ಬ್ರೇಕಿಂಗ್ ನ್ಯೂಸ್
21-04-22 11:45 am Mangalore Correspondent ಕರಾವಳಿ
ಮಂಗಳೂರು, ಎ.21: 'ಒಂದು ದೇಶ, ಒಂದೇ ಜನ’ ಎಂಬ ಸಂದೇಶ ಹಿಡಿದು ತನ್ನ 21ನೇ ವಯಸ್ಸಿನಲ್ಲಿ ಏಕಾಂಗಿಯಾಗಿ ಬೈಕಿನಲ್ಲಿ ಭಾರತ ಪರ್ಯಟನೆ ಆರಂಭಿಸಿದ್ದ ಕಾಸರಗೋಡು ಜಿಲ್ಲೆಯ ಕುಂಬಳೆ ನಿವಾಸಿ ಅಮೃತಾ ಜೋಶಿ 60 ದಿವಸಗಳ ಸಂಚಾರ ಪೂರೈಸಿದ್ದಾರೆ.
2022ರ ಫೆಬ್ರವರಿ 5ರಂದು ಕೇರಳದ ಕಲ್ಲಿಕೋಟೆಯಿಂದ ಸಂಚಾರ ಆರಂಭಿಸಿದ್ದ ಅಮೃತಾ ಜೋಶಿ ತಮಿಳುನಾಡು, ಆಂಧ್ರ ಪ್ರದೇಶ, ಒಡಿಸ್ಸಾ, ಪಶ್ಚಿಮ ಬಂಗಾಲ, ಅಸ್ಸಾಂ, ಮೇಘಾಲಯ, ತ್ರಿಪುರಾ, ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಸಿಕ್ಕಿಂ ರಾಜ್ಯಗಳನ್ನು ಸಂದರ್ಶಿಸಿದ್ದಾರೆ. ಈಶಾನ್ಯ ರಾಜ್ಯಗಳ ಭೇಟಿಯ ಜೊತೆಗೆ ನೆರೆಯ ಬಾಂಗ್ಲಾದೇಶ, ಮ್ಯಾನ್ಮಾರ್ಗಳನ್ನು ಕೂಡ ಅಮೃತಾ ಸಂದರ್ಶಿಸಿದ್ದಾರೆ. ಇದುವರೆಗೆ 8,040 ಕಿ.ಮೀ. ಯಾನ ಪೂರೈಸಿದ್ದಾಗಿ ಅಮೃತಾ ತಿಳಿಸಿದ್ದಾರೆ.
ಮುಂದೆ ನೇಪಾಳದಿಂದ ಆರಂಭಿಸಿ ಬಿಹಾರ, ಝಾರ್ಖಂಡ್, ಛತ್ತೀಸ್ಗಢ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ಲಡಾಖ್, ಪಂಜಾಬ್, ಹರಿಯಾಣ, ದಿಲ್ಲಿ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಗೋವಾ, ಕರ್ನಾಟಕ ತಲುಪಲಿದ್ದು ಕೊನೆಯಲ್ಲಿ ಕೇರಳದ ಕಾಸರಗೋಡಿನಲ್ಲಿ ಯಾತ್ರೆಯನ್ನು ಮುಕ್ತಾಯ ಮಾಡಲಿದ್ದಾರೆ.
“ಸಿ.ಆರ್.ಎಫ್ ವುಮೆನ್ ಆನ್ ವೀಲ್ಸ್’ ಎಂಬ ಕ್ಲಬ್ ಸದಸ್ಯೆಯಾಗಿರುವ ಅಮೃತಾ ಜೋಶಿ ಕುಂಬಳೆ ನಿವಾಸಿಗಳಾದ ದಿ| ಅಶೋಕ್ ಜೋಶಿ ಮತ್ತು ಅನ್ನಪೂರ್ಣ ಜೋಶಿ ದಂಪತಿಯ ಕಿರಿಯ ಪುತ್ರಿ. ಅಮೃತಾ ಜೋಶಿ ದೇಶ ಸಂಚಾರಕ್ಕೆ ವಿವಿಧ ಸಂಘಟನೆಗಳ ಬೆಂಬಲವೂ ಸಿಕ್ಕಿದೆ.
ಈಶಾನ್ಯ ರಾಜ್ಯದ ಪ್ರಯಾಣದ ಬಗ್ಗೆ ಎಲ್ಲರೂ ಆ ರಾಜ್ಯಗಳು ಸುರಕ್ಷಿತವಲ್ಲ ಎಂದಿದ್ದರು. ಆದರೆ ಈ ಯಾನದ ಬಳಿಕ ಈಶಾನ್ಯ ರಾಜ್ಯಗಳು ಸುರಕ್ಷಿತ ಸ್ಥಳ ಮತ್ತು ಅಲ್ಲಿನ ಜನರು ಮೃದು ಮನಸ್ಸಿನವರು ಎಂದು ಹೇಳುತ್ತೇನೆ. ಅವರ ಪ್ರೀತಿ ಮತ್ತು ಬೆಂಬಲದಿಂದಾಗಿ ಇಡೀ ಭಾರತ ಯಾನವನ್ನು ಪೂರ್ಣಗೊಳಿಸಲು ನಿರ್ಧರಿಸಿದ್ದೇನೆ ಎಂದು ಅಮೃತಾ ಜೋಶಿ ಹೇಳಿದ್ದಾರೆ.
Youngest solo rider Amrutha Joshi from Kerala to cover northeast by bike.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
19-09-26 10:11 am
HK News Staffer
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
Dk Shivakumar, Mangalore, social media: ಸೋಶಿಯ...
18-09-26 04:11 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am