ಬ್ರೇಕಿಂಗ್ ನ್ಯೂಸ್
28-11-22 12:44 pm Source: Vijayakarnataka ಕ್ರೀಡೆ
ನ್ಯೂಜಿಲೆಂಡ್ ಮತ್ತು ಟೀಮ್ ಇಂಡಿಯಾ ನಡುವಣ ಮತ್ತೊಂದು ಪಂದ್ಯ ಮಳೆಗೆ ಆಹುತಿಯಾಗಿದೆ. ಟಿ20 ಕ್ರಿಕೆಟ್ ಸರಣಿಯಲ್ಲಿ ಎರಡು ಪಂದ್ಯಗಳು ಮಳೆ ಕಾರಣ ಫಲಿತಾಂಶ ಕಾಣಲಿಲ್ಲ. ಇದೀಗ ಏಕದಿನ ಕ್ರಿಕೆಟ್ ಸರಣಿಯ ಎರಡನೇ ಪಂದ್ಯ ಕೂಡ ಮಳೆ ಕಾರಣ ರದ್ದಾಯಿತು. ಹ್ಯಾಮಿಲ್ಟನ್ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟ್ ಮಾಡುವಂತ್ತಾಯಿತು. ಪಂದ್ಯ ಶುರುವಾಗಿ 4.5 ಓವರ್ಗಳು ಕಳೆಯುತ್ತಿದ್ದಂತೆಯೇ ಮಳೆ ಕಾಟ ಶುರುವಾಯಿತು. ಬಳಿಕ ಓವರ್ಗಳನ್ನು ಕಡಿತಗೊಳಿಸಿ ಪಂದ್ಯ ಆರಂಭಿಸಿದರೂ 12.5 ಓವರ್ಗಳ ಆಟ ಕಾಣಲಷ್ಟೇ ಸಾಧ್ಯವಾಯಿತು. ಭಾರತ ತಂಡ 89/1 ರನ್ ಗಳಿಸಿದ್ದಾಗ ಶುರುವಾದ ಮಳೆ ಆರ್ಭಟದ ಪರಿಣಾಮ ಅಂಪೈರ್ಗಳು ಪಂದ್ಯವನ್ನು ರದ್ದು ಪಡಿಸಿದರು.
ಇನ್ನು ಪಂದ್ಯದಲ್ಲಿ ಭಾರತ ತಂಡ 2 ಬದಲಾವಣೆಯೊಂದಿಗೆ ಕಣಕ್ಕಿಳಿದಿತ್ತು. ಸರಣಿಯ ಮೊದಲ ಪಂದ್ಯದಲ್ಲಿ ಭಾರತ 306 ರನ್ಗಳ ಬೃಹತ್ ಮೊತ್ತ ಗಳಿಸಿದರೂ 7 ವಿಕೆಟ್ಗಳ ಸೋಲುಂಡಿತ್ತು. ಕೇವಲ 5 ಬೌಲರ್ಗಳೊಂದಿಗೆ ಆಡಿದ ಭಾರತ ತಂಡ ಭಾರಿ ಬೆಲೆಯನ್ನೇ ತೆತ್ತಿತ್ತು. ಹೀಗಾಗಿ ಎರಡನೇ ಪಂದ್ಯಕ್ಕೆ ಭಾರತ ತಂಡ ಎರಡು ಬದಲಾವಣೆ ತಂದು ತನ್ನ ಬೌಲಿಂಗ್ ವಿಭಾಗಕ್ಕೂ ಹೆಚ್ಚಿನ ಬಲ ತಂದುಕೊಂಡಿತ್ತು.
ಆಲ್ರೌಂಡರ್ ದೀಪಕ್ ಹೂಡ ಅವರೊಂದಿಗೆ 6ನೇ ಬೌಲರ್ನ ಆಡುವ ಹನ್ನೊಂದರ ಬಳಗ ಸೇರಿಸಿದ ಕ್ಯಾಪ್ಟನ್ ಶಿಖರ್ ಧವನ್ ಸಾರಥ್ಯದ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್, ಈ ಸಲುವಾಗಿ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿತು. ಸ್ಯಾಮ್ಸನ್ ಮೊದಲ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿ 38 ಎಸೆತಗಳಲ್ಲಿ 36 ರನ್ ಬಾರಿಸಿದ್ದರು. ಆದರೂ ಕೂಡ 2ನೇ ಪಂದ್ಯದಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದು ದುರದೃಷ್ಟವೇ ಸರಿ.
ಅಂದಹಾಗೆ ಎರಡನೇ ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್ನಿಂದ ಹೊರಬಿದ್ದ ಸಂಜು, ಮಳೆ ಕಾರಣ ಆಗಾಗ ಅಂಗಣಕ್ಕೆ ಪ್ಲಾಸ್ಟಿಕ್ ಹೊದಿಕೆ ಹೊದಿಸುತ್ತಿದ್ದ ಕ್ರೀಡಾಂಗಣದ ಸಿಬ್ಬಂದಿ ವರ್ಗದೊಂದಿಗೆ ಕೈಜೋಡಿಸಿ ಗಮನ ಸೆಳೆದರು. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾಗಳಲ್ಲಿ ಸಂಜು ಸ್ಯಾಮ್ಸನ್ ಹೃದಯವಂತಿಕೆಯನ್ನು ಅಭಿಮಾನಿಗಳು ಕೊಂಡಾಡಿದ್ದಾರೆ ಕೂಡ.
#SanjuSamson helping ground hero's@IamSanjuSamson ❤️ pic.twitter.com/dYbx8tmELL
— Roopesh Raveendra (@RoopeshKadakkal) November 27, 2022
ಮಳೆ ಕಾರಣ ಪಂದ್ಯ ಮೊದಲ ಬಾರಿ ಆಟ ನಿಂತಾಗ ಕ್ರೀಡಾಂಗಣದ ಸಿಬ್ಬಂದಿ ಅಂಗಣದಲ್ಲಿನ ನೀರು ತೆಗೆದು ಆಟ ಮತ್ತೆ ಶುರುಮಾಡಲು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿದರು. ಆದರೆ, 8 ಓವರ್ಗಳು ಕಳೆದ ಬಳಿಕ ಮತ್ತೆ ಮಳೆಯಾಟ ಶುರುವಾಯಿತು. ಅನಿವಾರ್ಯವಾಗಿ ಅಂಪೈರ್ಗಳು ಪಂದ್ಯವನ್ನು ರದ್ದು ಪಡಿಸಲೇ ಬೇಕಾಯಿತು.
ಸರಣಿ ಸಮಬಲಕ್ಕಷ್ಟೇ ಅವಕಾಶ
ಎರಡನೇ ಪಂದ್ಯ ರದ್ದಾದ ಪರಿಣಾಮ ಭಾರತ ತಂಡ ಈ ಸರಣಿಯನ್ನು ಗೆಲ್ಲಲು ಸಾಧ್ಯವಿಲ್ಲ. ಕ್ರೈಸ್ಟ್ಚರ್ಚ್ನಲ್ಲಿ ನವೆಂಬರ್ 30ರಂದು ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ ಜಯ ದಾಖಲಿಸಿದರಷ್ಟೇ ಸರಣಿಯನ್ನು 1-1 ಅಂತರದಲ್ಲಿ ಸಮಬಲ ಮಾಡಿಕೊಳ್ಳಲು ಸಾಧ್ಯವಿದೆ. ಮಳೆ ಕಾರಣ ಮೂರನೇ ಪಂದ್ಯವೂ ರದ್ದಾದರೆ ನ್ಯೂಜಿಲೆಂಡ್ 1-0 ಅಂತರದಲ್ಲಿ ಸರಣಿ ಗೆದ್ದುಕೊಳ್ಳಲಿದೆ. ಅಂದಹಾಗೆ ಮಳೆ ಅಡಚಣೆ ಎದುರಾಗಿದ್ದ ಟಿ20 ಸರಣಿಯಲ್ಲಿ ಭಾರತ ತಂಡ 1-0 ಅಂತರದಲ್ಲಿ ಟ್ರೋಫಿ ಗೆದ್ದುಕೊಂಡಿತ್ತು.
ತೀಯ ಒಡಿಐಗೆ ಭಾರತ ತಂಡ ಆಯ್ಕೆ ಮಾಡಿಕೊಂಡ 11ರ ಬಳಗ ಹೀಗಿದೆ
01. ಶಿಖರ್ ಧವನ್ (ನಾಯಕ/ ಬ್ಯಾಟ್ಸ್ಮನ್)
02. ಶುಭಮನ್ ಗಿಲ್ (ಓಪನರ್)
03. ಶ್ರೇಯಸ್ ಅಯ್ಯರ್ (ಬ್ಯಾಟ್ಸ್ಮನ್)
04. ಸೂರ್ಯಕುಮಾರ್ ಯಾದವ್ (ಬ್ಯಾಟ್ಸ್ಮನ್)
05. ರಿಷಭ್ ಪಂತ್ (ವಿಕೆಟ್ಕೀಪರ್/ ಬ್ಯಾಟ್ಸ್ಮನ್)
06. ದೀಪಕ್ ಹೂಡ (ಆಲ್ರೌಂಡರ್)
07. ವಾಷಿಂಗ್ಟನ್ ಸುಂದರ್ (ಆಲ್ರೌಂಡರ್)
08. ದೀಪಕ್ ಚಹರ್ (ಆಲ್ರೌಂಡರ್)
09. ಉಮ್ರಾನ್ ಮಲಿಕ್ (ಬಲಗೈ ವೇಗಿ)
10. ಅರ್ಷದೀಪ್ ಸಿಂಗ್ (ಎಡಗೈ ವೇಗಿ)
11. ಯುಜ್ವೇಂದ್ರ ಚಹಲ್ (ಲೆಗ್ ಸ್ಪಿನ್ನರ್)
Ind Vs Nz Left Out Of Team India Playing Xi, Sanju Samson Helps Groundsmen In A Sweet Gesture Amid Heavy Rain In Hamilton.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 04:11 pm
Mangalore Correspondent
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm