ಬ್ರೇಕಿಂಗ್ ನ್ಯೂಸ್
05-05-22 07:21 pm Mangalore Correspondent ಕರಾವಳಿ
ಮಂಗಳೂರು, ಮೇ 5: ಎಂಆರ್ ಪಿಎಲ್ ಆಸುಪಾಸಿನ ಜನರಲ್ಲಿ ಶ್ವಾಸಕೋಶದ ಕ್ಯಾನ್ಸರ್, ಚರ್ಮದ ಕಾಯಿಲೆಗಳು ವಿಪರೀತವಾಗಿ ಹೆಚ್ಚಿದ್ದು ಇದಕ್ಕೇನು ಕಾರಣ ಎಂಬ ಬಗ್ಗೆ ಅಧ್ಯಯನ ನಡೆಯಬೇಕಾಗಿದೆ. ಎಂಆರ್ ಪಿಎಲ್ ಮತ್ತು ಬಿಎಸ್ಎಫ್ ಖರ್ಚಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮಾಲಿನ್ಯ ಸಂಶೋಧನಾ ಸಂಸ್ಥೆಯಿಂದ ಅಧ್ಯಯನ ನಡೆಸಲು ರಾಜ್ಯ ಸರಕಾರಕ್ಕೆ ಶಿಫಾರಸು ಮಾಡುತ್ತೇವೆ ಎಂದು ರಾಜ್ಯ ವಿಧಾನ ಪರಿಷತ್ತಿನ ಭರವಸೆಗಳ ಸಮಿತಿಯ ಅಧ್ಯಕ್ಷ ಬಿ.ಎಂ.ಫಾರೂಕ್ ಹೇಳಿದ್ದಾರೆ.
ಎರಡು ದಿನಗಳ ಕಾಲ ಮಂಗಳೂರಿನ ವಿವಿಧ ಕಾರ್ಖಾನೆಗಳು, ಎಂಆರ್ ಪಿಎಲ್, ಬಿಎಸ್ಎಫ್, ಬೈಕಂಪಾಡಿ ಕೈಗಾರಿಕಾ ಸಂಕೀರ್ಣ, ಜೋಕಟ್ಟೆ, ಸುರತ್ಕಲ್, ಉಳ್ಳಾಲದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಭರವಸೆಗಳ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಇಂದು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಜೋಕಟ್ಟೆ, ಕಾಟಿಪಳ್ಳ, ಬಜ್ಪೆ, ಕುಳಾಯಿ, ಸುರತ್ಕಲ್ ಭಾಗದ ಪ್ರದೇಶಗಳಲ್ಲಿ ಕ್ಯಾನ್ಸರ್, ಚರ್ಮದ ಕಾಯಿಲೆಗಳಿಗೆ ಜನರು ತುತ್ತಾಗಿದ್ದಾರೆ. ಮಕ್ಕಳಿಗೆ ಡಯಾರಿಯಾ ರೀತಿಯ ರೋಗಗಳು ಕಾಣಿಸಿಕೊಂಡಿವೆ. ಅತ್ಯಂತ ಗಂಭೀರ ಸಮಸ್ಯೆ ಇದಾಗಿದ್ದು ಜನರ ಆರೋಗ್ಯದ ವಿಚಾರದಲ್ಲಿ ರಾಜಿ ಮಾಡುವಂತಿಲ್ಲ. ಕುಡಿಯುವ ನೀರು, ವಾಯು ಮಾಲಿನ್ಯ, ಕೈಗಾರಿಕೆಗಳು ಹೊರಸೂಸುವ ಮಾಲಿನ್ಯದಿಂದಾಗಿ ಇಂಥ ಸಮಸ್ಯೆಗಳು ಆಗಿರುವ ಸಾಧ್ಯತೆಯಿದೆ. ಆ ಭಾಗದ ಜನರು ಗಾಳಿಯ ಜೊತೆ ಕಪ್ಪು ಮಸಿ ಬೀಳುತ್ತಿರುವುದನ್ನು, ನೀರಿನಲ್ಲಿ ಆಯಿಲ್ ಮಿಕ್ಸ್ ಇರುವುದನ್ನು ಹೇಳಿದ್ದಾರೆ. ಈ ಬಗ್ಗೆ ಎಂಆರ್ ಪಿಎಲ್ ಕೈಗಾರಿಕಾ ವಲಯದ ಆಸುಪಾಸಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಮಾಹಿತಿ ಪಡೆದುಕೊಂಡಿದ್ದೇವೆ ಎಂದು ಫಾರೂಕ್ ತಿಳಿಸಿದರು.
ಸ್ಥಳೀಯ ಇನ್ಯಾವುದೇ ಕಮಿಟಿಯಿಂದ ಅಧ್ಯಯನ ಮಾಡಿಸಿದಲ್ಲಿ ವರದಿಯನ್ನು ತಿರುಚುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದ ಗೌರವಾನ್ವಿತ ಸಂಸ್ಥೆಯಿಂದಲೇ ಅಧ್ಯಯನ ಆಗಬೇಕು. ಇಲ್ಲಿನ ವಾಯು, ನೀರು, ಭೂಮಿ, ಪರಿಸರದ ಬಗ್ಗೆ ಅಧ್ಯಯನ ನಡೆಸಬೇಕು. ಈಗಾಗಲೇ ಹಲವಾರು ಕೈಗಾರಿಕೆಗಳು ಮಂಗಳೂರಿಗೆ ಬಂದಿದ್ದು, ಭವಿಷ್ಯದಲ್ಲಿ ಇನ್ನಷ್ಟು ಕೈಗಾರಿಕೆಗಳಿಗೆ ಅವಕಾಶ ನೀಡುವ ಮುನ್ನ ಧಾರಣಾ ಸಾಮರ್ಥ್ಯದ ಅಧ್ಯಯನ ಆಗಬೇಕು ಎಂದು ಫಾರೂಕ್ ಹೇಳಿದರು. ಕೈಗಾರಿಕೆಗಳ ಮಾಲಿನ್ಯಗಳು ನದಿಗಳ ಮೂಲಕ ಸಮುದ್ರ ಸೇರುತ್ತಿದ್ದು, ಸಮುದ್ರದಲ್ಲಿ ಮೀನುಗಳ ಸಂತತಿ ನಾಶವಾಗುತ್ತಿದೆ. ಜೋಕಟ್ಟೆ, ತೋಕೂರಿನಲ್ಲಿ ಕಪ್ಪಗಿನ ಮಾಲಿನ್ಯ ನದಿ ಸೇರುತ್ತಿರುವ ಜಾಗಕ್ಕೂ ತೆರಳಿ ಪರಿಶೀಲನೆ ನಡೆಸಿದ್ದೇವೆ. ಕೆಲವು ಕೈಗಾರಿಕೆಗಳಿಂದ ನೇರವಾಗಿ ಸಮುದ್ರಕ್ಕೆ ಆಯಿಲ್ ತ್ಯಾಜ್ಯವನ್ನು ಬಿಡಲಾಗುತ್ತಿದ್ದು ಇದರ ಬಗ್ಗೆ ಅಧಿಕಾರಿಗಳಿಗೆ ಆಕ್ಷೇಪ ಸೂಚಿಸಿದ್ದೇವೆ. ಎಸ್ ಟಿಪಿ ಪ್ಲಾಂಟ್ ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ಫಾರೂಕ್ ಹೇಳಿದರು.
ಐಎಸ್ ಪಿಆರ್ ಎಲ್ ಮತ್ತು ಎಂಆರ್ ಪಿಎಲ್ ಕಾರಣದಿಂದಾಗಿ ದೇಶದ ಅತ್ಯಂತ ಅಪಾಯಕಾರಿ ಪ್ರದೇಶವಾಗಿ ಮಂಗಳೂರು ಬದಲಾಗಿದೆ. ಜಗತ್ತಿನ ಕೆಲವೇ ಕೆಲವು ಪ್ರದೇಶಗಳಲ್ಲಿ ಭೂಗತವಾಗಿ ತೈಲ ಶೇಖರಣೆ ಮಾಡಲಾಗಿದ್ದು, ಭಾರತದಲ್ಲಿ ಎರಡು ಕಡೆ ಇಂತಹ ಕೇಂದ್ರಗಳಿವೆ. ವೈಝಾಗ್ ನಲ್ಲಿ ಒಂದು ಮತ್ತು ಮಂಗಳೂರಿನ ಪಾದೂರು ಮತ್ತು ಬಜ್ಪೆಯಲ್ಲಿ ಎರಡು ಕಡೆ ಸ್ಟೋರೇಜ್ ಇದೆ. ಇಂಥ ಪ್ಲಾಂಟ್ ಇರುವಲ್ಲಿ ಸುರಕ್ಷತೆಯೂ ಗರಿಷ್ಠ ಮಟ್ಟದಲ್ಲಿರಬೇಕು. ಯುದ್ಧಗಳ ಸಂದರ್ಭ ಈ ಜಾಗಕ್ಕೆ ಮಿಸೈಲ್ ದಾಳಿಯಾದರೆ, ಅದರಿಂದ ಆಗುವ ಅನಾಹುತ ಊಹನಾತೀತ. ಆದರೆ ಇಂಥ ಅಪಾಯಗಳನ್ನು ತಡೆಯಬಲ್ಲ ಯಾವುದೇ ಸುರಕ್ಷಾ ವ್ಯವಸ್ಥೆಗಳು ಮಂಗಳೂರಿನಲ್ಲಿ ಇಲ್ಲ. ಈ ಬಗ್ಗೆ ರಾಜ್ಯ ಸರಕಾರಕ್ಕೆ ಭರವಸೆಗಳ ಸಮಿತಿಯಿಂದ ಎಚ್ಚರಿಕೆ ಸೂಚನೆ ನೀಡಲಿದ್ದೇವೆ ಎಂದರು ಫಾರೂಕ್.
ಬಾವಿ ನೀರಿನಲ್ಲಿ ಆಯಿಲ್ ತ್ಯಾಜ್ಯ ಸೋರಿಕೆ
ಇದಲ್ಲದೆ, ಬಜ್ಪೆ, ಪೆರ್ಮುದೆ, ಸುರತ್ಕಲ್ ಭಾಗದ ಕೆಲವು ಕಡೆ ಬಾವಿಗಳಲ್ಲಿ ತೈಲ ಮಿಕ್ಸ್ ಆಗುತ್ತಿರುವುದು ಕಂಡುಬಂದಿದೆ. ಐಎಸ್ ಪಿಆರ್ ಎಲ್ ತೈಲ ಸ್ಟೋರೇಜ್ ನಿಂದ ಆಯಿಲ್ ಸೋರಿಕೆಯಿಂದಾಗಿ ಬಾವಿ ನೀರಿನಲ್ಲಿ ಸೇರುತ್ತಿದೆಯಾ ಅನ್ನುವ ಶಂಕೆಯಿದೆ. ಇದರ ಬಗ್ಗೆ ಸಂಸ್ಥೆಯ ಅಧಿಕಾರಿಗಳಲ್ಲಿ ಕೇಳಿದರೆ, ನಾವು ಸೂಕ್ತ ಭದ್ರತೆ ಮಾಡಿಕೊಂಡಿದ್ದೇವೆ. ಅಂತಹ ಯಾವುದೇ ಸಾಧ್ಯತೆ ಇಲ್ಲ ಎನ್ನುತ್ತಾರೆ. ಆದರೆ ಕುಡಿಯುವ ನೀರಿನಲ್ಲಿ ಆಯಿಲ್ ತ್ಯಾಜ್ಯ ಕಂಡುಬರುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದ್ದು ಇದಕ್ಕೆ ಕಾರಣ ಪತ್ತೆಹಚ್ಚಬೇಕಿದೆ ಎಂದು ಫಾರೂಕ್ ಹೇಳಿದರು.
ಎಂಆರ್ ಪಿಎಲ್ ನಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ ಎಂಬ ಪ್ರಶ್ನೆಗೆ, ಅದರ ಬಗ್ಗೆಯೂ ಮಾಹಿತಿ ಕೇಳಿದ್ದೇವೆ. ಅಲ್ಲದೆ, ಜಿಲ್ಲಾಧಿಕಾರಿಯವರು ಅದರ ಬಗ್ಗೆ ಎಂಆರ್ ಪಿಎಲ್ ಕಡೆಯಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು. ಕರಾವಳಿಯಲ್ಲಿ ಕಡಲ್ಕೊರೆತ ಹೆಚ್ಚುತ್ತಿರುವುದಕ್ಕೆ ಬೇಕಾಬಿಟ್ಟಿ ಮರಳು ತೆಗೆಯುತ್ತಿರುವುದು ಕೂಡ ಕಾರಣ. ನೇತ್ರಾವತಿ, ಫಲ್ಗುಣಿ ನದಿಗಳಲ್ಲಿ ಮತ್ತು ಸಮುದ್ರ ತೀರದಲ್ಲಿ ಮರಳು ತೆಗೆಯುವುದಕ್ಕೆ ಕಡಿವಾಣ ಹಾಕಿದರೆ, ಕಡಲ್ಕೊರೆತಕ್ಕೆ ತಡೆ ಹಾಕಬಹುದು ಎಂದು ಹೇಳಿದರು. ಭರವಸೆಗಳ ಸಮಿತಿಯ ಸದಸ್ಯರಾದ ಶಶೀಲ್ ಜಿ ನಮೋಶಿ, ಕೆಟಿ ಶ್ರೀಕಂಠೇಗೌಡ, ಯುಬಿ ವೆಂಕಟೇಶ್, ರುದ್ರೇಗೌಡ, ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಜಿಪಂ ಸಿಇಓ ಡಾ.ಕುಮಾರ್ ಉಪಸ್ಥಿತರಿದ್ದರು.
Mangalore MRPL, Mcz pollution raise in skin cancer says will handover to for international research says B. M. Farooq.
02-05-25 01:40 pm
Bangalore Correspondent
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 03:10 pm
Mangalore Correspondent
Udupi crime, Attempt, Suhas Shetty Murder: ಉಡ...
02-05-25 12:44 pm
Suhas Shetty Murder, Liquor Ban: ಸುಹಾಸ್ ಶೆಟ್ಟ...
02-05-25 12:23 pm
Suhas Shetty Murder, Bajpe, Mangalore: ಟಾರ್ಗೆ...
02-05-25 03:52 am
Suhas Shetty murder, Mangalore Bandh: ಸುಹಾಸ್...
02-05-25 03:29 am
02-05-25 12:00 pm
Mangalore Correspondent
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm