ಬ್ರೇಕಿಂಗ್ ನ್ಯೂಸ್
05-12-22 01:11 pm Source: Vijayakarnataka ಕ್ರೀಡೆ
ಬ್ಯಾಟಿಂಗ್ ವೈಫಲ್ಯದಿಂದ ಮೊದಲನೇ ಏಕದಿನ ಪಂದ್ಯದಲ್ಲಿ ಒಂದು ವಿಕೆಟ್ ಸೋಲು ಅನುಭವಿಸಿ ಮುಖಭಂಗ ಅನುಭವಿಸಿರುವ ಭಾರತ ತಂಡ ಡಿಸೆಂಬರ್ 7 ರಂದು ಬುಧವಾರ ನಡೆಯಲಿರುವ ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಮೂರು ಪಂದ್ಯಗಳ ಏಕದಿನ ಸರಣಿಯನ್ನು ಜೀವಂತವಾಗಿ ಉಳಿಸಿಕೊಳ್ಳಬೇಕೆಂದರೆ ಭಾರತ ತಂಡ ಈ ಪಂದ್ಯದಲ್ಲಿ ಗೆಲುವು ಪಡೆಯುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಭಾರತಕ್ಕೆ ಮಾಡು ಇಲ್ಲವೇ ಮಡಿ ಪರಿಸ್ಥಿತಿ ಎದುರಾಗಿದೆ.
ಇದೇ ಅಂಗಣದಲ್ಲಿ ಭಾನುವಾರ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿತ್ತು. ಕೆ.ಎಲ್ ರಾಹುಲ್ (73 ರನ್, 70 ಎಸೆತಗಳು) ಅವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್ಮನ್ಗಳು ವೈಫಲ್ಯ ಅನುಭವಿಸಿದ್ದರು.
ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ ಅವರ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಿತ್ತು. ಆದರೆ, ಮೊದಲನೇ ಪಂದ್ಯದಲ್ಲಿಯೇ ಈ ಎಲ್ಲಾ ಬ್ಯಾಟ್ಸ್ಮನ್ಗಳು ಬಾಂಗ್ಲಾ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾಗಿತ್ತು. ಇದರಿಂದಾಗಿ ಭಾರತ ತಂಡ ಎದುರಾಳಿ ಬಾಂಗ್ಲಾದೇಶ ತಂಡಕ್ಕೆ 187 ರನ್ ಗುರಿ ನೀಡಿತ್ತು.
ಬಳಿಕ ಗುರಿ ಹಿಂಬಾಲಿಸಿದ್ದ ಬಾಂಗ್ಲಾದೇಶ ತಂಡವನ್ನು ಭಾರತ ತಂಡದ ಬೌಲರ್ಗಳು ಕಟ್ಟಿಹಾಕಿದ್ದರು. ಅದರಂತೆ ಬಾಂಗ್ಲಾದೇಶ ತಂಡ ಒಂದು ಹಂತದಲ್ಲಿ 136 ರನ್ಗಳಿಗೆ ಪ್ರಮುಖ 9 ವಿಕೆಟ್ಗಳನ್ನು ಕಳೆದುಕೊಂಡಿತ್ತು. ಆ ಮೂಲಕ ಸೋಲಿನ ಭೀತಿಗೆ ಒಳಗಾಗಿತ್ತು. ಆದರೆ, ಮೆಹದಿ ಹಸನ್ 39 ಎಸೆತಗಳಲ್ಲಿ ಅಜೇಯ 38 ರನ್ ಗಳಿಸುವ ಮೂಲಕ ಬಾಂಗ್ಲಾದೇಶ ತಂಡದ ರೋಚಕ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಭಾರತದ ಪರ ತನ್ನ ಚೊಚ್ಚಲ ಪಂದ್ಯದಲ್ಲಿಯೇ ಕುಲ್ದೀಪ್ ಸೇನ್ ಎರಡು ವಿಕೆಟ್ ಕಬಳಿಸ ಗಮನ ಸೆಳೆದರು.
ಒಟ್ಟಾರೆ ಈ ಪಂದ್ಯದಲ್ಲಿ ಭಾರತ ತಂಡ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಪಂದ್ಯದಲ್ಲಿ ಭಾರತ ತಂಡ ತನ್ನ ಬ್ಯಾಟಿಂಗ್ನಲ್ಲಿನ ತಪ್ಪುಗಳನ್ನು ತಿದ್ದಿಕೊಂಡು ಉತ್ತಮ ಪ್ರದರ್ಶನ ತೋರಬೇಕಾಗಿದೆ. ಈ ನಿಟ್ಟಿನಲ್ಲಿ ರೋಹಿತ್ ಶರ್ಮಾ, ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಈ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಒಂದು ಬದಲಾವಣೆ ಸಾಧ್ಯತೆ ಇದೆ. ಶಹಬಾಜ್ ಅಹ್ಮದ್ ಅವರ ಬದಲು ಅಕ್ಷರ್ ಪಟೇಲ್ ಆಡುವ ಬಳಗಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಎರಡನೇ ಏಕದಿನ ಪಂದ್ಯಕ್ಕೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ XI
1. ರೋಹಿತ್ ಶರ್ಮಾ (ನಾಯಕ, ಓಪನರ್)
2. ಶಿಖರ್ ಧವನ್ (ಓಪನರ್)
3. ವಿರಾಟ್ ಕೊಹ್ಲಿ (ಬ್ಯಾಟ್ಸ್ಮನ್)
4.ಶ್ರೇಯಸ್ ಅಯ್ಯರ್(ಬ್ಯಾಟ್ಸ್ಮನ್)
5.ಕೆ.ಎಲ್ ರಾಹುಲ್ (ವಿ.ಕೀ, ಬ್ಯಾಟ್ಸ್ಮನ್)
6.ವಾಷಿಂಗ್ಟನ್ ಸುಂದರ್(ಆಲ್ರೌಂಡರ್)
7.ಶಹಬಾಜ್ ಅಹ್ಮದ್/ಅಕ್ಷರ್ ಪಟೇಲ್ (ಆಲ್ರೌಂಡರ್)
8.ಶಾರ್ದುಲ್ ಠಾಕೂರ್ (ವೇಗದ ಬೌಲರ್)
9.ದೀಪಕ್ ಚಹರ್(ವೇಗದ ಬೌಲರ್)
10.ಮೊಹಮ್ಮದ್ ಸಿರಾಜ್ (ವೇಗದ ಬೌಲರ್)
11.ಕುಲ್ದೀಪ್ ಸೇನ್ (ವೇಗದ ಬೌಲರ್)
ಎರಡನೇ ಏಕದಿನ ಪಂದ್ಯಕ್ಕೆ ಬಾಂಗ್ಲಾದೇಶ ತಂಡದ ಸಂಭಾವ್ಯ ಪ್ಲೇಯಿಂಗ್ XI
1. ನಜ್ಮುಲ್ ಹುಸೇನ್ ಶಾಂತೊ(ಓಪನರ್)
2. ಲಿಟನ್ ದಾಸ್ (ಓಪನರ್, ನಾಯಕ),
3. ಅನಾಮುಲ್ ಹಕ್ (ಬ್ಯಾಟ್ಸ್ಮನ್)
4. ಶಕಿಬ್ ಅಲ್ ಹಸನ್(ಆಲ್ರೌಂಡರ್)
5. ಮುಷ್ಫಿಕರ್ ರಹೀಮ್ (ವಿಕೆಟ್ಕೀಪರ್)
6. ಮಹ್ಮೂದುಲ್ಲ (ಬ್ಯಾಟ್ಸ್ಮನ್)
7. ಅಫೀಫ್ ಹುಸೇನ್ (ಬ್ಯಾಟ್ಸ್ಮನ್)
8. ಮೆಹಿದಿ ಹಸನ್ ಮಿರಾಜ್ (ಆಲ್ರೌಂಡರ್)
9. ಇಬಾದತ್ ಹುಸೇನ್ (ವೇಗದ ಬೌಲರ್)
10. ಹಸನ್ ಮಹ್ಮೂದ್(ವೇಗದ ಬೌಲರ್)
11. ಮುಸ್ತಾಫಿಝುರ್ ರಹಮಾನ್(ವೇಗದ ಬೌಲರ್)
ಪಂದ್ಯದ ವಿವರ
ಭಾರತ vs ಬಾಂಗ್ಲಾದೇಶ ಎರಡನೇ ಏಕದಿನ ಪಂದ್ಯ
ದಿನಾಂಕ: ಡಿಸೆಂಬರ್ 7, 2022
ಸಮಯ: ಮಧ್ಯಾನ 12ಕ್ಕೆ
ಸ್ಥಳ: ಶೇರ್-ಇ-ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂ, ಮೀರ್ಪುರ್
Ind Vs Ban 2nd Odi Match Preview Indias Probable Playing Xi, Bangladeshs Probable Playing Xi, Date, Time, Head To Head Record.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm