ಈಶ್ವರನ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ಕೀಪರ್), ಕೆ.ಎಸ್ ಭರತ್ (ವಿಕೆಟ್ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಶಾರ್ದುಲ್ ಠಾಕೂರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ನವದೀಪ್ ಸೈನಿ, ಜಯದೇವ್ ಉನಾದ್ಕಟ್ ಮತ್ತು ಸೌರಭ್ ಕುಮಾರ್.
Ind Vs Ban Mohammad Kaif Slams Decision To Name Cheteshwar Pujara Vice-Captain Ahead Of Rishabh Pant.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 04:11 pm
Mangalore Correspondent
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm