ಬ್ರೇಕಿಂಗ್ ನ್ಯೂಸ್
10-11-22 11:36 am Source: Vijayakarnataka ಕ್ರೀಡೆ
ಬೆಂಗಳೂರು: ನ್ಯೂಜಿಲೆಂಡ್ ಎದುರು 7 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದ ಪಾಕಿಸ್ತಾನ ತಂಡ, 2022ರ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ತಲುಪಿದ ಮೊದಲ ತಂಡ ಎನಿಸಿಕೊಂಡಿದೆ. ಗೆಲ್ಲಲು 153 ರನ್ಗಳ ಸವಾಲಿನ ಗುರಿ ಬೆನ್ನತ್ತಿದ್ದ ಪಾಕಿಸ್ತಾನ ತಂಡ ಇನ್ನು 5 ಎಸೆತಗಳು ಬಾಕಿ ಇರುವಾಗಲೇ ಜಯ ದಕ್ಕಿಸಿಕೊಂಡಿತು.
2009ರ ಆವೃತ್ತಿಯ ಚಾಂಪಿಯನ್ಸ್ ಪಾಕಿಸ್ತಾನ ತಂಡ ಬರೋಬ್ಬರಿ 13 ವರ್ಷಗಳ ಬಳಿಕ ಇದೇ ಮೊದಲ ಬಾರಿ ಫೈನಲ್ ತಲುಪಿದೆ. ಫೈನಲ್ನಲ್ಲಿ ಬಾಬರ್ ಆಝಮ್ ಸಾರಥ್ಯದ ಪಾಕಿಸ್ತಾನ ತಂಡ ಇಂಗ್ಲೆಂಡ್ ಅಥವಾ ಟೀಮ್ ಇಂಡಿಯಾ ಎದುರು ಪೈಪೋಟಿ ನಡೆಸಲಿದೆ. ಎರಡನೇ ಸೆಮಿಫೈನಲ್ ಪಂದ್ಯ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನವೆಂಬರ್ 10ರಂದು (ಗುರುವಾರ) ನಡೆಯಲಿದ್ದು, ಭಾರತ ಮತ್ತು ಇಂಗ್ಲೆಂಡ್ ತಂಡಗಳು ಕಾದಾಟ ನಡೆಸಲಿವೆ.
ಅಂದಹಾಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಅಕ್ಟೋಬರ್ 23ರಂದು ನಡೆದ ಸೂಪರ್-12 ಹಂತದ ಪಂದ್ಯದಲ್ಲಿ ಪೈಪೋಟಿ ನಡೆಸಿದ್ದವು. ಜಿದ್ದಾಜಿದ್ದಿನ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಟೀಮ್ ಇಂಡಿಯಾ ಕೊನೇ ಎಸೆತದಲ್ಲಿ 4 ವಿಕೆಟ್ಗಳ ರೋಚಕ ಜಯ ದಾಖಲಿಸಿತು. ಇದೀಗ ಫೈನಲ್ನಲ್ಲಿ ಮತ್ತೊಮ್ಮೆ ಸಾಂಪ್ರದಾಯಿಕ ಎದುರಾಳಿಗಳ ನಡುವಣ ಕಾದಾಟ ವೀಕ್ಷಿಸಲು ಕ್ರಿಕೆಟ್ ಪ್ರಿಯರು ಎದುರು ನೋಡುತ್ತಿದ್ದಾರೆ.
"ಇಂಡಿಯಾ, ನಾವು ಮೆಲ್ಬೋರ್ನ್ ತಲುಪಿಯಾಗಿದೆ. ಈಗ ನಿಮಗಷ್ಟೇ ಕಾಯುತ್ತಿದ್ದೇವೆ. ನೀವು ಕೂಡ ಮೆಲ್ಬೋರ್ನ್ ತಲುಪುವಂತೆ ಶುಭ ಹಾರೈಸುತ್ತೇನೆ. ನನಗೆ ಭಾರತ-ಪಾಕಿಸ್ತಾನ ನಡುವಣ ಫೈನಲ್ ಬೇಕು. ಮತ್ತೊಮ್ಮೆ ಈ ತಂಡಗಳು ಮುಖಾಮುಖಿ ಆಗಲಿ. ಇಡೀ ಪ್ರಪಂಚವೇ ಈ ಪಂದ್ಯ ವೀಕ್ಷಣೆ ಸಲುವಾಗಿ ಕಾಯುತ್ತಿದೆ," ಎಂದು ಅಖ್ತರ್ ಟ್ವೀಟ್ ಮಾಡಿದ್ದಾರೆ.
ಭಾರತ-ಇಂಗ್ಲೆಂಡ್ ನಡುವೆ ಸೆಮಿಫೈನಲ್
ಅಂತಿಮ ನಾಲ್ಕರ ಘಟದ ಪಂದ್ಯಕ್ಕೂ ಮುನ್ನ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಗಾಯದ ಸಂಕಷ್ಟ ಎದುರಿಸಿವೆ. ನೆಟ್ಸ್ ಅಭ್ಯಾಸದ ವೇಳೆ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಮೊಣಕೈಗೆ ಪೆಟ್ಟು ತಿಂದಿದ್ದರು. ಅದೃಷ್ಟ ವಶಾತ್ ಗಂಭೀರ ಸ್ವರೂಪದ ಗಾಯದ ಸಮಸ್ಯೆಯಿಂದ ಪಾರಾಗಿದ್ದಾರೆ. ವಿರಾಟ್ ಕೊಹ್ಲಿ ಕೂಡ ನೆಟ್ಸ್ನಲ್ಲಿ ಗಾಯಗೊಂಡಿದ್ದರು. ಆದರೆ, ಇಬ್ಬರೂ ಬ್ಯಾಟರ್ಗಳೀಗ ಸಂಪೂರ್ಣ ಫಿಟ್ನೆಸ್ ಹೊಂದಿದ್ದಾರೆ.
ಆದರೆ, ಇಂಗ್ಲೆಂಡ್ ತಂಡ ಈಗಾಗಗಲೇ ಒಬ್ಬ ಆಟಗಾರನ ಸೇವೆ ಕಳೆದುಕೊಂಡಿದೆ. ತೊಡೆ ಸಂಧು ನೋವಿನ ಸಮಸ್ಯೆ ಎದುರಿಸಿರುವ ಡಾವಿಡ್ ಮಲಾನ್ ಸೆಮಿಫೈನಲ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಅವರ ಜಾಗದಲ್ಲಿ ಫಿಲ್ ಸಾಲ್ಟ್ ಆಡುವ ಸಾಧ್ಯತೆ ಇದೆ. ಇನ್ನು ಇಂಗ್ಲೆಂಡ್ ಪರ 9 ವಿಕೆಟ್ ಪಡೆದಿರುವ ಮಾರ್ಕ್ ವುಡ್ ಕೂಡ ಸ್ನಾಯು ಸೆಳೆತದ ಸಮಸ್ಯೆ ಎದುರಿಸಿದ್ದು, ಅವರ ಫಿಟ್ನೆಸ್ ವಿಚಾರವಾಗಿ ಇಂಗ್ಲೆಂಡ್ ತಂಡ ಮಾಹಿತಿ ನೀಡಿಲ್ಲ. ಭಾರತ-ಇಂಗ್ಲೆಂಡ್ ಪಂದ್ಯ ಗುರುವಾರ (ನ.10) ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ.
Dear India, good luck for tomorrow. We'll be waiting for you in Melbourne for a great game of cricket. pic.twitter.com/SdBLVYD6vm
— Shoaib Akhtar (@shoaib100mph) November 9, 2022
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್: 20 ಓವರ್ಗಳಲ್ಲಿ 4 ವಿಕೆಟ್ಗಳ ನಷ್ಟಕ್ಕೆ 152 ರನ್ (ಡೆವೋನ್ ಕಾನ್ವೇ 21, ಕೇನ್ ವಿಲಿಯಮ್ಸನ್ 46, ಡ್ಯಾರಿಲ್ ಮಿಚೆಲ್ ಔಟಾಗದೆ 52; ಶಾಹೀನ್ ಶಾ ಅಫ್ರಿದಿ 24ಕ್ಕೆ 2, ಮೊಹಮ್ಮದ್ ನವಾಝ್ 12ಕ್ಕೆ 1).
ಪಾಕಿಸ್ತಾನ: 19.1 ಓವರ್ಗಳಲ್ಲಿ 3 ವಿಕೆಟ್ಗಳ ನಷ್ಟಕ್ಕೆ 153 ರನ್ (ಮೊಹಮ್ಮದ್ ರಿಝ್ವಾನ್ 57, ಬಾಬರ್ ಆಝಮ್ 53, ಮೊಹಮ್ಮದ್ ಹ್ಯಾರಿಸ್ 30; ಟ್ರೆಂಟ್ ಬೌಲ್ಟ್ 33ಕ್ಕೆ 2, ಮಿಚೆಲ್ ಸ್ಯಾಂಟ್ನರ್ 26ಕ್ಕೆ 1).
ಪಂದ್ಯಶ್ರೇಷ್ಠ: ಮೊಹಮ್ಮದ್ ರಿಝ್ವಾನ್
Ind Vs Pak Good Luck Team India, We Will Be Waiting For You At Mcg Says Shoaib Akhtar.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 04:45 pm
HK News Desk
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
14-05-25 06:33 pm
Mangalore Correspondent
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm