ಬ್ರೇಕಿಂಗ್ ನ್ಯೂಸ್
23-10-22 09:47 pm HK News Desk ಕ್ರೀಡೆ
ನವದೆಹಲಿ, ಅ.23: ಟಿ- ಟ್ವೆಂಟಿ ವಿಶ್ವಕಪ್ ಮೊದಲ ಪಂದ್ಯದಲ್ಲಿ ಪಾಕಿಸ್ಥಾನ ವಿರುದ್ಧ ಭಾರತದ ವಿಜಯವನ್ನು ದೀಪಾವಳಿ ಹಬ್ಬದ ಶುಭಾರಂಭ ಎಂದು ಕರೆದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಾಕ್ ತಂಡದ ವಿರುದ್ಧದ ಭಾರತ ತಂಡದ ಪ್ರದರ್ಶನಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅಮಿತ್ ಶಾ, ಟಿ-20 ವಿಶ್ವಕಪ್ ಅನ್ನು ಪ್ರಾರಂಭಿಸಲು ಇದು ಉತ್ತಮವಾದ ಮಾರ್ಗವಾಗಿದೆ. ವಿರಾಟ್ ಕೊಹ್ಲಿ ಅವರ ಅವರ ಅಬ್ಬರದ ಇನ್ನಿಂಗ್ಸ್ ನಿಜಕ್ಕೂ ಪ್ರಶಂಸನೀಯ. ಭಾರತ ತಂಡಕ್ಕೆ ಅಭಿನಂದನೆಗಳು ಎಂದು ಹೇಳಿದ್ದಾರೆ.
ಹಾಗೆಯೇ ಭಾರತ ತಂಡದ ಗೆಲುವಿಗೆ ತೀವ್ರ ಸಂತಸ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, ಇದು ಖಂಡಿತವಾಗಿಯೂ ಭಾರತ-ಪಾಕಿಸ್ತಾನ ನಡುವಿನ ಅತ್ಯಂತ ರೋಚಕ ಪಂದ್ಯ ಎಂದು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ತರೂರ್, ಗೋವಾದಲ್ಲಿದ್ದ ನಾನು, ಈ ಪಂದ್ಯವನ್ನು ವೀಕ್ಷಣೆ ಮಾಡಲೆಂದೇ ವಿಮಾನದ ಸಮಯದಲ್ಲಿ ಬದಲಾವಣೆ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ.
ಅದೇ ರೀತಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಭಾರತ ತಂಡವನ್ನು ಅಭಿನಂದಿಸಿದ್ದು, "ಪಾಕಿಸ್ತಾನ ವಿರುದ್ಧದ ಅದ್ಭುತ ಗೆಲುವಿಗಾಗಿ ಟೀಂ ಇಂಡಿಯಾಕ್ಕೆ ಹೃತ್ಪೂರ್ವಕ ಅಭಿನಂದನೆಗಳು" ಎಂದು ಟ್ವೀಟ್ ಮಾಡಿದ್ದಾರೆ. ಭಾರತ ತಂಡದ ಪ್ರದರ್ಶನ ನೋಡಿ ತುಂಬ ಸಂತಸವಾಯಿತು ಎಂದೂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾರತ ತಂಡದ ಪ್ರದರ್ಶನವನ್ನು ಶ್ಲಾಘಿಸಿದ್ದು, ಟಿ-20 ವಿಶ್ವಕಪ್ ಅಭಿಯಾನದ ಆರಂಭಿಕ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದ್ದಕ್ಕಾಗಿ ಕೊಹ್ಲಿ ಮತ್ತು ಟೀಂ ಇಂಡಿಯಾವನ್ನು ಅಭಿನಂದಿಸುವುದಾಗಿ ಹೇಳಿದರು. ಭಾರತವು ಈ ಬಾರಿಯ ಟಿ-20 ವಿಶ್ವಕಪ್ನ್ನು ಗೆಲ್ಲುವ ಭರವಸೆ ಮೂಡಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ವಿರಾಟ್ ಅವರ ಅತ್ಯುತ್ತಮ ಆಟವು ಪಾಕಿಸ್ತಾನದ ವಿರುದ್ಧ ಭಾರತದ ಅದ್ಭುತ ಗೆಲುವಿಗೆ ಕಾರಣವಾಯಿತು. ನಾನು ಸಮಸ್ತ ಭಾರತೀಯರ ಪರವಾಗಿ ಟೀಂ ಇಂಡಿಯಾವನ್ನು ಅಭಿನಂದಿಸುತ್ತೇನೆ ಎಂದು ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡ ಭಾರತ ತಂಡದ ಗೆಲುವನ್ನು ಸಂಭ್ರಮಿಸಿದ್ದು, ಇದು ನಿಜಕ್ಕೂ ಅಸಾಧಾರಣ ಗೆಲುವು ಎಂದು ಹೇಳಿದ್ದಾರೆ. ಭಾರತ ತಂಡದ ಪ್ರದರ್ಶನ ಸಮಸ್ತ ಭಾರತೀಯರ ಸಂತಸವನ್ನು ಇಮ್ಮಡಿಗೊಳಿಸಿದ್ದು, ಈ ತಂಡ ವಿಶ್ವಕಪ್ನ್ನು ಗೆದ್ದು ಮರಳಲಿ ಎಂದು ಹಾರೈಸುವುದಾಗಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
A perfect way to start the T20 World Cup…Deepawali begins :)
— Amit Shah (@AmitShah) October 23, 2022
What a cracking innings by @imVkohli.
Congratulations to the entire team. #ICCT20WorldCup2022
क्या ग़ज़ब का मैच था। 👏🏻
— Arvind Kejriwal (@ArvindKejriwal) October 23, 2022
विराट के बेहतरीन खेल ने पाकिस्तान के ख़िलाफ़ भारत को शानदार जीत दिलाई। वर्ल्ड T-20 में भारत की विजयी शुरुआत के लिए टीम इंडिया और सभी देशवासियों को बधाई। जीत के इसी सिलसिले को बनाए रखते हुए हम वर्ल्ड कप भी जीतकर लाएँगे। 🇮🇳 pic.twitter.com/VfRnNr9dVT
Heartiest congratulations to Team India on their phenomenal victory against Pakistan.
— Mamata Banerjee (@MamataOfficial) October 23, 2022
The performance of our cricketers was truly a delight to watch.
May the team continue its victory streak in the days to come.
Virat Kohli's match-winning knock of an unbeaten 82 off 53 balls against Pakistan in the T20 World Cup match in Melbourne today has drawn wholesome praise from across the country's political spectrum. While Kohli himself said "It just happens", commenting on today's incredible victory, leaders of political parties were full of appreciation for the former India captain's sparkling knock and the Indian team's resilience that made a near-impossible possible.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm