ಬ್ರೇಕಿಂಗ್ ನ್ಯೂಸ್
23-11-22 01:08 pm Source: Vijayakarnataka ಕ್ರೀಡೆ
ಇತ್ತೀಚೆಗೆ ಮುಕ್ತಾಯವಾಗಿದ್ದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಸೂರ್ಯಕುಮಾರ್ ಯಾದವ್ ಅವರನ್ನು ಕಿವೀಸ್ ಬ್ಯಾಟ್ಸ್ಮನ್ ಗ್ಲೆನ್ ಫಿಲಿಪ್ಸ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
ಮಂಗಳವಾರ ಇಲ್ಲಿನ ಮೆಕ್ಲೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದಿದ್ದ ಮೂರನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ 161 ರನ್ ಗುರಿ ಹಿಂಬಾಲಿಸಿದ್ದ ಭಾರತ ತಂಡ, 9 ಓವೆರ್ಗಳ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿತ್ತು. ಈ ವೇಳೆ ಮಳೆಯಿಂದ ಪಂದ್ಯವನ್ನು ನಿಲ್ಲಿಸಲಾಗಿತ್ತು. ಅಂತಿಮವಾಗಿ ಡೆಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಪಂದ್ಯವನ್ನು ಟೈ ಎಂದು ಘೋಷಿಸಲಾಯಿತು. ಎರಡನೇ ಪಂದ್ಯದ ಗೆಲುವಿನ ಆಧಾರದ ಮೇಲೆ ಭಾರತ ತಂಡ 1-0 ಅಂತರದಲ್ಲಿ ಟಿ20 ಸರಣಿಯನ್ನು ಮುಡಿಗೇರಿಸಿಕೊಂಡಿತು.
ಅಂದಹಾಗೆ ಮೂರನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಕೇವಲ 13 ರನ್ ಗಳಿಸಿ ಔಟ್ ಆಗಿದ್ದರು. ಆದರೆ, ಎರಡನೇ ಪಂದ್ಯದಲ್ಲಿ 51 ಎಸೆತಗಳಲ್ಲಿ ಅಜೇಯ 111 ರನ್ ಸಿಡಿಸಿದ್ದರು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಎರಡನೇ ಶತಕ ಸಿಡಿಸಿದ್ದರು ಹಾಗೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ನಂ. 1 ಬ್ಯಾಟ್ಸ್ಮನ್ ಎಂಬುದನ್ನು ಸಾಬೀತುಪಡಿಸಿದ್ದರು.
ಮೂರನೇ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ಲೆನ್ ಫಿಲಿಪ್ಸ್, "ಸೂರ್ಯಕುಮಾರ್ ಯಾದವ್ ಅವರು ಬ್ಯಾಟ್ ಮಾಡುವ ವೇಳೆ ಚೆಂಡನ್ನು ಚೆನ್ನಾಗಿ ನೋಡುತ್ತಾರೆ. ಯಾವುದೇ ಎಸೆತವಾಗಲೇ ಅವರು ತನ್ನ ಅಸಾಧಾರಣ ಗೃಹಿಕೆಯ ಮೂಲಕ ಆಡುತ್ತಾರೆ. ಈ ಎಲ್ಲಾ ಸಂಗತಿಗಳು ನನ್ನ ಗಮನ ಸೆಳೆದವು," ಎಂದು ಹೇಳಿದರು.
"ಇಲ್ಲಿ ಪೂರ್ವಗ್ರಹದ ಅಗತ್ಯವಿಲ್ಲ. ಆದರೆ, ಇದಕ್ಕೆ ಪ್ರತಿಯಾಗಿ ಬೌಲರ್ ಯಾವ ಜಾಗದಲ್ಲಿ ಚೆಂಡು ಎಸೆಯುತ್ತಾನೆ ಎಂಬುದರ ಬಗ್ಗೆ ಅವರಿಗೆ ಇರುವ ಸ್ಥೂಲ ಕಲ್ಪನೆ ಇದಾಗಿದೆ. ಬ್ಯಾಟ್ ಮಾಡುವ ವೇಳೆ ಯಾವ ಎಸೆತ ತಮ್ಮ ಮುಂದೆ ಬರುತ್ತಿದೆ ಹಾಗೂ ತಾನು ಯಾವ ಬಗೆಯ ಶಾಟ್ ಆಡಬೇಕು ಎಂಬ ಸಾಮರ್ಥ್ಯ ಅವರಿಗೆ ಇದೆ," ಎಂದು ಗುಣಗಾಣ ಮಾಡಿದರು.
"ತಮ್ಮ ಜಾಗದಲ್ಲಿ ಚೆಂಡು ಇಲ್ಲವಾದರೆ ಇತರೆ ಬ್ಯಾಟ್ಸ್ಮನ್ಗಳು ಯಾವುದೇ ದೊಡ್ಡ ಹೊಡೆತಕ್ಕೆ ಕೈ ಹಾಕುವುದಿಲ್ಲ. ಆದರೆ, ಸೂರ್ಯಕುಮಾರ್ ಯಾದವ್ ಅವರ ವಿಷಯದಲ್ಲಿ ಈ ರೀತಿ ನಡೆಯುವುದಿಲ್ಲ. ಎಂಥಾ ಎಸೆತವಾದರೂ ಬೌಂಡರಿ ಹಾಗೂ ಸಿಕ್ಸರ್ ಸಿಡಿಸುವ ಕೌಶಲವನ್ನು ಅವರು ಕರಗತ ಮಾಡಿಕೊಂಡಿದ್ದಾರೆ," ಎಂದು ಹೇಳಿದರು.
"ಎರಡನೇ ಪಂದ್ಯದ ವೇಳೆ ಸೂರ್ಯಕುಮಾರ್ ಯಾದವ್ ಅವರು ಆಫ್ ಸ್ಪಂಪ್ ಮೇಲಿನ ಹಾರ್ಡ್ ಲೆನ್ತ್ ಎಸೆತವನ್ನು ತುಂಬಾ ಚೆನ್ನಾಗಿ ಹೊಡೆದಿದ್ದರು. ಅದರಲ್ಲೂ ಅವರು ಥರ್ಡ್ ಮ್ಯಾನ್ ಕಡೆಗೆ ಸ್ಟ್ರೈಟ್ ಬ್ಯಾಟ್ ಆಡಿದ್ದರು. ಈ ಶಾಟ್ ನಮ್ಮ ಗಮನ ಸೆಳೆಯಿತು. ಈ ಶಾಟ್ ನಿಜಕ್ಕೂ ಬೇರೆ ಹಂತದಲ್ಲಿತ್ತು . ನಂಬಲಾಗದ ಬ್ಯಾಟಿಂಗ್ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ," ಎಂದು ಫಿಲಿಪ್ಸ್ ಶ್ಲಾಘಿಸಿದರು.
Ind Vs Nz Its Not Necessarily About The Premeditation - Glenn Phillips Hailed Suryakumar Yadav.
19-08-25 11:13 am
Bangalore Correspondent
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
ನಿಮ್ಮ ಮನೆ ಹುಡುಗಿನ ನಮ್ಮ ಸಮುದಾಯದ ಯುವಕನಿಗೆ ಮದುವೆ...
18-08-25 10:35 pm
Dk Shivakumar, Dharmasthala Case: ಧರ್ಮಸ್ಥಳ ವಿ...
18-08-25 08:45 pm
19-08-25 06:59 pm
HK News Desk
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
19-08-25 11:07 pm
Mangalore Correspondent
Mangalore Thokottu Sports Winner: ಕಂಪನಿ ಬ್ರಾಂ...
19-08-25 08:54 pm
Ullal Municipal Commissioner: ಉಳ್ಳಾಲ ನಗರಸಭೆಯಲ...
19-08-25 08:28 pm
Puttur, Baby, Sreekrishna J. Rao: ಬಿಜೆಪಿ ಮುಖಂ...
19-08-25 07:04 pm
Activists Mahesh Shetty Thimarodi, Harish Poo...
18-08-25 06:14 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm