ಬ್ರೇಕಿಂಗ್ ನ್ಯೂಸ್
04-10-22 02:39 pm Source: Vijayakarnataka ಕ್ರೀಡೆ
ಬೆಂಗಳೂರು: 2022ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಿಂದ ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಂತಹ ಇತ್ತೀಚಿನ ಹೇಳಿಕೆಗಳ ನಂತರ ಅಭಿಮಾನಿಗಳು ಪವಾಡ ರೀತಿಯಲ್ಲಿ ಬುಮ್ರಾ ಕಮ್ಬ್ಯಾಕ್ ಮಾಡಬಹುದು ಎಂದೇ ನಿರೀಕ್ಷಿಸಿದ್ದರು. ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ಸಂಜೆ ಬುಮ್ರಾ ಅಧಿಕೃತವಾಗಿ ಹೊರಬಿದ್ದಿದ್ದಾರೆ ಎಂದು ಖಚಿತಪಡಿಸಿದೆ.
ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ನ ಗಾಯದ ಸಮಸ್ಯೆ ಬಗ್ಗೆ ವೈದ್ಯಕೀಯ ತಂಡದೊಂದಿಗೆ ವಿವರವಾದ ಮೌಲ್ಯಮಾಪನ ಮತ್ತು ತಜ್ಞರೊಂದಿಗೆ ಸಮಾಲೋಚಿಸಿದ ನಂತರ, ಜಸ್ಪ್ರೀತ್ ಬುಮ್ರಾ ವಿಶ್ವಕಪ್ ಆಡಲು ಅನರ್ಹ ಎಂದು ಬಿಸಿಸಿಐ ಘೋಷಿಸಿತು. ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಗೂ ಮುನ್ನ ಬೆನ್ನು ನೋವಿನ ಸಮಸ್ಯೆಗೆ ಬುಮ್ರಾ ತುತ್ತಾಗಿದ್ದರು. ಮುಂಬರುವ ವಿಶ್ವಕಪ್ಗೆ ಬುಮ್ರಾ ಬದಲಿ ಆಟಗಾರನನ್ನು ಬಿಸಿಸಿಐ ಶೀಘ್ರದಲ್ಲೇ ಪ್ರಕಟ ಮಾಡಲಿದೆ.
ದ್ರಾವಿಡ್-ಗಂಗೂಲಿ ಭರವಸೆ ಮೂಡಿಸಿದ್ದರು!
ಬುಮ್ರಾ ಇನ್ನೂ ವಿಶ್ವಕಪ್ನಿಂದ ಸಂಪೂರ್ಣವಾಗಿ ಹೊರಬಿದ್ದಿಲ್ಲ ಎಂದು ಹೇಳುವ ಮೂಲಕ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದ್ದು. ಬುಮ್ರಾ ಇನ್ನೂ ವಿಶ್ವಕಪ್ ಆಡಬಹುದು ಎಂದು ದಾದಾ ಹೇಳಿದ್ದರು. ತಂಡದ ಮುಖ್ಯ ಕೋಚ್ ಕೂಡ ಇದೇ ವಿಷಯದ ಬಗ್ಗೆ ಮಾತನಾಡಿ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚುವಂತೆ ಮಾಡಿದ್ದರು. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡೋಣ ಎಂದು ರಾಹುಲ್ ಇತ್ತೀಚಿನ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.
ಟೀಮ್ ಇಂಡಿಯಾಗೆ ಭಾರಿ ಹಿನ್ನಡೆ
ಬುಮ್ರಾ ಅನುಪಸ್ಥಿತಿಯು ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಏಷ್ಯಾ ಕಪ್ 2022 ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಸೋತಿದ್ದ ತಂಡ ಸೂಪರ್-4ರಲ್ಲಿ ಶ್ರೀಲಂಕಾ ವಿರುದ್ಧವೂ ಮುಗ್ಗರಿಸಿತ್ತು. ಎಷ್ಯಾ ಕಪ್ನಲ್ಲಿ ಆಡದ ಬುಮ್ರಾ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕಮ್ಬ್ಯಾಕ್ ಮಾಡಿದ್ದರು. ಸರಣಿಯ 2ನೇ ಪಂದ್ಯದಲ್ಲಿ ಆಡಿದ್ದ ಬುಮ್ರಾ ಆಸೀಸ್ ನಾಯಕ ಆರೊನ್ ಫಿಂಚ್ ಅವರನ್ನು ಯಾರ್ಕರ್ ಮೂಲಕ ಕ್ಲೀನ್ ಬೌಲ್ಡ್ ಮಾಡಿದ್ದರು. ದುರದೃಷ್ಟವಶಾತ್ ಮತ್ತದೇ ಬೆನ್ನುನೋವಿನ ಸಮಸ್ಯೆಗೆ ಸಿಲುಕಿದ್ದಾರೆ.
ಬುಮ್ರಾ ಗಾಯದ ಸುದೀರ್ಘ ಇತಿಹಾಸವನ್ನು ಹೊಂದಿದ್ದಾರೆ. ವಿಶೇಷವಾಗಿ 2019 ರಿಂದ, ಅವರು ಅನೇಕ ಬಾರಿ ಗಾಯಗೊಂಡಿದ್ದಾರೆ. ಕಳೆದ 3 ವರ್ಷಗಳಲ್ಲಿ ಒಂದಲ್ಲ ಒಂದು ಕಾರಣಕ್ಕಾಗಿ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದರು. ಇದು ಸೇರಿ ಅವರು ಮೂರು ಬಾರಿ ಬೆನ್ನು ನೋವಿನ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. 2022ರಲ್ಲಿ ಅವರು ಟೀಮ್ ಇಂಡಿಯಾ ಪರ ಬುಮ್ರಾ ಕೇವಲ 3 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಜಸ್ಪ್ರೀತ್ ಬುಮ್ರಾ ಈ ವರ್ಷ ಬರೋಬ್ಬರಿ 25 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಂದ ಹೊರಗುಳಿದಿದ್ದಾರೆ. ಇದು ಭಾರತದ ವಿಶ್ವಕಪ್ ತಂಡದಲ್ಲಿರುವ ಇತರ ಆಟಗಾರರಿಗಿಂತ ಹೆಚ್ಚು. ಅಂದಹಾಗೆ 2022ರ ಐಪಿಎಲ್ನಲ್ಲಿ ಬುಮ್ರಾ ಮುಂಬೈ ಇಂಡಿಯನ್ಸ್ ಪರ 14 ಪಂದ್ಯಗಳನ್ನು ಆಡಿದ್ದಾರೆ.
Bcci Confirm Jasprit Bumrah Will Miss The Upcoming Icc T20 World Cup 2022 Due To Back Injury.
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
14-10-25 10:33 pm
HK News Desk
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
Kerala, IT professional dead, RSS members: ಆರ...
13-10-25 05:31 pm
14-10-25 10:36 pm
Mangalore Correspondent
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ...
14-10-25 06:39 pm
ಬಿ.ಸಿ ರೋಡ್ ; ಹೆದ್ದಾರಿ ಬದಿ ಕಾರು ರಿಪೇರಿ ಮಾಡುತ್...
14-10-25 05:46 pm
14-10-25 04:44 pm
HK News Desk
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm