ಬ್ರೇಕಿಂಗ್ ನ್ಯೂಸ್
28-10-22 01:09 pm Source: Vijayakarnataka ಕ್ರೀಡೆ
ನೆದರ್ಲೆಂಡ್ಸ್ ವಿರುದ್ದದ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿ ಎರಡೆರಡು ವಿಕೆಟ್ಗಳನ್ನು ಕಬಳಿಸಿದ ಭಾರತ ತಂಡದ ಆರ್ ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ಅವರನ್ನು ಸ್ಪಿನ್ ದಿಗ್ಗಜ ಹರ್ಭಜನ್ ಸಿಂಗ್ ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ.
ಗುರುವಾರ ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದಿದ್ದ ಪಂದ್ಯದಲ್ಲಿ 180 ರನ್ ಗುರಿ ಹಿಂಬಾಲಿಸಿದ್ದ ನೆರ್ದಲೆಂಡ್ಸ್ ತಂಡವನ್ನು ಭಾರತ ತಂಡದ ಬೌಲರ್ಗಳು ಕೇವಲ 123 ರನ್ಗಳಿಗೆ ನಿಯಂತ್ರಿಸಿದರು. ಆ ಮೂಲಕ ಭಾರತ ತಂಡ 56 ರನ್ಗಳ ಭರ್ಜರಿ ಗೆಲುವು ಪಡೆಯಿತು ಹಾಗೂ ಪಾಯಿಂಟ್ಸ್ ಟೇಬಲ್ನಲ್ಲಿ 4 ಅಂಕಗಳೊಂದಿಗೆ ಅಗ್ರ ಸ್ಥಾನ ಅಲಂಕರಿಸಿತು.
ಅದರಲ್ಲೂ ವಿಶೇಷವಾಗಿ ಮಧ್ಯಮ ಓವರ್ಗಳಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ಆರ್ ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ತಲಾ ಎರಡೆರಡು ವಿಕೆಟ್ಗಳನ್ನು ಕಬಳಿಸಿದರು ಹಾಗೂ ಕೇವಲ 4.87ರ ಎಕಾನಮಿ ರೇಟ್ ಅನ್ನು ಕಾಯ್ದುಕೊಂಡರು. ಮಧ್ಯಮ ಓವರ್ಗಳಲ್ಲಿ ರನ್ಗಳಿಗೆ ಕಡಿವಾಣ ಹಾಕಿ ಎದುರಾಳಿ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡ ಹೇರುವುದು ತುಂಬಾ ಮುಖ್ಯ ಎಂದು ಹರ್ಭಜನ್ ಸಿಂಗ್ ಹೇಳಿದರು.
"ತಮ್ಮ ಸಾಮರ್ಥ್ಯ ಹಾಗೂ ಕೌಶಲವನ್ನು ಸಾಬೀತುಪಡಿಸಲು ಈ ಇಬ್ಬರಿಗೂ (ಆರ್ ಅಶ್ವಿನ್ ಹಾಗೂ ಅಕ್ಷರ್ ಪಟೇಲ್) ಇದು ಅದ್ಭುತ ಅವಕಾಶವಾಗಿದೆ. ಅದರಂತೆ ಅವರು ವಿಕೆಟ್ಗಳನ್ನು ಪಡೆಯುವ ಮೂಲಕ ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ. ಎರಡೆರಡು ವಿಕೆಟ್ಗಳನ್ನು ಪಡೆದುಕೊಂಡ ಈ ಇಬ್ಬರ ಪಾಲಿಗೆ ಈ ಪಂದ್ಯ ಅದ್ಭುತವಾಗಿದೆ. ಮುಂದಿನ ಪಂದ್ಯಗಳಿಗೆ ಇದು ಖಂಡಿತವಾಗಿಯೂ ವಿಶ್ವಾಸವನ್ನು ಹೆಚ್ಚಿಸುತ್ತದೆ," ಎಂದು ಇಂಡಿಯಾ ಟುಡೇಗೆ ಹರ್ಭಜನ್ ಸಿಂಗ್ ತಿಳಿಸಿದರು.
"ಮಧ್ಯಮ ಓವರ್ಗಳಲ್ಲಿ ವಿಕೆಟ್ ಪಡೆಯದ ಸಮಯದಲ್ಲಿ ಸ್ಪಿನ್ನರ್ಗಳು ಬೌಲ್ ಮಾಡಿ ಪ್ರಮುಖ ವಿಕೆಟ್ಗಳನ್ನು ಪಡೆಯುವುದು ತುಂಬಾ ಮುಖ್ಯವಾಗಿರುತ್ತದೆ. ಇಲ್ಲವಾದಲ್ಲಿ ಹೆಚ್ಚಿನ ರನ್ಗಳನ್ನು ಗಳಿಸುವ ಅವಕಾಶ ಬ್ಯಾಟ್ಸ್ಮನ್ಗಳಿಗೆ ಇರುತ್ತದೆ. ಬ್ಯಾಟ್ಸ್ಮನ್ಗಳನ್ನು ನಿಯಂತ್ರಿಸುವ ಜೊತೆಗೆ ವಿಕೆಟ್ಗಳನ್ನು ಪಡೆಯುವುದು ತುಂಬಾ ಮುಖ್ಯವಾಗಿರುತ್ತದೆ," ಎಂದು ಹೇಳಿದರು.
ಗೆಲುವಿನ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ರೋಹಿತ್ ಶರ್ಮಾ, "ವಿಶೇಷ ಗೆಲುವಿನ ಬಳಿಕ ನಮಗೆ ಕೆಲ ದಿನಗಳ ಕಾಲ ವಿರಾಮ ಸಿಕ್ಕಿದ್ದು ನಮ್ಮ ಪಾಲಿಗೆ ಅದೃಷ್ಟ. ಪಂದ್ಯ ಮುಗಿದ ಬಳಿಕ ಸಾದ್ಯವಾದಷ್ಟು ಬೇಗ ನಾವು ಸಿಡ್ನಿಗೆ ಆಗಮಿಸಿದ್ದೆವು. ಈ ಪಂದ್ಯವನ್ನು ಗೆದ್ದು ಎರಡು ಅಂಕಗಳನ್ನು ಗಳಿಸುವುದು ನಮ್ಮ ಪಾಲಿಗೆ ಪ್ರಮುಖವಾಗಿದೆ," ಎಂದಿದ್ದರು.
"ಇದು ಕ್ಲಿನಿಕಲ್ ಗೆಲುವು ಎಂದು ನಾನು ಭಾವಿಸುತ್ತೇನೆ. ಸೂಪರ್-12ಕ್ಕೆ ಅರ್ಹತೆ ಪಡೆದ ನೆದರ್ಲೆಂಡ್ಸ್ ತಂಡದ ಹಾದಿಯನ್ನು ನೋಡಿದರೆ, ಇದರ ಶ್ರೇಯ ಅವರಿಗೆ ಸಲ್ಲಬೇಕು. ಎದರಾಳಿ ಯಾವುದೇ ತಂಡವಿರಲಿ, ನಾವು ನಮ್ಮ ಕಡೆಯಿಂದ ಪ್ರಾಮಾಣಿಕ ಪ್ರದರ್ಶನವನ್ನು ತೋರಿ ಪಂದ್ಯವನ್ನು ಗೆದ್ದಿದ್ದೇವೆ," ಎಂದು ರೋಹಿತ್ ಶರ್ಮಾ ತಿಳಿಸಿದ್ದರು.
ಸತತ ಎರಡು ಪಂದ್ಯಗಳಲ್ಲಿ ಗೆದ್ದು ವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ತಂಡ ಭಾನುವಾರ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಕಾದಾಟ ನಡೆಸಲಿದೆ.
T20 World Cup 2022 Great Outing For Both Spinners By Taking Two Wickets Each Harbhajan Singh Lauds Axar, Ashwin.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 04:45 pm
HK News Desk
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
14-05-25 06:33 pm
Mangalore Correspondent
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm