ಮಂಗಳೂರಿಗೂ ಬಂತು ಮುಂಬೈನ ಶ್ರೀಕೃಷ್ಣ ಬಟಾಟ ವಡಾ ; ಮಂಗಳಾದೇವಿ ಬಳಿ ನವಮಿ ವೆಜ್ ರೆಸ್ಟೋರೆಂಟ್ 

13-04-22 06:34 pm       Mangalore Correspondent   ಕರಾವಳಿ

ಮುಂಬೈನಲ್ಲಿ ಪ್ರಸಿದ್ಧಿ ಪಡೆದಿರುವ  ಶ್ರೀಕೃಷ್ಣ ಬಟಾಟ ವಡ ಈಗ ಮಂಗಳೂರಿಗೂ ಬಂದಿದೆ. ನಗರದ ಮಂಗಳಾದೇವಿ ಬಳಿ ಮುಂಬೈನ ನವಮಿ ಗ್ರೂಪ್ ಸಂಸ್ಥೆಯ ನವಮಿ ವೆಜ್ ರೆಸ್ಟೋರೆಂಟ್ ಆರಂಭವಾಗಲಿದ್ದು ಬಟಾಟ ವಡಾ ಸೇರಿದಂತೆ ಮುಂಬೈ ಮತ್ತು ಕರಾವಳಿಯ ಅಪ್ಪಟ ತಿಂಡಿ ತಿನಿಸುಗಳು ಸಿಗಲಿವೆ. 

ಮಂಗಳೂರು, ಎ.13 : ಮುಂಬೈನಲ್ಲಿ ಪ್ರಸಿದ್ಧಿ ಪಡೆದಿರುವ  ಶ್ರೀಕೃಷ್ಣ ಬಟಾಟ ವಡ ಈಗ ಮಂಗಳೂರಿಗೂ ಬಂದಿದೆ. ನಗರದ ಮಂಗಳಾದೇವಿ ಬಳಿ ಮುಂಬೈನ ನವಮಿ ಗ್ರೂಪ್ ಸಂಸ್ಥೆಯ ನವಮಿ ವೆಜ್ ರೆಸ್ಟೋರೆಂಟ್ ಆರಂಭವಾಗಲಿದ್ದು ಬಟಾಟ ವಡಾ ಸೇರಿದಂತೆ ಮುಂಬೈ ಮತ್ತು ಕರಾವಳಿಯ ಅಪ್ಪಟ ತಿಂಡಿ ತಿನಿಸುಗಳು ಸಿಗಲಿವೆ. 

ಬಟಾಟ ವಡಾ, ಸಾಬುದಾನ ವಡಾ, ಪೋಹಾ ಸಮೋಸ, ಕೊತ್ಮಿರ್ ವಡಾ ಮುಂತಾದ  ಸವಿ, ಸವಿಯಾದ ಮುಂಬೈ ನಗರದ ಫಾಸ್ಟ್ ಫುಡ್ ಗಳನ್ನು ಕೂಡ ಇಲ್ಲಿ ಸವಿಯಬಹುದಾಗಿದೆ. ಎ.15 ರಂದು ನವಮಿ ವೆಜ್ ರೆಸ್ಟೋರೆಂಟ್ ಶುಭಾರಂಭ ಆಗಲಿದ್ದು ಈ ಬಗ್ಗೆ ಮಾಹಿತಿ ನೀಡಲು ನವಮಿ ಗ್ರೂಪ್ ಸಂಸ್ಥೆಯ ನರೇಶ್ ಎನ್. ಕುಡ್ವಾ, ನಂದ ಕುಮಾರ್ ಆರ್. ಕುಡ್ವಾ, ಅಶ್ವಥ್ ಎನ್. ಪೂಜಾರಿ, ಸಿಂಧು ಬಾಳಿಗಾ, ಮೀನಾಕ್ಷಿ ಬಾಳಿಗಾ ಸುದ್ದಿಗೋಷ್ಟಿ ಕರೆದಿದ್ದರು. ಹೊಟೇಲ್ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. 

ನವಮಿ ವೆಜ್ ರೆಸ್ಟೋರೆಂಟ್ ವೈಶಿಷ್ಟ್ಯಗಳೇನು?

  • ಗ್ರಾಹಕರಿಗೆ ಕುಳಿತುಕೊಳ್ಳಲು ಆರಾಮದಾಯಕ 150 ಆಸನ ಸಾಮರ್ಥ್ಯದ ಹವಾನಿಯಂತ್ರಿತ ವ್ಯವಸ್ಥೆ 
  • ಖಾಸಗಿ ವಾಹನ ಪಾರ್ಕ್ ಮಾಡಲು ವಿಶಾಲ ಪಾರ್ಕಿಂಗ್ ವ್ಯವಸ್ಥೆ 
  • ಸ್ವಂತ ವಾಹನದಲ್ಲೇ ಕುಳಿತು ಸ್ವಾದಿಷ್ಟ ಖಾದ್ಯಗಳನ್ನ ಅಸ್ವಾದಿಸಲು ಡ್ರೈವ್-ಇನ್ ಸೇವೆ 
  • ಸ್ವಸಹಾಯ ಪದ್ಧತಿಯಡಿ ಮುಂಬೈ ಶೈಲಿಯ ಕೋಲ್ಡ್ ಪಾನಿ ಪುರಿ, ಪಾವ್ ಬಾಜಿ ಸವಿಯಲು ಪ್ರತ್ಯೇಕ ಫಾಸ್ಟ್ ಫುಡ್ ವಿಭಾಗ 
  • ಶೀಘ್ರದಲ್ಲೇ 40-60 ಆಸನ ಸಾಮರ್ಥ್ಯದ ಮಿನಿ ಪಾರ್ಟಿ ಹಾಲ್ ಕೂಡ ಬರಲಿದೆ 

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದ್ರೆ ತಾಲೂಕಿನ ಬೆಳುವಾಯಿಯವರಾದ ರಾಮರಾಯ ಕುಡ್ವಾ ಅವರು 1916ನೇ ಇಸವಿಯಲ್ಲಿ ದೂರದ ಮುಂಬೈಗೆ ತೆರಳಿ ವಿವಿಧ ರೆಸ್ಟೋರೆಂಟ್ಗಳಲ್ಲಿ ಕೆಲಸ ಮಾಡಿ ಹೊಟೇಲ್ ಉದ್ಯಮದ ಬಗ್ಗೆ ತಿಳಿದುಕೊಂಡು 1943ರಲ್ಲಿ   ಮುಂಬೈನ ದಾದರ್ ವೆಸ್ಟ್ ನಲ್ಲಿ ಶ್ರೀಕೃಷ್ಣ ಬಟಾಟ ವಡಾ ಎಂಬ ಹೆಸರಲ್ಲಿ ಹೊಟೇಲ್ ಉದ್ಯಮ ಆರಂಭಿಸಿದ್ದರು. ಮುಂದೆ ಇದೇ ಸಂಸ್ಥೆ ಚಬಿಲ್ ದಾಸ್ ಗಲ್ಲಿ ಬಟಾಟ ವಡ ಎಂದು ಜನಪ್ರಿಯತೆ ಗಳಿಸಿತ್ತು. 1974ರಲ್ಲಿ ನಂದಕುಮಾರ್ ಕುಡ್ವಾ ಅವರ ನೇತೃತ್ವದಲ್ಲಿ ಸಂಸ್ಥೆಯು ವಿವಿಧ ರೀತಿಯ ಉದ್ಯಮಗಳಿಗೆ ವಿಸ್ತರಣೆಯಾಗಿತ್ತು. ಇದೀಗ ನರೇಶ್ ಕುಡ್ವ ಉದ್ದಿಮೆ ಪರಂಪರೆಯನ್ನು ಮೂರನೇ ತಲೆಮಾರಿನಲ್ಲಿ ಜವಾಬ್ದಾರಿ ಹೊತ್ತು ಕೊಂಡಿದ್ದಾರೆ.

ಸುಮಾರು 80 ವರ್ಷಗಳ ಹಿಂದಿನ ತಲೆಮಾರಿನ ಮೂಲ ಪಾಕ ಶಾಸ್ತ್ರದ ಪ್ರಕಾರವೇ ಈಗಲೂ ವಡಾಗಳನ್ನು ತಯಾರಿಸುತ್ತೇವೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಲ್ಲ. ಉತ್ತಮ, ಶುಚಿ ರುಚಿಯಾಗಿಯೇ ಆಹಾರವನ್ನು ನೀಡುತ್ತಿದ್ದೇವೆ ಎಂದು ನರೇಶ್ ಎನ್ ಕುಡ್ವಾ ಹೇಳಿದ್ದಾರೆ. ‌ನಮ್ಮ ಮೂಲ ಶಾಖೆ ಮುಂಬೈನ ದಾದರ್ ನಲ್ಲಿ ಶ್ರೀಕೃಷ್ಣ ಬಟಾಟ ವಡಾ ಎನ್ನುವುದು ನೋಂದಾಯಿತ ಸಂಸ್ಥೆಯಾಗಿದ್ದು ಬಟಾಟ ವಡಾ ನಮ್ಮ ಬ್ರಾಂಡ್ ಆಗಿ ಬೆಳೆದಿದೆ ಎಂದು ನಂದಕುಮಾರ್ ಕುಡ್ವಾ ಹೇಳಿದ್ದಾರೆ.

Mumbai's most popular based Veg Restaurant Navmi to open it's branch now in Mangalore at Mangaladevi Temple road on 15th April.