ಬ್ರೇಕಿಂಗ್ ನ್ಯೂಸ್
08-12-22 01:39 pm Source: Vijayakarnataka ಕ್ರೀಡೆ
ಬಾಂಗ್ಲಾದೇಶ ವಿರುದ್ದ ಎರಡನೇ ಏಕದಿನ ಪಂದ್ಯದಲ್ಲಿ ಗಾಯಾಳು ರೋಹಿತ್ ಶರ್ಮಾ ಜಾಗದಲ್ಲಿ ವಾಷಿಂಗ್ಟನ್ ಸುಂದರ್ ಅಥವಾ ಕೆ.ಎಲ್ ರಾಹುಲ್ ಅವರಲ್ಲಿ ಒಬ್ಬರು ಇನಿಂಗ್ಸ್ ಆರಂಭಿಸಬೇಕಾಗಿತ್ತು. ಆದರೆ, ಶಿಖರ್ ಧವನ್ ಜೊತೆ ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸುವ ನಿರ್ಧಾರ ನನಗೆ ಅಚ್ಚರಿ ಮೂಡಿಸಿದೆ ಎಂದು ಮಾಜಿ ಕ್ರಿಕೆಟಿಗ ವಸೀಮ್ ಜಾಫರ್ ಹೇಳಿದ್ದಾರೆ.
ಬುಧವಾರ ಇಲ್ಲಿನ ಶೇರ್-ಇ-ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದ ಆರಂಭದಲ್ಲಿಯೇ ರೋಹಿತ್ ಶರ್ಮಾ ಎರಡನೇ ಸ್ಲಿಪ್ನಲ್ಲಿ ಕ್ಯಾಚ್ ಪಡೆಯುವ ಭರದಲ್ಲಿ ತಮ್ಮ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ನೋವು ತಾಳಲಾರದ ಅವರು ತಕ್ಷಣ ಮೈದಾನವನ್ನು ತೊರೆದಿದ್ದರು.
ರೋಹಿತ್ ಶರ್ಮಾ ಗಾಯಕ್ಕೆ ತುತ್ತಾಗಿದ್ದರಿಂದ ಶಿಖರ್ ಧವನ್ ಜೊತೆ ವಿರಾಟ್ ಕೊಹ್ಲಿ ಇನೀಂಗ್ಸ್ ಆರಂಭಿಸಿದ್ದರು. ಆದರೆ, ಟೀಮ್ ಇಂಡಿಯಾ ಮಾಜಿ ನಾಯಕನಿಂದ ಯಾವುದೇ ಪರಿಣಾಮಕಾರಿ ಬ್ಯಾಟಿಂಗ್ ಪ್ರದರ್ಶನ ಮೂಡಿ ಬಂದಿರಲಿಲ್ಲ. ಆದರೆ, ಗಾಯದ ಹೊರತಾಗಿಯೂ 9ನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದಿದ್ದ ರೋಹಿತ್ ಶರ್ಮಾ ಕೇವಲ 28 ಎಸೆತಗಳಲ್ಲಿ 51 ರನ್ ಸಿಡಿಸಿದ್ದರು. ಆದರೂ ಭಾರತ ತಂಡ 5 ರನ್ ಸೋಲು ಅನುಭವಿಸಿತು.
ಇಎಸ್ಪಿಎನ್ ಕ್ರಿಕ್ಇನ್ಪೊ ಜೊತೆ ಮಾತನಾಡಿದ ವಸೀಮ್ ಜಾಫರ್ ಅವರು, ವಿರಾಟ್ ಕೊಹ್ಲಿ ಅವರ ಬದಲು ಕೆ.ಎಲ್ ರಾಹುಲ್ ಅಥವಾ ವಾಷಿಂಗ್ಟನ್ ಸುಂದರ್ ಅವರಲ್ಲಿ ಒಬ್ಬರನ್ನು ಇನಿಂಗ್ಸ್ ಆರಂಭಿಸಲು ಕಳುಹಿಸಬೇಕಾಗಿತ್ತು. ಆದರೆ, ವಿರಾಟ್ ಕೊಹ್ಲಿ ಓಪನಿಂಗ್ಗೆ ಬಂದಿದ್ದು ಒಳ್ಳೆಯ ನಿರ್ಧಾರವಲ್ಲ ಎಂದರು.
"ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸಿದ್ದರಿಂದ ನನಗೆ ಸ್ವಲ್ಪ ಅಚ್ಚರಿಯಾಯಿತು. ಟಿ20 ಕ್ರಿಕೆಟ್ನಂತೆ ಏಕದಿನ ಕ್ರಿಕೆಟ್ನಲ್ಲಿಯೂ ಕೊಹ್ಲಿ ಇನಿಂಗ್ಸ್ ಆರಂಭಿಸುವುದು ಸರಿಯಲ್ಲ. ಆದರೆ, ಕೆ.ಎಲ್ ರಾಹುಲ್ ಅವರನ್ನು ನೀವು ಇನಿಂಗ್ಸ್ ಆರಂಭಿಸಲು ಬಳಸಿಕೊಳ್ಳಬಹುದಿತ್ತು. ಏಕೆಂದರೆ ಅವರು ಈ ಎರಡೂ ಸ್ವರೂಪದಲ್ಲಿ ಸಾಕಷ್ಟು ಬಾರಿ ಇನಿಂಗ್ಸ್ ಆರಂಭಿಸಿದ್ದಾರೆ," ಎಂದು ಹೇಳಿದರು.
"ಕೆ.ಎಲ್ ರಾಹುಲ್ ಬಿಟ್ಟು ಬೇರೆ ಯಾರಾದರೂ ಇನಿಂಗ್ಸ್ ಆರಂಭಿಸಲು ಬಯಸುವುದಾದರೆ, ವಾಷಿಂಗ್ಟನ್ ಸುಂದರ್ ಅವರನ್ನು ಪ್ರಯತ್ನಿಸಬಹುದಿತ್ತು. ಆಗ ಇನ್ನುಳಿದ ಬ್ಯಾಟ್ಸ್ಮನ್ಗಳು ಅವರದೇ ಕ್ರಮಾಂಕಗಳಲ್ಲಿ ಬ್ಯಾಟ್ ಮಾಡಬಹುದಿತ್ತು. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, 4ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಹಾಗೂ 5ನೇ ಕ್ರಮಾಂಕದಲ್ಲಿ ಕೆ.ಎಲ್ ರಾಹುಲ್ ಆಡಬಹುದಿತ್ತು. ಆದರೆ, ಕೊಹ್ಲಿ ಇನಿಂಗ್ಸ್ ಆರಂಭಿಸಲು ಬಂದಾಗ ನನಗೆ ಅಚ್ಚರಿಯಾಗಿತ್ತು. ಅಂದಹಾಗೆ ಕೆ.ಎಲ್ ಅಥವಾ ವಾಷಿಂಗ್ಟನ್ ಅವರಲ್ಲಿ ಒಬ್ಬರು ಓಪನ್ ಮಾಡಬೇಕಿತ್ತು," ಎಂದು ವಸೀಮ್ ಜಾಫರ್ ತಿಳಿಸಿದರು.
ಎರಡನೇ ಪಂದ್ಯದಲ್ಲಿಯೂ ಭಾರತ ತಂಡ ಸೋಲು ಅನುಭವಿಸಿದ್ದರಿಂದ ರೋಹಿತ್ ಶರ್ಮಾ ಪಡೆ 0-2 ಅಂತರದಲ್ಲಿ ಏಕದಿನ ಸರಣಿಯನ್ನು ಕಳೆದುಕೊಂಡಿತು. ಶನಿವಾರ ಚತ್ತೋಗ್ರಾಮ್ನಲ್ಲಿ ನಡೆಯಲಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡ ಕಣಕ್ಕೆ ಇಳಿಯಲಿದ್ದು, ವೈಟ್ ವಾಷ್ ಆಘಾತವನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸಲಿದೆ.
Ind Vs Ban They Could Have Looked At Washington Sundar Wasim Jaffer Surprised After Virat Kohli Opens In 2nd Odi Vs Bangladesh.
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
14-10-25 11:22 am
HK News Desk
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
Kerala, IT professional dead, RSS members: ಆರ...
13-10-25 05:31 pm
ಪಾಕಿಸ್ತಾನದ ಸೇನಾ ಔಟ್ ಪೋಸ್ಟ್ ಮೇಲೆ ಅಫ್ಘಾನ್ ಭೀಕರ...
12-10-25 10:19 pm
14-10-25 06:39 pm
Mangalore Correspondent
ಬಿ.ಸಿ ರೋಡ್ ; ಹೆದ್ದಾರಿ ಬದಿ ಕಾರು ರಿಪೇರಿ ಮಾಡುತ್...
14-10-25 05:46 pm
ಗಾಲ -2025 ಈಜು ಸ್ಪರ್ಧೆ ; ವೀ ಒನ್ ಆಕ್ವಾ ಈಜು ತಂಡಕ...
14-10-25 03:40 pm
Raju Talikote Death: ಹಿರಿಯ ರಂಗಭೂಮಿ ಕಲಾವಿದ, ಹಾ...
13-10-25 07:47 pm
ಆರೆಸ್ಸೆಸ್ ಸೇವಾ ಚಟುವಟಿಕೆ ತಿಳಿಯದ ಪ್ರಿಯಾಂಕ ಖರ್ಗೆ...
13-10-25 04:33 pm
14-10-25 04:44 pm
HK News Desk
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm