ಬ್ರೇಕಿಂಗ್ ನ್ಯೂಸ್
04-11-22 01:34 pm Source: Vijayakarnataka ಕ್ರೀಡೆ
ಬುಧವಾರ ಇಲ್ಲಿನ ಅಡಿಲೇಡ್ ಓವಲ್ ಮೈದಾನದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ನಡುವಣ ಪಂದ್ಯ ಕೊನೆಯ ಎಸೆತದವರೆಗೂ ತೀವ್ರ ಕುತೂಹಲದಿಂದ ಕೂಡಿತ್ತು. ಆದರೆ, ಅಂತಿಮವಾಗಿ ಭಾರತ ತಂಡ ಕೇವಲ 5 ರನ್ಗಳ ರೋಚಕ ಗೆಲುವು ಪಡೆಯಿತು. ಆ ಮೂಲಕ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ಗೆ ಇನ್ನಷ್ಟು ಸನಿಹವಾಯಿತು.
ಅಂದಹಾಗೆ ಈ ಪಂದ್ಯದಲ್ಲಿ ಹಲವು ನಾಟಕೀಯ ಬೆಳವಣಿಗೆಗಳು ನಡೆದಿದ್ದವು. ಭಾರತ ನೀಡಿದ್ದ 185 ರನ್ ಗುರಿ ಹಿಂಬಾಲಿಸಿದ್ದ ಬಾಂಗ್ಲಾದೇಶ ತಂಡ 7 ಓವರ್ಗಳಿಗೆ ವಿಕೆಟ್ ನಷ್ಟವಿಲ್ಲದೆ 66 ರನ್ ಗಳಿಸಿ ಉತ್ತಮ ಆರಂಭ ಪಡೆದುಕೊಂಡಿತ್ತು. ಆದರೆ, ಈ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ಕಲೆ ಕಾಲ ನಿಲ್ಲಿಸಲಾಗಿತ್ತು.
ಮಳೆ ನಿಂತ ಬಳಿಕ ಪಂದ್ಯವನ್ನು ತಡವಾಗಿ ಆರಂಭಿಸಲಾಯಿತು. ಈ ಹಿನ್ನೆಲೆಯಲ್ಲಿ ಡಿಎಲ್ಎಸ್ ನಿಯಮದ ಅನ್ವಯ ಬಾಂಗ್ಲಾದೇಶ ತಂಡಕ್ಕೆ 16 ಓವರ್ಗಳಿಗೆ 151 ರನ್ ಗುರಿ ನೀಡಲಾಗುತ್ತು. ಆದರೆ, ಅಂತಿಮವಾಗಿ ಪಂದ್ಯದಲ್ಲಿ ಬಾಂಗ್ಲಾದೇಶ ಕೇವಲ 5 ರನ್ನಿಂದ ಸೋಲು ಅನುಭವಿಸಿತ್ತು. ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಅವರು ಫೇಕ್ ಫೀಲ್ಡಿಂಗ್ ಮಾಡಿದ್ದಾರೆಂದು ಬಾಂಗ್ಲಾದೇಶ ತಂಡದ ವಿಕೆಟ್ ಕೀಪರ್ ನೂರೂಲ್ ಹಸನ್ ಆರೋಪಿಸಿದ್ದರು.
ಇದರ ಹೊರತಾಗಿಯೂ ಪಂದ್ಯ ಮುಗಿದ ಬಳಿಕ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಬಾಂಗ್ಲಾದೇಶ ತಂಡದ ಪರ ಸ್ಪೋಟಕ ಬ್ಯಾಟ್ ಮಾಡಿ ಎಲ್ಲರ ಗಮನ ಸೆಳೆದಿದ್ದ ಲಿಟನ್ ದಾಸ್ ಅವರಿಗೆ ತಮ್ಮ ಬ್ಯಾಟ್ ಅನ್ನು ಕೊಡುಗೆಯಾಗಿ ನೀಡಿ ಎದುರಾಳಿ ತಂಡದ ಮೆಚ್ಚುಗೆಗೆ ಪಾತ್ರರಾದರು. ಲಿಟನ್ ದಾಸ್ ಕೇವಲ 27 ಎಸೆತಗಳಲ್ಲಿ 60 ರನ್ ಚಚ್ಚಿದ್ದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡದ ಪರ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಎದುರಿಸಿದ್ದ 44 ಎಸೆತಗಳಲ್ಲಿ ಅಜೇಯ 64 ರನ್ ಸಿಡಿಸಿದ್ದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ತಾವಾಡಿದ್ದ ಇದೇ ಬ್ಯಾಟ್ ಅನ್ನು ಅವರು ಬಾಂಗ್ಲಾ ಆಟಗಾರನಿಗೆ ಗಿಫ್ಟ್ ಕೊಟ್ಟರು.
ವಿರಾಟ್ ಕೊಹ್ಲಿ ಬ್ಯಾಟ್ ಕೊಡುಗೆಯಾಗಿ ನೀಡಿದ ಬಗ್ಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಕ್ರಿಕೆಟ್ ಕಾರ್ಯಾಧ್ಯಕ್ಷ ಜಲಾಲ್ ಯೂನಸ್ ಸ್ಪಷ್ಟಪಡಿಸಿದರು.
"ಡಿನ್ನಿಂಗ್ ಹಾಲ್ನಲ್ಲಿ ನಾವು ಕುಳಿತಿದ್ದ ವೇಳೆ ಆಗಮಿಸಿದ ವಿರಾಟ್ ಕೊಹ್ಲಿ, ಲಿಟನ್ ದಾಸ್ಗೆ ತಮ್ಮ ಬ್ಯಾಟ್ ಅನ್ನು ಕೊಡುಗೆಯಾಗಿ ನೀಡಿದರು. ನನ್ನ ಪ್ರಕಾರ ಈ ಸನ್ನಿವೇಶ ಲಿಟಾನ್ ದಾಸ್ ಪಾಲಿಗೆ ಸ್ಪೂರ್ತಿದಾಯಕ ಸನ್ನಿವೇಶ ಎಂದು ನಾನು ಭಾವಿಸುತ್ತೇನೆ," ಎಂದು ಯೂನಸ್ ಹೇಳಿರುವುದನ್ನು ಬಾಂಗ್ಲಾ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.
"ಲಿಟನ್ ದಾಸ್ ಕ್ಲಾಸ್ ಬ್ಯಾಟ್ಸ್ಮನ್. ಅವರು ಹೊಡೆಯುವ ಕ್ಲಾಸಿಕಲ್ ಶಾಟ್ಸ್ ಅನ್ನು ನಾವೆಲ್ಲಾ ನೋಡಿದ್ದೇವೆ. ಟೆಸ್ಟ್ ಹಾಗೂ ಒಡಿಐ ಕ್ರಿಕೆಟ್ನಲ್ಲಿ ಈತ ಅದ್ಭುತ ಬ್ಯಾಟ್ಸ್ಮನ್. ಆದರೆ, ಇತ್ತೀಚೆಗೆಷ್ಟೇ ಅವರು ಟಿ20 ಕ್ರಿಕೆಟ್ ಆಡಲು ಆರಂಭಿಸಿದ್ದಾರೆ," ಎಂದು ಕ್ರಿಕೆಟ್ ಕಾರ್ಯಾಧ್ಯಕ್ಷ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
T20 World Cup 2022 Ex Team India Capatain Virat Kohli Gifts A Bat To Litton Das After India Vs Bangladesh Match.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
14-05-25 04:45 pm
HK News Desk
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm