ಬ್ರೇಕಿಂಗ್ ನ್ಯೂಸ್
15-10-22 02:28 pm Source: Vijayakarnataka ಕ್ರೀಡೆ
ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ತಾಯ್ನಾಡಿನಲ್ಲಿ 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯನ್ನು ಆಯೋಜಹಿಸಬೇಕಿದೆ. ಅಂದಹಾಗೆ ಈ ಟೂರ್ನಿ ಆಯೋಜನೆ ಸಲುವಾಗಿ ಬಿಸಿಸಿಐ, ಭಾರತ ಸರಕಾರದಿಂದ ತೆರಿಗೆ ವಿನಾಯಿತಿಯ ನಿರೀಕ್ಷೆಯಲ್ಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಗೆ ಟೂರ್ನಿ ಆಯೋಜಿಸಲು ಬಿಸಿಸಿಐ ತೆರಿಗೆ ವಿನಾಯಿತಿ ತಂದುಕೊಡದೇ ಇದ್ದರೆ ಬರೋಬ್ಬರಿ 955 ಕೋಟಿ ರೂ.ಗಳ ಭಾರಿ ನಷ್ಟ ಎದುರಿಸಲಿದೆ. ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ 2023 ಟೂರ್ನಿ ಆಯೋಜಿಸಿ ಬರುವ ಆದಾಯದಲ್ಲಿ ಶೇ. 21.84ರಷ್ಟನ್ನು ಐಸಿಸಿ ತೆರಿಗೆ (ಹೆಚ್ಚುವರಿಯಾಗಿ ತೆಗೆದುಕೊಳ್ಳುವ ಸರ್ಚಾರ್ಜ್) ರೂಪದಲ್ಲಿ ಭಾರತ ಸರಕಾರಕ್ಕೆ ನೀಡಬೇಕಾಗುತ್ತದೆ. ಹೀಗಾಗಿ ವಿನಾಯಿತಿ ಸಿಗದೇ ಇದ್ದರೆ, ಆ ಮೊತ್ತವನ್ನು ಬಿಸಿಸಿಐ ಭರಿಸುವಂತ್ತಾಗುತ್ತದೆ. 2023ರ ಅಕ್ಟೋಬರ್-ನವೆಂಬರ್ನಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ನಡೆಯಲಿದೆ.
ತೆರಿಗೆ ಹೆಚ್ಚುವರಿ ಶುಲ್ಕವು (ಅರ್ಚಾರ್ಜ್), ಆರಂಭಿಕವಾಗಿ ಉಲ್ಲೇಖಿಸಿದ ಬೆಲೆಯನ್ನು ಮೀರಿ ಸರಕು ಅಥವಾ ಸೇವೆಯ ವೆಚ್ಚಕ್ಕೆ ಸೇರಿಸಲಾದ ಹೆಚ್ಚುವರಿ ಶುಲ್ಕವಾಗಿದೆ. ಸರ್ಚಾರ್ಜ್ ಮೂಲಕ ಅಸ್ಥಿತ್ವದಲ್ಲಿರುವ ತೆರಿಗೆ ಜೊತೆಗೆ ಹೆಚ್ಚುವರಿ ಶುಲ್ಕವನ್ನು ಹೆಚ್ಚಾಗಿ ಸೇರಿಸಲಾಗುತ್ತದೆ. ಯಾವುದೇ ಸರಕು ಅಥವಾ ಸೇವೆಯ ಆರಂಭದಲ್ಲಿ ಇದನ್ನು ಸೇರಿಸಿರಲಾಗುವುದಿಲ್ಲ.
ಭಾರತದಲ್ಲಿ ತೆರಿಗೆ (ಸರ್ಚಾರ್ಜ್) ವಿನಾಯಿತಿಗೆ ಅವಕಾಶವಿಲ್ಲ. 2016ರಲ್ಲಿ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಆಯೋಜಿಸದ್ದ ಸಂದರ್ಭದಲ್ಲೂ ಇದೇ ಸರ್ಚಾರ್ಜ್ನಿಂದಾಗಿ ಬಿಸಿಸಿಐ ಬರೋಬ್ಬರಿ 193 ಕೋಟಿ ರೂ.ಗಳ ನಷ್ಟ ಅನುಭವಿಸಿತ್ತು. ಈ ವಿಚಾರವಾಗಿ ಬಿಸಿಸಿಐ, ಐಸಿಸಿ ವಿರುದ್ಧ ಕಾನೂನು ಹೋರಾಟ ನಡೆಸುತ್ತಾ ಬಂದಿದೆ. ಹೀಗಿರುವಾಗ ಮತ್ತೊಮ್ಮೆ ಅಂಥದ್ದೇ ಅಂಕಷ್ಟ ಎದುರಿಸುವ ಭೀತಿಗೆ ಸಿಲುಕಿದೆ. ಈ ಬಾರಿ ಬರೋಬ್ಬರಿ 955 ಕೋಟಿ ರೂ. ನಷ್ಟ ಅನುಭವಿಸುವ ಸಂಕಷ್ಟಕ್ಕೆ ಸಿಲುಕಿದೆ.
"ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ 2023ರಲ್ಲಿ ಭಾರತದ ಆತಿಥ್ಯದಲ್ಲಿ ನಡೆಯಲಿದೆ. 2023ರ ಅಕ್ಟೋಬರ್-ನವೆಂಬರ್ನಲ್ಲಿ ಟೂರ್ನಿ ನಡೆಯಲಿದ್ದು, ಬಿಸಿಸಿಐ ತೆರಿಗೆ ವಿನಾಯಿತಿ ತಂದುಕೊಡಬೇಕಿದೆ. ಅಥವಾ ಟೂರ್ನಿ ಆಯೋಜಿಸಿ ತೆರಿಗೆ ಉಳಿಸಲು ಮಾರ್ಗೋಪಾಯ ಕಂಡುಕೊಳ್ಳಬೇಕಿದೆ," ಎಂದು ಬಿಸಿಸಿಐ, ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ತನ್ನ ವಾರ್ಷಿಕ ಮಹಾಸಭೆಗೂ ಮುನ್ನ ಬಿಡುಗಡೆ ಮಾಡಿರುವ ಜ್ಞಾಪಕ ಪತ್ರದಲ್ಲಿ ಹೇಳಿದೆ.
ವರದಿಗಳ ಪ್ರಕಾರ, ಐಸಿಸಿ ಟೂರ್ನಿ ಆಯೋಜಿಸಿ ಟೆಲಿವಿಷನ್ ಪ್ರಸಾರದಿಂದ ಸಿಗುವ ಆದಾಯದಲ್ಲಿ ಶೇ. 21.81ರಷ್ಟನ್ನು ಸಚಾರ್ಜ್ ರೂಪದಲ್ಲಿ ಭಾರತ ಸರಕಾರಕ್ಕೆ ನೀಡಬೇಕಾಗುತ್ತದೆ. ಈ ತೆರಿಗೆ ಶೇ.ವನ್ನು 10.92ಕ್ಕೆ ಇಳಿಸಲು ಬಿಸಿಸಿಐ ಸತತ ಪ್ರಯತ್ನ ನಡೆಸುತ್ತಿದೆ ಎನ್ನಲಾಗಿದೆ. ಇದು ಸಾಧ್ಯವಾದರೆ ತೆರಿಗೆ ಮೊತ್ತ 430 ಕೋಟಿ ರೂ. ಆಗಲಿದೆ.
"ತೆರಿಗೆ ಉಳಿಸುವ ನಿಟ್ಟಿನಲ್ಲಿ ಬಿಸಿಸಿಐ, ಭಾರತ ಸರಕಾರದ ಹಣಕಾಸು ಸಚಿವಾಲಯದ ಜೊತೆಗೆ ಕೆಲಸ ಮಾಡುತ್ತಿದೆ. ಶೇ. 20 ರಷ್ಟು ತೆರಿಗೆ ಅಧಿಕವಾದುದ್ದಾಗಿದ್ದು, ಇದನ್ನು ಶೇ. 10ಕ್ಕೆ ಇಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಈ ಬಗ್ಗೆ ಶೀಘ್ರವೇ ಸ್ಪಷ್ಟತೆ ಲಭ್ಯವಾಗಲಿದೆ. ತೆರಿಗೆ ವಿನಾಯಿತಿ ಸಿಗದೇ ಇದ್ದರೆ, ಟೂರ್ನಿ ಆಯೋಜಿಸಿ ಲಭ್ಯವಾಗುವ ಆದಾಯದಲ್ಲಿ ಬಿಸಿಸಿಐಗೆ ಸಿಗಬೇಕಾದ ಹಣದಲ್ಲಿ ಐಸಿಸಿ ತನ್ನ ತೆರಿಗೆ ಮೊತ್ತವನ್ನು ಹಿಡಿದು ನೀಡಲಿದೆ. ಇದು ಬಿಸಿಸಿಐ ಖಾತೆಗೆ ಭಾರಿ ನಷ್ಟ ತಂದೊಡ್ಡುತ್ತದೆ," ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ.
2023ರ ಒಡಿಐ ವಿಶ್ವಕಪ್ ಆಯೋಜನೆಯಿಂದ ಬಿಸಿಸಿಐಗೆ 3336 ಕೋಟಿ ರೂ. ಆದಾಯ ಹರಿದು ಬರಲಿದೆ ಎಂದೇ ಅಂದಾಜಿಸಲಾಗಿದೆ. ಇದರಲ್ಲಿ 955 ಕೋಟಿ ರೂ.ಗಳನ್ನು ತೆರಿಗೆ ರೂಪದಲ್ಲಿ ಕಳೆದುಕೊಳ್ಳುವ ಭೀತಿಯಲ್ಲಿದೆ. ಐಸಿಸಿ ಒಟ್ಟಾರೆ 4400 ಕೋಟಿ ರೂ. ಲಾಭವನ್ನು ಎದುರು ನೋಡುತ್ತಿದೆ.
Bcci Could Lose 955 Crore If Icc Doesnt Get Exemption From Government For Hosting 2023 Odi World Cup.
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
14-10-25 10:33 pm
HK News Desk
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
Kerala, IT professional dead, RSS members: ಆರ...
13-10-25 05:31 pm
14-10-25 10:36 pm
Mangalore Correspondent
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ...
14-10-25 06:39 pm
ಬಿ.ಸಿ ರೋಡ್ ; ಹೆದ್ದಾರಿ ಬದಿ ಕಾರು ರಿಪೇರಿ ಮಾಡುತ್...
14-10-25 05:46 pm
14-10-25 04:44 pm
HK News Desk
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm