ಬ್ರೇಕಿಂಗ್ ನ್ಯೂಸ್
02-09-22 03:54 pm Source: Vijayakarnataka ಕ್ರೀಡೆ
ಬೆಂಗಳೂರು: ಏಷ್ಯಾ ಕಪ್ 2022 ಟೂರ್ನಿಯ ವೇಳಾಪಟ್ಟಿ ಪ್ರಕಾರ 'ಎ' ಗುಂಪಿನಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಸೆಪ್ಟೆಂಬರ್ 4ರಂದು (ಭಾನುವಾರ) ಮತ್ತೆ ಮುಖಾಮುಖಿ ಆಗುವಂತ್ತಾಗುತ್ತದೆ. ಸದ್ಯ ರೋಹಿತ್ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ, 'ಎ' ಗುಂಪಿನಲ್ಲಿ ಅಗ್ರ ಸ್ಥಾನ ಪಡೆದು ಸೂಪರ್-4 ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. 'ಎ' ಗುಂಪಿನ ಎರಡನೇ ಸ್ಥಾನಕ್ಕಾಗಿ ಪಾಕಿಸ್ತಾನ ಮತ್ತು ಹಾಂಕಾಂಗ್ ತಂಡಗಳ ನಡುವೆ ಪೈಪೋಟಿಯಿದೆ. ಸೆ.2ರಂದು (ಶುಕ್ರವಾರ) ಪಾಕಿಸ್ತಾನ-ಹಾಂಕಾಂಗ್ ತಂಡಗಳು ಮುಖಾಮುಖಿ ಆಗಲಿದ್ದು, ಪಾಕ್ ತಂಡ ಗೆಲ್ಲುವ ಫೇವರಿಟ್ ಆಗಿದೆ.
ಕ್ರಿಕೆಟ್ ಕೂಸು ಹಾಂಕಾಂಗ್ ಎದುರು ಪಾಕಿಸ್ತಾನ ತಂಡ ಗೆದ್ದದ್ದೇ ಆದರೆ, ಭಾನುವಾರ (ಸೆ.4) ನಡೆಯಲಿರುವ ಸೂಪರ್-4 ಹಂತದ ಪಂದ್ಯದಲ್ಲಿ ಟೀಮ್ ಇಂಡಿಯಾ ಸವಾಲು ಎದುರಿಸಲಿದೆ. ಅಂದಹಾಗೆ 'ಎ' ಗುಂಪಿನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ 5 ವಿಕೆಟ್ಗಳ ಜಯ ದಾಖಲಿಸಿತ್ತು. ಆದರೆ, ಹಾಂಕಾಂಗ್ ತಂಡ ಪಾಕ್ ಎದುರು ಅಚ್ಚರಿಯ ಗೆಲುವು ದಾಖಲಿಸಿದ್ದೇ ಆದರೆ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಲಿದೆ. ಶಾರ್ಜಾ ಕ್ರೀಡಾಂಗಣದಲ್ಲಿ ಹಾಂಕಾಂಗ್ ಮತ್ತು ಪಾಕಿಸ್ತಾನ ತಂಡಗಳು ಶುಕ್ರವಾರ ರಾತ್ರಿ 7:30ಕ್ಕೆ ಮುಖಾಮುಖಿ ಆಗಲಿವೆ.
ಇಂಡೊ-ಪಾಕ್ ಫೈನಲ್ ಹೇಗೆ?
ಸೂಪರ್-4 ಹಂತ ತಲುಪುವ ಎಲ್ಲಾ ತಂಡಗಳು ಕನಿಷ್ಠ ಮೂರು ಪಂದ್ಯಗಳನ್ನು ಆಡಲಿವೆ. ಹೀಗಾಗಿ ಫೈನಲ್ ತಲುಪುವ ಫೇವರಿಟ್ಗಳಾದ ಭಾರತ-ಪಾಕಿಸ್ತಾನ ತಂಡಗಳು ಸೂಪರ್-4 ಹಂತದಕಲ್ಲಿ ಮತ್ತೊಮ್ಮೆ ಮುಖಾಮುಖಿಗೆ ಸಿದ್ಧವಾಗಬೇಕಾಗುತ್ತದೆ. ಈ ಪಂದ್ಯ ಫೈನಲ್ಗೂ ಮುನ್ನ ಇತ್ತಂಡಗಳಿಗೆ ಸಮರಾಭ್ಯಾಸದ ಪಂದ್ಯದಂತ್ತಾಗಲಿದೆ. ಆದರೆ, ಇದು ಸಾಧ್ಯವಾಗಬೇಕಾದರೆ ಪಾಕಿಸ್ತಾ ತಂಡ 'ಎ' ಗುಂಪಿನ ಕೊನೇ ಪಂದ್ಯದಲ್ಲಿ ಹಾಂಕಾಂಗ್ ಎದುರು ಗೆಲ್ಲಬೇಕಿದೆ.
ಪಾಕ್-ಹಾಂಕಾಂಗ್ ಮೊದಲ ಬಾರಿ ಮುಖಾಮುಖಿ
ಅಂದಹಾಗೆ, ಹಾಂಕಾಂಗ್ ತಂಡವನ್ನು ಸೋಲಿಸಲು ಪಾಕಿಸ್ತಾನಕ್ಕೆ ಯಾವುದೇ ತೊಂದರೆಯಾಗಬಾರದು. ಇನ್ನು ಇತ್ತಂಡಗಳು ಟಿ20 ಮಾದರಿಯಲ್ಲಿ ಮೊದಲ ಬಾರಿ ಮುಖಾಮುಖಿಯಾಗುತ್ತಿವೆ. ಇದಕ್ಕೂ ಮೊದಲು ಮೂರು ಬಾರಿ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಪೈಪೋಟಿ ನಡೆಸಿದ್ದು, ಮೂರು ಬಾರಿ ಪಾಕ್ ಪಡೆ ಗೆದ್ದಿದೆ. ಹೀಗಾಗಿ ಟಿ20 ಕ್ರಿಕೆಟ್ನಲ್ಲೂ ಪಾಕ್ ಗೆಲ್ಲುವ ಫೇವರಿಟ್ ಆಗಿದೆ.
ಪಾಕಿಸ್ತಾನ ತಂಡದ ಸಂಭಾವ್ಯ ಪ್ಲೇಯಿಂಗ್ XI: ಬಾಬರ್ ಆಝಮ್ (ನಾಯಕ), ಮೊಹಮ್ಮದ್ ರಿಝ್ವಾನ್, ಫಖರ್ ಝಮಾನ್, ಇಫ್ತಿಖಾರ್ ಅಹ್ಮದ್, ಖುಷ್ದಿಲ್ ಶಾ, ಶದಾಬ್ ಖಾನ್, ಆಸಿಫ್ ಅಲಿ, ಮೊಹಮ್ಮದ್ ನವಾಝ್, ಮೊಹಮ್ಮದ್ ಹಸನಾಯ್, ಹ್ಯಾರಿಸ್ ರೌಫ್, ಶಹನವಾಜ್ ದಹಾನಿ.
ಹಾಂಗ್ ಕಾಂಗ್ ತಂಡದ ಸಂಭಾವ್ಯ XI: ನಿಝಾಕತ್ ಖಾನ್ (ನಾಯಕ), ಯಾಸಿಮ್ ಮೊರ್ತಾಜ, ಬಾಬರ್ ಹಯಾತ್, ಕಿಂಚಿತ್ ಶಾ, ಐಜಾಝ್ ಖಾನ್, ಝೀಶನ್ ಅಲಿ, ಸ್ಕಾಟ್ ಮೆಕೆನಿ, ಹರೂನ್ ಅರ್ಷದ್, ಎಹಸಾನ್ ಖಾನ್, ಆಯುಷ್ ಶುಕ್ಲಾ, ಮೊಹಮ್ಮದ್ ಗಜ್ನಾಫರ್.
Asia Cup 2022 How Can India And Pakistan Face Each Other One More Time All Scenarios Explained.
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
14-10-25 10:33 pm
HK News Desk
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
Kerala, IT professional dead, RSS members: ಆರ...
13-10-25 05:31 pm
14-10-25 10:36 pm
Mangalore Correspondent
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ...
14-10-25 06:39 pm
ಬಿ.ಸಿ ರೋಡ್ ; ಹೆದ್ದಾರಿ ಬದಿ ಕಾರು ರಿಪೇರಿ ಮಾಡುತ್...
14-10-25 05:46 pm
14-10-25 04:44 pm
HK News Desk
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm