ಬ್ರೇಕಿಂಗ್ ನ್ಯೂಸ್
14-11-22 01:41 pm Source: Vijayakarnataka ಕ್ರೀಡೆ
ಇಂಗ್ಲೆಂಡ್ ವಿರುದ್ಧ 2022ರ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಿ ರನ್ನರ್ ಅಪ್ಗೆ ತೃಪ್ತಿಪಟ್ಟುಕೊಂಡಿದ್ದ ಪಾಕಿಸ್ತಾನ ತಂಡವನ್ನು ಮಾಜಿ ವೇಗಿ ಮೊಹಮ್ಮದ್ ಆಮಿರ್ ಟೀಕಿಸಿದ್ದಾರೆ. ನೀವು ಫೈನಲ್ ಆಡಲು ಲಾಯಕ್ಕಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಭಾನುವಾರ ಇಲ್ಲಿನ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ ತಂಡ ತನ್ನ ಪಾಲಿನ 20 ಓವರ್ಗಳಿಗೆ 8 ವಿಕೆಟ್ ನಷ್ಟಕ್ಕೆ ಕೇವಲ 137 ರನ್ ಗಳಿಸಿತ್ತು. ಬಳಿಕ ಗುರಿ ಹಿಂಬಾಲಿಸಿದ ಇಂಗ್ಲೆಂಡ್ ತಂಡ ಬೆನ್ ಸ್ಟೋಕ್ಸ್ (52* ರನ್) ಅವರ ಅರ್ಧಶತಕದ ಬಲದಿಂದ 19 ಓವರ್ಗಳಿಗೆ 138 ರನ್ ಗಳಿಸಿ 5 ವಿಕೆಟ್ ಗೆಲುವು ತನ್ನದಾಗಿಸಿಕೊಂಡಿತು. ಆ ಮೂಲಕ ಎರಡನೇ ಬಾರಿ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿತು.
ಪಂದ್ಯದ ಬಳಿಕ ಪಾಕಿಸ್ತಾನ್ ಟಿವಿ ಚಾನೆಲ್ 24 ನ್ಯೂಸ್ ಜೊತೆ ಮಾತನಾಡಿದ ಮೊಹಮ್ಮದ್ ಆಮಿರ್, ಇಂಥಾ ದೊಡ್ಡ ಟೂರ್ನಿಯಲ್ಲಿ ಫೈನಲ್ ಆಡುವ ಯೋಗ್ಯತೆ ನಮ್ಮ ಪಾಕಿಸ್ತಾನ ತಂಡಕ್ಕೆ ಇರಲಿಲ್ಲ. ಏಕೆಂದರೆ ಟೂರ್ನಿಯುದ್ದಕ್ಕೂ ಬಾಬರ್ ಆಝಮ್ ಪಡೆಯ ಬ್ಯಾಟಿಂಗ್ ತುಂಬಾ ಹೀನಾಯವಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
"ನಾವು ಫೈನಲ್ ಪಂದ್ಯದಲ್ಲಿ ಆಡಿದ್ದೇ ದೊಡ್ಡ ವಿಷಯ. ಈ ಟೂರ್ನಿಯಲ್ಲಿ ಫೈನಲ್ ಆಡುವ ಯೋಗ್ಯತೆ ನಮಗೆ ಇರಲಿಲ್ಲ.ಪಾಕಿಸ್ತಾನ ತಂಡ ಹೇಗೆ ಫೈನಲ್ಗೆ ಪ್ರವೇಶ ಮಾಡಿತ್ತು ಎಂದು ಇಡೀ ಜಗತ್ತಿಗೆ ಗೊತ್ತಿದೆ. ನಾವು ಇಲ್ಲಿಗೆ ತಲುಪಲು ದೇವರು ನಮಗೆ ಸಹಾಯ ಮಾಡಿದೆ. ಟೂರ್ನಿಯುದ್ದಕ್ಕೂ ನಮ್ಮ ಬ್ಯಾಟ್ಸ್ಮನ್ಗಳ ಪ್ರದರ್ಶನ ಹೇಗಿದೆ ಎಂಬುದು ನೋಡಬಹುದು," ಎಂದು ಟೀಕಿಸಿದರು.
"ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಭಾರತ ವಿರುದ್ಧ ಮೊದಲನೇ ಪಂದ್ಯವಾಡಿದ್ದ ರೀತಿಯಲ್ಲಿಯೇ ಫೈನಲ್ ಪಂದ್ಯಕ್ಕೂ ಪಿಚ್ ಇರಲಿದೆ ಎಂದು ನಾನು ಆರಂಭದಲ್ಲಿಯೇ ಹೇಳಿದ್ದೆ. ಟಾಸ್ ಸೋತ ಬಳಿಕ ಮೊದಲು ಬ್ಯಾಟ್ ಮಾಡುವಂತಾದ ಪಾಕಿಸ್ತಾನ ತಂಡಕ್ಕೆ ಒಳ್ಳೆಯ ಆರಂಭ ಸಿಗಲಿಲ್ಲ. ಇಲ್ಲಿನ ಕಂಡೀಷನ್ಸ್ ಹೇಗಿದೆ ಎಂದು ನಮಗೆ ಗೊತ್ತಿತ್ತು. ಅದಕ್ಕೆ ತಕ್ಕಂತೆ ಆಡಿದ್ದರೆ ಚೆನ್ನಾಗಿರುತ್ತಿತ್ತು," ಎಂದು ಮೊಹಮ್ಮದ್ ಆಮಿರ್ ಹೇಳಿದರು.
"ನಾವು ಮೊಹಮ್ಮದ್ ಹ್ಯಾರಿಸ್ ಬಗ್ಗೆ ಮಾತನಾಡಿದ್ದೇವೆ. ರನ್ ಗಳಿಸುವ ಉದ್ದೇಶದೊಂದಿಗೆ ಸ್ವಲ್ಪ ಸಾಮಾನ್ಯ ಜ್ಞಾನ ಇರಬೇಕು. ಆದಿಲ್ ರಶೀದ್ ಅವರ ಮೊದಲ ಎಸೆತ ಎದುರಿಸಿದ ಅವರು ಮುಂದೆ ಬಂದು ದೊಡ್ಡ ಹೊಡೆತಕ್ಕೆ ಕೈ ಹಾಕಿದರು. ಇಂಥಾ ಪಿಚ್ಗಳಲ್ಲಿ ಮೈಮರೆತು ಬ್ಯಾಟ್ ಮಾಡಬಾರದು ಹಾಗೂ ಬಹಳಾ ಎಚ್ಚರಿಕೆಯಿಂದ ಆಡಬೇಕಾಗುತ್ತದೆ. ಸಾಮಾನ್ಯವಾಗಿ ಹೊಸ ಬ್ಯಾಟ್ಸ್ಮನ್ಗಳು ಇಲ್ಲಿ ತೊಂದರೆ ಅನುಭವಿಸುತ್ತಾರೆ. ಆದರೆ, ಇಲ್ಲಿ ಹೇಗೆ ಆಡಬೇಕು ಎಂಬುದನ್ನು ಬೆನ್ ಸ್ಟೋಕ್ಸ್ ತೋರಿಸಿದರು," ಎಂದು ತಿಳಿಸಿದರು.
ಪಾಕಿಸ್ತಾನ: 20 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 137 ರನ್ (ಮೊಹಮ್ಮದ್ ರಿಝ್ವಾನ್ 15, ಬಾಬರ್ ಆಝಮ್ 32, ಶಾನ್ ಮಸೂದ್ 38, ಶದಾಬ್ ಖಾನ್ 20; ಸ್ಯಾಮ್ ಕರ್ರನ್ 12ಕ್ಕೆ 3, ಆದಿಲ್ ರಶೀದ್ 22ಕ್ಕೆ 2, ಕ್ರಿಸ್ ಜಾರ್ಡನ್ 27ಕ್ಕೆ 2).
ಇಂಗ್ಲೆಂಡ್: (ಜೋಸ್ ಬಟ್ಲರ್ 26, ಹ್ಯಾರಿ ಬ್ರೂಕ್ 20, ಬೆನ್ ಸ್ಟೋಕ್ಸ್ 52*, ಮೊಯೀನ್ ಅಲಿ 19; ಹ್ಯಾರಿಸ್ ರೌಫ್ 23ಕ್ಕೆ 2, ಶದಾಬ್ ಖಾನ್ 20ಕ್ಕೆ 2).
ಪಂದ್ಯ ಶ್ರೇಷ್ಠ: ಸ್ಯಾಮ್ ಕರ್ರನ್
T20 World Cup 2022 Pakistan Didnt Deserve To Play Final- Former Pacer Criticizes Babar Azam And Co After Loss Vs England.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 08:32 pm
Mangalore Correspondent
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm