ಬ್ರೇಕಿಂಗ್ ನ್ಯೂಸ್
29-10-22 02:16 pm Source: Vijayakarnataka ಕ್ರೀಡೆ
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಹಾಗೂ ನೆದರ್ಲೆಂಡ್ಸ್ ವಿರುದ್ದ ಸತತ ಎರಡು ಪಂದ್ಯಗಳಲ್ಲಿ ಗೆದ್ದು 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಕಂಡಿರುವ ಭಾರತ ತಂಡ ಭಾನುವಾರ ಇಲ್ಲಿನ ಪರ್ತ್ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ತಂಡದ ಸವಾಲನ್ನು ಎದುರಿಸಲಿದೆ.
ಇಲ್ಲಿನ ಪರ್ತ್ ಸ್ಟೇಡಿಯಂನ ಪಿಚ್ ಬೌನ್ಸ್ ಹಾಗೂ ಸೀಮಿಂಗ್ ವಿಕೆಟ್ ಆಗಿರುವ ಹಿನ್ನೆಲೆಯಲ್ಲಿ ಭಾರತ ತಂಡದ ಬ್ಯಾಟ್ಸ್ಮನ್ಗಳಿಗೆ ಕಠಿಣ ಸವಾಲು ಎದುರಾಗಲಿದೆ. ಅದರಲ್ಲೂ ದಕ್ಷಿಣ ಆಫ್ರಿಕಾ ತಂಡದಲ್ಲಿ ಕಗಿಸೊ ರಬಾಡ ಹಾಗೂ ಎನ್ರಿಕ್ ನೊರ್ಕಿಯಾ ಅವರಂಥ ಮಾರಕ ವೇಗಿಗಳು ಇರುವುದರಿಂದ ಖಚಿತವಾಗಿಯೂ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಬಹಳಾ ಎಚ್ಚರಿಕೆಯಿಂದ ಆಡಬೇಕಾಗುತ್ತದೆ.
ಭಾರತ ತಂಡ ಇಲ್ಲಿಯವರೆಗೂ ಆಡಿರುವ ಎರಡು ಪಂದ್ಯಗಳಲ್ಲಿ ಗೆದ್ದು 4 ಅಂಕಗಳೊಂದಿಗೆ ಟೂರ್ನಿಯ ಎರಡನೇ ಗುಂಪಿನ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ಸ್ಥಾನದಲ್ಲಿದೆ. ಆದರೆ, ದಕ್ಷಿಣ ಆಫ್ರಿಕಾ ತಂಡ ಇಲ್ಲಿಯವರೆಗೂ ಆಡಿರುವ ಎರಡು ಪಂದ್ಯಗಳಿಂದ ಮೂರು ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನದಲ್ಲಿದೆ.
ಭಾನುವಾರ ಪರ್ತ್ ಸ್ಟೇಡಿಯಂನಲ್ಲಿ ನಡೆಯುವ ಹೈವೋಲ್ಟೇಜ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲ್ಲುವ ನೆಚ್ಚಿನ ತಂಡವೆಂದು ಹರಿಣಗಳ ಮಾಜಿ ಆಲ್ರೌಂಡರ್ ಲ್ಯಾನ್ಸ್ ಕ್ಸೂಸೆನರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಭಾರತ ವಿರುದ್ಧ ಪರ್ತ್ ಪಂದ್ಯದಲ್ಲಿ ನಾವು ದಕ್ಷಿಣ ಆಫ್ರಿಕಾ ತಂಡದಲ್ಲಿ ಮತ್ತೊಬ್ಬ ವೇಗಿಯನ್ನು ನೋಡಲಿದ್ದೇವೆ. ಕಳೆದ ಪಂದ್ಯದಲ್ಲಿ ತಬ್ರೇಝ್ ಶಾಮ್ಸಿ ಅವರ ಬೌಲಿಂಗ್ನಿಂದ ನಾನು ಆಕರ್ಷಿತನಾಗಿದ್ದೇನೆ. ಅವರು ವಿಕೆಟ್ ಟೇಕಿಂಗ್ ಬೌಲರ್. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಡ್ವೇನ್ ಪ್ರೆಟೋರಿಯಸ್ ಹೊರ ನಡೆದಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ತಂಡದಲ್ಲಿ ಶಾಮ್ಸಿ ಉತ್ತಮ ಸಂಯೋಜನೆಯನ್ನು ತಂದುಕೊಡಲಿದ್ದಾರೆ," ಎಂದರು.
"ಪರ್ತ್ ವಿಕೆಟ್ನಲ್ಲಿ ನಮ್ಮ ವೇಗಿಗಳನ್ನು ಭಾರತ ತಂಡದ ಬ್ಯಾಟ್ಸ್ಮನ್ಗಳು ಹೇಗೆ ಎದುರಿಸಲಿದ್ದಾರೆಂಬುದು ನನ್ನಲ್ಲಿ ಆಸಕ್ತಿ ಕೆರಳಿಸಿದೆ. ನನಗೆ ಅನಿಸಿದ ಹಾಗೆ ಇಲ್ಲಿ ಬ್ಯಾಟ್ ಮಾಡುವುದು ಸವಾಲುದಾಯಕವಾಗಿದೆ. ಆದರೆ, ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಕನಿಷ್ಠ 50 ರನ್ಗಳ ಅಂತರದಲ್ಲಿ ಗೆಲುವು ಸಾಧಿಸಲಿದೆ," ಎಂದು ಲ್ಯಾನ್ಸ್ ಕ್ಸೂಸೆನರ್ ಭವಿಷ್ಯ ನುಡಿದಿದ್ದಾರೆ.
ಭಾರತ-ದಕ್ಷಿಣ ಆಫ್ರಿಕಾ ಪಂದ್ಯದ ವಿವರ
ಐಸಿಸಿ ಟಿ20 ವಿಶ್ವಕಪ್ ಟೂರ್ನಿ 2022
ದಿನಾಂಕ: ಅಕ್ಟೋಬರ್ 30, 2022
ಸಮಯ: ಸಂಜೆ 04-30ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ಪರ್ತ್ ಸ್ಟೇಡಿಯಂ, ಪರ್ತ್
ಭಾರತ ತಂಡ: ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿ.ಕೀ), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಲ್, ರಿಷಭ್ ಪಂತ್, ದೀಪಕ್ ಹೂಡ, ಹರ್ಷಲ್ ಪಟೇಲ್
ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್ (ವಿ.ಕೀ), ತೆಂಬ ಬವೂಮ (ನಾಯಕ), ರೈಲಿ ರೊಸೋವ್, ಏಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ಟ್ರಿಸ್ಟನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಎನ್ರಿಚ್ ನೊರ್ಕಿಯಾ, ತಬ್ರೇಝ್ ಶಾಮ್ಸಿ
T20 World Cup 2022 Lance Klusener Predicts Winner Of T20 World Cup Clash Between India And South Africa.
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
14-10-25 10:33 pm
HK News Desk
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
Kerala, IT professional dead, RSS members: ಆರ...
13-10-25 05:31 pm
14-10-25 10:36 pm
Mangalore Correspondent
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ...
14-10-25 06:39 pm
ಬಿ.ಸಿ ರೋಡ್ ; ಹೆದ್ದಾರಿ ಬದಿ ಕಾರು ರಿಪೇರಿ ಮಾಡುತ್...
14-10-25 05:46 pm
14-10-25 04:44 pm
HK News Desk
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm