ಬ್ರೇಕಿಂಗ್ ನ್ಯೂಸ್
03-10-22 12:51 pm Source: Vijayakarnataka ಕ್ರೀಡೆ
ಗುವಾಹಾಟಿ: ದಕ್ಷಿಣ ಆಫ್ರಿಕಾ ವಿರುದ್ಧ ತವರು ಮಣ್ಣಿನಲ್ಲಿ ಭಾರತ ತಂಡ ಮೊಟ್ಟ ಮೊದಲ ಬಾರಿ ಟಿ20 ಸರಣಿ ಗೆದ್ದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಸೂರ್ಯಕುಮಾರ್ ಯಾದವ್, ತಮ್ಮ ಬ್ಯಾಟಿಂಗ್ ಪ್ಲಾನ್ ಏನೆಂಬುದನ್ನು ಬಹಿರಂಗಪಡಿಸಿದರು.
ಭಾನುವಾರ ಇಲ್ಲಿನ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಭಾರತ ತಂಡ, ತನ್ನ ಪಾಲಿನ 20 ಓವರ್ಗಳಿಗೆ 3 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿತು. ಟಿ20 ಪಂದ್ಯದಲ್ಲಿ ಭಾರತ ತಂಡದ ಗರಿಷ್ಠ ಮೊತ್ತ ಇದಾಯಿತು ಹಾಗೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ದಾಖಲಾದ ನಾಲ್ಕನೇ ಗರಿಷ್ಠ ಮೊತ್ತ ಕೂಡ.
ಭಾರತ ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಸೂರ್ಯಕುಮಾರ್ ಯಾದವ್ ಅವರು, ಕೇವಲ 22 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 5 ಬೌಂಡರಿಯೊಂದಿಗೆ 61 ರನ್ ಚಚ್ಚಿದರು. ಆ ಮೂಲಕ ಭಾರತ ತಂಡದ 16 ರನ್ಗಳ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಈ ಪಂದ್ಯದ ಗೆಲುವಿನ ಮೂಲಕ 2-0 ಅಂತರದಲ್ಲಿ ಟಿ20 ಸರಣಿಯನ್ನು ಭಾರತ ವಶಪಡಿಸಿಕೊಂಡಿತು.
ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ಸೂರ್ಯಕುಮಾರ್ ಯಾದವ್, "ನಾವು ಮೊದಲು ಬ್ಯಾಟ್ ಮಾಡಿದ್ದರಿಂದ, ಪಂದ್ಯದಲ್ಲಿ ಒಂದು ಟೆಂಪೊ ಸೆಟ್ ಮಾಡುವುದರ ಬಗ್ಗೆ ನಾನು ಸ್ಪಷ್ಟತೆಯನ್ನು ಹೊಂದಿದ್ದೆ. ಅದರಂತೆ ಕ್ರೀಸ್ಗೆ ತೆರಳಿ ಅದಕ್ಕೆ ತಕ್ಕಂತೆ ಬ್ಯಾಟ್ ಬೀಸಿದ್ದೇನೆ ಹಾಗೂ ನನ್ನ ಆಟವನ್ನು ಆನಂದಿಸಿದ್ದೇನೆ," ಎಂದು ಹೇಳಿದರು.
238 ರನ್ ಗುರಿ ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ಪರ ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಡೇವಿಡ್ ಮಿಲ್ಲರ್ ಕೇವಲ 47 ಎಸೆತಗಳಲ್ಲಿ ಅಜೇಯ 106 ರನ್ ಗಳಿಸಿದರು. ಇವರ ಇನಿಂಗ್ಸ್ನಲ್ಲಿ 7 ಸಿಕ್ಸರ್ ಹಾಗೂ 8 ಬೌಂಡರಿಗಳಿದ್ದವು. ಇವರ ಶತಕದ ಹೊರತಾಗಿಯೂ ದಕ್ಷಿಣ ಆಫ್ರಿಕಾ ತಂಡ ಕೇವಲ 16 ರನ್ಗಳಿಂದ ಸೋಲು ಒಪ್ಪಿಕೊಂಡಿತು.
ಡೇವಿಡ್ ಮಿಲ್ಲರ್ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಪ್ರತಿಕ್ರಿಯಿಸಿದ ಸೂರ್ಯಕುಮಾರ್ ಯಾದವ್, "ಕೊನೆಯ ಎಸೆತದವರೆಗೂ ಎಲ್ಲರಲ್ಲಿಯೂ ಬೆವರು ಇಳಿಯುತ್ತಲೇ ಇತ್ತು. ಡೇವಿಡ್ ಮಿಲ್ಲರ್ ಸುಂದರವಾಗಿ ಚೆಂಡನ್ನು ಹೊಡೆದಿದ್ದಾರೆ, " ಎಂದು ಎದುರಾಳಿ ಆಟಗಾರನನ್ನು ಗುಣಗಾಣ ಮಾಡಿದರು.
"ಪಂದ್ಯದಲ್ಲಿ ಬ್ಯಾಟ್ ಮಾಡುವ ವೇಳೆ ಸ್ಕೋರ್ ಬಗ್ಗೆ ನಾನು ಹೆಚ್ಚಿಗೆ ಯೋಚನೆ ಮಾಡಿರಲಿಲ್ಲ. ಕ್ರೀಸ್ಗೆ ತೆರಳಿ ಎಷ್ಟು ವೇಗವಾಗಿ ಬ್ಯಾಟ್ ಮಾಡಿ, ಎಷ್ಟು ರನ್ಗಳನ್ನು ಗಳಿಸಲಾಗುತ್ತೊ ಅಷ್ಟು ರನ್ಗಳನ್ನು ಗಳಿಸುವುದು ನನ್ನ ಉದ್ದೇಶವಾಗಿತ್ತು," ಎಂದು ಸೂರ್ಯಕುಮಾರ್ ಯಾದವ್ ತಮ್ಮ ಬ್ಯಾಟಿಂಗ್ ಗೇಮ್ ಪ್ಲಾನ್ ತಿಳಿಸಿದರು.
2-0 ಅಂತರದಲ್ಲಿ ಟಿ20 ಸರಣಿ ವಶಪಡಿಸಿಕೊಂಡಿರರುವ ಭಾರತ ತಂಡ, ಅ. 4 ರಂದು ಮಂಗಳವಾರ ಇಂದೋರ್ನಲ್ಲಿ ನಡೆಯುವ ಮೂರನೇ ಹಾಗೂ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ಈ ಪಂದ್ಯದ ಬಳಿಕ ರೋಹಿತ್ ಶರ್ಮಾ ನಾಯಕತ್ವದ ಭಾರತ, ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದೆ.
Ind Vs Sa 2nd T20i I Was Clear About Setting The Tempo Suryakumar Yadav Reflects On Indias Win Over South Africa.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm